‘iPhone ಬಾಯ್‌ಫ್ರೆಂಡ್ ಕೊಡಿಸಿದ್ದಾ’?: ಹುಡುಗಿಯರು ಸ್ವಂತ ಹಣದಲ್ಲಿ ಏನು ಖರೀದಿಸುವುದಿಲ್ವಾ? ಸಿಟ್ಟಾದ ಬೆಂಗಳೂರಿನ ಯುವತಿ
ಆರ್ಥಿಕವಾಗಿ ಸದೃಢರಾದರೂ ಮಹಿಳೆಯರ ದುಬಾರಿ ವಸ್ತುಗಳ ಖರೀದಿಯನ್ನು ಸಮಾಜವು ಪುರುಷನ ಯಶಸ್ಸಿಗೆ ಹೋಲಿಸುತ್ತದೆ. ಇತ್ತೀಚೆಗೆ ಐಫೋನ್ ಖರೀದಿಸಿದ ಬೆಂಗಳೂರಿನ ಅನು ಅನುಭವಿಸಿದ ಕಹಿ ಪ್ರಸಂಗ ಇದಕ್ಕೆ ಸಾಕ್ಷಿ. ತಮ್ಮ ಸ್ವಂತ ದುಡಿಮೆಯಿದ್ದರೂ, ಬಾಯ್‌ಫ್ರೆಂಡ್ ಕೊಡಿಸಿದ್ದಾನೆಯೇ ಎಂಬ ಪ್ರಶ್ನೆ ಎದುರಿಸಿದರು. ಈ ಪಿತೃಪ್ರಧಾನ ಮನಸ್ಥಿತಿ ಬದಲಾಗಬೇಕೆಂಬುದು ಅನು ಅವರ ಆಶಯ. ಮಹಿಳೆಯರ ಸ್ವಾವಲಂಬನೆಯನ್ನು ಗುರುತಿಸುವುದು ಸಮಾಜಕ್ಕೆ ಅಗತ್ಯ.

ಬೆಂಗಳೂರು, ಫೆ.24: ಈ ಹುಡುಗಿಯರು ಹೊಸ ಫೋನ್, ಬಟ್ಟೆ, ಅಥವಾ ಯಾವುದೇ ವಸ್ತು ತೆಗೆದುಕೊಂಡರು ಯಾರೂ ಗಿಫ್ಟ್ ಕೊಟ್ಟದ್ದು ಎಂದು ಪ್ರಶ್ನೆಗಳು ಬರುತ್ತದೆ. ಆರ್ಥಿಕವಾಗಿ ಎಷ್ಟೇ ಸದೃಢರಾದರೂ, ಅವರ ದುಬಾರಿ ವಸ್ತುಗಳ ಖರೀದಿಯನ್ನು ಸಮಾಜವು ಇಂದಿಗೂ ಅವರ ಜೀವನದಲ್ಲಿರುವ ಪುರುಷನ ಯಶಸ್ಸಿಗೆ ಹೋಲಿಸುತ್ತಾರೆ. ಇದೀಗ ಮಹಿಳೆಯರು ಸ್ವಂತವಾಗಿ ಏನನ್ನು ಖರೀದಿ ಮಾಡುವುದಿಲ್ಲ ಎಂಬ ಪ್ರಶ್ನೆ ಎದ್ದಿದೆ. ಈ ಪ್ರಶ್ನೆಯನ್ನು ಮಾಡಿರುವುದು ಬೆಂಗಳೂರಿನ ಅನು ಎಂಬುವವರು. ಅನು ಅವರು ಇತ್ತೀಚೆಗೆ ತಮ್ಮ ಸ್ವಂತ ದುಡಿಮೆಯ ಹಣದಿಂದ ಹೊಸ iPhone ಒಂದನ್ನು ಖರೀದಿಸಿದ್ದರು. ಅದನ್ನು ನೋಡಿದ ಅವರ ಐದು ವರ್ಷಗಳ ಹಳೆಯ ಸ್ನೇಹಿತ, “ಸಖತ್ ಆಗಿದೆ ಗುರು, ನಿನ್ನ ಬಾಯ್‌ಫ್ರೆಂಡ್ ಕೊಡಿಸಿದ್ದಾ?” ಎಂದು ಕೇಳಿದ್ದಾನೆ.
