
ಬೆಂಗಳೂರು, ಡಿ.24: ಇಂದು (ಡಿ.24) ಮತ್ತು ನಾಳೆ (ಡಿ.25) ಬೆಂಗಳೂರಿನಲ್ಲಿ ಕ್ರಿಸ್‌ಮಸ್ (Bengaluru Christmas traffic) ಹಬ್ಬದ ಸಂಭ್ರಮ ಜೋರಾಗಿ ಇರುತ್ತದೆ. ಬೆಂಗಳೂರಿನ ಕೆಲವೊಂದು ಭಾಗದಲ್ಲಿ ಅದ್ದೂರಿಯಾಗಿ ಕ್ರಿಸ್‌ಮಸ್ ಆಚರಣೆ ಮಾಡಿಕೊಳ್ಳುತ್ತಾರೆ. ಇಂದಿನಿಂದಲೇ ಬೆಂಗಳೂರಿನಲ್ಲಿ ಆಚರಣೆ ಶುರುವಾಗುತ್ತದೆ. ಜತೆಗೆ ನಾಳೆ ಅಂದರೆ ಡಿ.25ರಂದು ರಜೆ ಇರುವ ಕಾರಣ, ಬೆಂಗಳೂರಿನ ಬೀದಿಗಳು ಜನರಿಂದ ತುಂಬಿರುತ್ತದೆ. ಹೀಗಾಗಿ ವಾಹನ, ಜನ ದಟ್ಟಣೆ ಕೂಡ ಹೆಚ್ಚಾಗಿರುತ್ತದೆ. ಅದಕ್ಕಾಗಿ ಸಂಚಾರಿ ಪೊಲೀಸ್ ಇಲಾಖೆ ಸಂಚಾರ ಸಲಹೆಯನ್ನು ನೀಡಿದೆ.
ಪುಲಕೇಶಿನಗರದ ಹೋಲಿ ಗೋಸ್ಟ್ ಚರ್ಚ್ ಮತ್ತು ಮಹಾದೇವಪುರದ ಫೀನಿಕ್ಸ್ ಮಾಲ್, ವಿಆರ್ ಮಾಲ್ ಮತ್ತು ನೆಕ್ಸಸ್ ಶಾಂತಿನಿಕೇತನ ಬಳಿ ಭಾರಿ ಜನದಟ್ಟಣೆ ಆಗುವ ಸಾಧ್ಯತೆಗಳು ಇದೆ. ಅದಕ್ಕಾಗಿ ವಾಹನ ಚಾಲಕರು ತಮ್ಮ ಪ್ರಯಾಣವನ್ನು ಈ ರಸ್ತೆಗಳಲ್ಲಿ ತಪ್ಪಿಸುವುದು ಸೂಕ್ತ ಎಂದು ಹೇಳಲಾಗಿದೆ. ಪೊಲೀಸರ ಪ್ರಕಾರ, ಹಬ್ಬ ಇರುವ ಕಾರಣ ಜನದಟ್ಟಣೆ ಆಗುವ ಸಾಧ್ಯತೆ ಇದೆ. ಈ ಸಮಯದಲ್ಲಿ ವಾಹನ ದಟ್ಟಣೆಯನ್ನು ಕಡಿಮೆ ಮಾಡಲು ಹಾಗೂ ಪಾದಚಾರಿಗಳ ಸುರಕ್ಷತೆಗಾಗಿ, ಸುಗಮ ವಾಹನ ಸಂಚಾರಕ್ಕಾಗಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಡಿಸೆಂಬರ್ 24ರ ಸಂಜೆಯಿಂದ ಡಿಸೆಂಬರ್ 25 ರ ಮಧ್ಯಾಹ್ನದವರೆಗೆ ಹೋಲಿ ಗೋಸ್ಟ್ ಚರ್ಚ್‌ನಲ್ಲಿ ದೊಡ್ಡ ಜನ ದಟ್ಟಣೆ ಆಗುವ ನಿರೀಕ್ಷೆಯಿದೆ, ಹಾಗಾಗಿ ಕೆಲವೊಂದು ಸಂಚಾರ ಸಲಹೆಗಳನ್ನು ಇಲ್ಲಿ ನೀಡಲಾಗಿದೆ.
ಡಿಸೆಂಬರ್ 24 ರಂದು ಸಂಜೆ 7 ಗಂಟೆಯಿಂದ ಡಿಸೆಂಬರ್ 25 ರಂದು ಮಧ್ಯಾಹ್ನ 12 ರವರೆಗೆ ಜಾನ್ ಆರ್ಮ್‌ಸ್ಟ್ರಾಂಗ್ ರಸ್ತೆ ಜಂಕ್ಷನ್ ಮತ್ತು ಕುಕ್ಸನ್ ರಸ್ತೆ ಜಂಕ್ಷನ್ ನಡುವಿನ ಸಂಚಾರಕ್ಕೆ ಡೇವಿಸ್ ರಸ್ತೆಯನ್ನು ಮುಚ್ಚಲಾಗುವುದು.
ಡೇವಿಸ್ ರಸ್ತೆಯಿಂದ HM ರಸ್ತೆಯ ಕಡೆಗೆ ಚಲಿಸುವ ವಾಹನಗಳು:
– ಜಾನ್ ಆರ್ಮ್‌ಸ್ಟ್ರಾಂಗ್ ರಸ್ತೆ ಜಂಕ್ಷನ್‌ನಲ್ಲಿ ಬಲಕ್ಕೆ ತಿರುಗಿ.
– ಅಲ್ಲಿಂದ ನೇರ ಹೋಗಿ ವಿವಿಯಾನಿ ರಸ್ತೆಯಲ್ಲಿ ಎಡಕ್ಕೆ ತಿರುಗಿ.
– ಅಲ್ಲಿಂದ ಕುಕ್ಸನ್ ರಸ್ತೆಗೆ ಎಡಕ್ಕೆ ತಿರುಗಿ.
– ಇಲ್ಲಿಂದ ಡೇವಿಸ್ ರಸ್ತೆಗೆ ಮತ್ತೆ ಸೇರಿ HM ರಸ್ತೆಯ ಕಡೆಗೆ ಹೋಗಿ.
#ಸಂಚಾರಸಲಹೆ#TrafficAdvisory @DgpKarnataka @KarnatakaCops @CPBlr @Jointcptraffic @BlrCityPolice @blrcitytraffic @acpwfieldtrf @acpeasttraffic @mahadevapuratrf @halairporttrfps @KRPURATRAFFIC @wftrps @bwaditrafficps @ftowntrfps @jbnagartrfps @halasoortrfps @kghallitrfps… pic.twitter.com/woLiRDozYP
— DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ (@DCPTrEastBCP) December 23, 2025
ಎಲ್ಲಾ ವಾಹನಗಳ ಪಾರ್ಕಿಂಗ್ ಅನ್ನು ಈ ಕೆಳಗಿನ ಸ್ಥಳಗಳಲ್ಲಿ ನಿಷೇಧಿಸಲಾಗುವುದು:
ಡೇವಿಸ್ ರಸ್ತೆ
ಬಾಣಸವಾಡಿ ಮುಖ್ಯ ರಸ್ತೆ
ವೀಲರ್ ರಸ್ತೆ
ಸೇಂಟ್ ಜಾನ್ಸ್ ಚರ್ಚ್ ರಸ್ತೆ
ಹೈನ್ಸ್ ರಸ್ತೆ
ಪ್ರೊಮೆನೇಡ್ ರಸ್ತೆ
ಇದನ್ನೂ ಓದಿ: ನ್ಯೂ ಇಯರ್ ಹೆಸರಲ್ಲಿ ರೇವ್ ಪಾರ್ಟಿ ಮಾಡಿದ್ರೆ ಹುಷಾರ್! ಬೆಂಗಳೂರಿನಾದ್ಯಂತ ಖಾಕಿ ಸರ್ಪಗಾವಲು
ಡಿಸೆಂಬರ್ 24 ಅಂದರೆ ಇಂದು ಮಧ್ಯಾಹ್ನ 12 ರಿಂದ ರಾತ್ರಿ 11 ರವರೆಗೆ ಫೀನಿಕ್ಸ್ ಮಾಲ್, ವಿಆರ್ ಮಾಲ್ ಮತ್ತು ನೆಕ್ಸಸ್ ಶಾಂತಿನಿಕೇತನ ಬಳಿ ಭಾರಿ ಜನಸಂದಣಿ ಉಂಟಾಗುವ ನಿರೀಕ್ಷೆಯಿದೆ. ಹಾಗಾಗಿ ಈ ಪ್ರದೇಶದಲ್ಲಿ ಸಂಚಾರ ಮತ್ತು ಪಾರ್ಕಿಂಗ್ ನಿರ್ಬಂಧ ಮಾಡಲಾಗಿದೆ.