ಗೆಳಯನ ಮಾತಿಗೆ ಸಿಟ್ಟಾದ ಅನು, ಅಲ್ಲ ನಿನಗೆ ಯಾಕೆ ನಾನು ಖರೀದಿ ಮಾಡಿರಬಹುದು ಎಂದು ಅನ್ನಿಸಿಲ್ಲ ಎಂದು ಕೇಳಿದ್ದಾರೆ. ಅದಕ್ಕೆ ಆ ಸ್ನೇಹಿತ, “ನಿನ್ನವನು ಶ್ರೀಮಂತನಿದ್ದಾನೆ, ನೀನು ಅವನನ್ನು ಆರಿಸಿಕೊಂಡಿದ್ದೇ ಅದಕ್ಕೆ ಅಲ್ವಾ?” ಎಂದು ಉಡಾಫೆಯಿಂದ ಉತ್ತರಿಸಿದ್ದಾನೆ. ಅನು ಅವರು ಹೇಳಿರುವ ಪ್ರಕಾರ, ಅವನಿಗೆ ಕೆಲಸ ಇಲ್ಲದಾಗ, ಹೋದ ಕಡೆಯಲ್ಲಾ ಇವರೇ ಬಿಲ್ ಪಾವತಿಸುತ್ತಿದ್ದರು. ಇಷ್ಟಾದರೂ ಆತ ಮಹಿಳೆಯ ಸ್ವಾವಲಂಬನೆಯನ್ನು ಒಪ್ಪದೆ, ಬಾಯ್‌ಫ್ರೆಂಡ್ ಶ್ರೀಮಂತಿಕೆ ಬಗ್ಗೆ ಮಾತನಾಡಿದ್ದು ಅನು ಅವರಿಗೆ ಬೇಸರ ಉಂಟು ಮಾಡಿದೆ.
ಇದನ್ನೂ ಓದಿ: ಬೆಂಗಳೂರು ಜೀವನ ಇಷ್ಟೊಂದು ದುಬಾರಿನಾ?; ತಿಂಗಳ ಖರ್ಚು 70 ಸಾವಿರ ರೂ., ಪಟ್ಟಿ ಬಿಚ್ಚಿಟ್ಟ ಯುವಕ
ಇಲ್ಲಿದೆ ವೈರಲ್ ಪೋಸ್ಟ್;
We both were dating when I bought my first iPhone. I met a friend two days after and his first statement was “Sahi hai bhai, bande ne phone dila diya”
I looked at him curiously and asked that why did he think it’s a gift from my guy and not something I have brought. His reply… pic.twitter.com/w4XjBGFhOQ
— Anu (@Escapeplace__) February 23, 2026
ನಮ್ಮ ಸಾಧನೆಗಳ ಹಿಂದೆ ಒಬ್ಬ ಪುರುಷನಿದ್ದಾನೆ ಎಂದು ಬಿಂಬಿಸುವುದು ಯಾವಾಗ ನಿಲ್ಲುತ್ತದೆ? ಎಂದು ಪ್ರಶ್ನೆ ಮಾಡಿದ್ದಾರೆ. ಅನು ಅವರ ಈ ಪೋಸ್ಟ್ 45,000 ಕ್ಕೂ ಹೆಚ್ಚು ವೀಕ್ಷಣೆ ಪಡೆದಿದ್ದು, ಇವರ ಈ ಪೋಸ್ಟ್ಗೆ ಮಿಶ್ರ ಪ್ರಕ್ರಿಯೆಗಳು ಬಂದಿದೆ. “ಮಹಿಳೆಯರು ಮನೆ, ಕಾರು ಕೊಂಡರೂ ಜನರು ಅದನ್ನು ಗಂಡ ಅಥವಾ ತಂದೆ ಕೊಡಿಸಿದ್ದು ಎಂದುಕೊಳ್ಳುತ್ತಾರೆ. ಈ ಪಿತೃಪ್ರಧಾನ ಮನಸ್ಥಿತಿ ಬದಲಾಗಬೇಕು” ಎಂದು ಮಹಿಳೆಯರು ಬೆಂಬಲ ಹೇಳುತ್ತಾರೆ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. “ಇತ್ತೀಚಿನ ದಿನಗಳಲ್ಲಿ ಅನೇಕ ಯುವತಿಯರು ದುಬಾರಿ ಉಡುಗೊರೆಗಳನ್ನು ನಿರೀಕ್ಷಿಸುತ್ತಾರೆ, ಹಾಗಾಗಿ ಸ್ನೇಹಿತ ಹಾಗೆ ಹೇಳಿರಬಹುದು” ಎಂದು ಮತ್ತೊಬ್ಬರು ಹೇಳಿದ್ದಾರೆ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