– ಐಟಿಪಿಎಲ್ ಮುಖ್ಯ ರಸ್ತೆ (ಎರಡೂ ಬದಿಗಳು)
– ಶೆಲ್ ಪೆಟ್ರೋಲ್ ಬಂಕ್, ಬಿ ನಾರಾಯಣಪುರದಿಂದ ಗರುಡಾಚಾರ್ಪಾಳ್ಯ (ಡೆಕಾಥ್ಲಾನ್ ಹತ್ತಿರ)
– ಮೆಡಿಕೇರ್ ಆಸ್ಪತ್ರೆಯಿಂದ ಬಿಗ್ ಬಜಾರ್ ಜಂಕ್ಷನ್ ವರೆಗೆ
ಫೀನಿಕ್ಸ್ ಮಾಲ್:
ಡ್ರಾಪ್: ಐಟಿಪಿಎಲ್ ಮುಖ್ಯ ರಸ್ತೆಯಲ್ಲಿರುವ ಬೆಸ್ಕಾಂ ಕಚೇರಿಯ ಹತ್ತಿರ.
ಪಿಕಪ್ ಸ್ಥಳ: ಲೌರಿ ಜಂಕ್ಷನ್ ಹತ್ತಿರ
ನೆಕ್ಸಸ್ ಶಾಂತಿನಿಕೇತನ:
ಡ್ರಾಪ್: ರಾಜಪಾಳ್ಯ ಹತ್ತಿರ
ಪಿಕಪ್: ಆಸ್ಟರ್ ಆಸ್ಪತ್ರೆ ಹತ್ತಿರ
#ಸಂಚಾರಸಲಹೆ#TrafficAdvisory @DgpKarnataka @KarnatakaCops @CPBlr @Jointcptraffic @BlrCityPolice @blrcitytraffic @acpwfieldtrf @acpeasttraffic @mahadevapuratrf @halairporttrfps @KRPURATRAFFIC @wftrps @bwaditrafficps @ftowntrfps @jbnagartrfps @halasoortrfps @kghallitrfps… pic.twitter.com/1sV8hUBUMn
— DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ (@DCPTrEastBCP) December 23, 2025
ಹೂಡಿಯಿಂದ ಫೀನಿಕ್ಸ್ ಮಾಲ್ ಕಡೆಗೆ ಹೋಗುವ ವಾಹನಗಳು ಕಾಮಧೇನು ನಗರದಲ್ಲಿ ಯು-ಟರ್ನ್ ತೆಗೆದುಕೊಂಡು, ಶೆಲ್ ಪೆಟ್ರೋಲ್ ಬಂಕ್‌ನಲ್ಲಿ ಎಡಕ್ಕೆ ತಿರುಗಿ, ರೈಲ್ವೆ ರಸ್ತೆಯಲ್ಲಿ ಸಾಗಿ ಹಿಂಭಾಗದ ಗೇಟ್ ಮೂಲಕ ಪ್ರವೇಶಿಸಬೇಕು. ಕೆ.ಆರ್. ಪುರಂ ರೈಲು ನಿಲ್ದಾಣದಿಂದ ಬರುವ ವಾಹನಗಳು ಶೆಲ್ ಪೆಟ್ರೋಲ್ ಬಂಕ್‌ನಲ್ಲಿ ಎಡಕ್ಕೆ ತಿರುಗಿ, ರೈಲ್ವೆ ರಸ್ತೆಯನ್ನು ಬಳಸಿ, ಹಿಂಭಾಗದ ಪ್ರವೇಶ ದ್ವಾರದ ಮೂಲಕ ಫೀನಿಕ್ಸ್ ಮಾಲ್ ಪ್ರವೇಶಿಸಲು ಸೂಚಿಸಲಾಗಿದೆ. ಇದರ ಜತೆಗೆ ಖಾಸಗಿ ವಾಹನಕ್ಕಿಂತ ಸಾರ್ವಜನಿಕ ಸಾರಿಗೆಯನ್ನು ಬಳಸಬೇಕು ಮತ್ತು ಸಲಹೆಗಳನ್ನು ಪಾಲಿಸಬೇಕು ಎಂದು ಸಂಚಾರ ಪೊಲೀಸರು ಕೋರಿದ್ದಾರೆ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:53 pm, Wed, 24 December 25