“ನಾನು ಶಿಮ್ಲಾದಲ್ಲಿ ಇಲ್ಲ, ಕೋರಮಂಗಲದಲ್ಲಿ ಇದ್ದೇನೆ”: ಮತ್ತೆ ವೈರಲ್​​​​​ ಆಯಿತು ಬೆಂಗಳೂರಿನ ಹವಾಮಾನ

ಬೆಂಗಳೂರಿನಲ್ಲಿ ಚಳಿ ಹೆಚ್ಚಾಗಿದ್ದು, ಜನ ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಪೂರವ್ ಎಂಬ ಯುವಕ ಚಳಿಯ ಬಗ್ಗೆ ಹಾಸ್ಯಮಯ ವಿಡಿಯೋವೊಂದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅವರು ಹಾಕಿಕೊಂಡಿರುವ ಉಡುಪು ಬಗ್ಗೆಯೂ ಹೇಳಿದ್ದಾರೆ. ಜತೆಗೆ ತನ್ನ ಸುತ್ತಮುತ್ತಲಿನ ಜನರಿಗೆ ಶೀತ ಆಗಿದೆ. ಅದಕ್ಕಾಗಿ ನಾನು ಸಿರಪ್ ಕುಡಿಯುತ್ತಿರುವುದನ್ನು ತಮಾಷೆಯಾಗಿ ಹೇಳಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಇದಕ್ಕೆ ಭಾರಿ ಪ್ರತಿಕ್ರಿಯೆ ನೀಡಿದ್ದಾರೆ.

ನಾನು ಶಿಮ್ಲಾದಲ್ಲಿ ಇಲ್ಲ, ಕೋರಮಂಗಲದಲ್ಲಿ ಇದ್ದೇನೆ: ಮತ್ತೆ ವೈರಲ್​​​​​ ಆಯಿತು ಬೆಂಗಳೂರಿನ ಹವಾಮಾನ
ವೈರಲ್​​​ ವಿಡಿಯೋ

Updated on: Dec 02, 2025 | 10:08 AM

ಬೆಂಗಳೂರು, ಡಿ.2: ಬೆಂಗಳೂರಿನಲ್ಲಿ (Bengaluru) ಚಳಿ ಶುರುವಾಗಿದೆ. ಮನೆಯಿಂದ ಜನ ಹೊರೆಗೆ ಬರಲು ಮನಸ್ಸು ಮಾಡಿಲ್ಲ. ರಾಜಧಾನಿಯ ಜನ ಮಂಜಿನ ಜತೆಗೆ ಬದುಕುತ್ತಿದ್ದಾರೆ. ಇನ್ನು ಈ ಚಳಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗುತ್ತಿದೆ. ಬೆಂಗಳೂರಿನಲ್ಲಿ ಇಂತಹ ವಾತಾವರಣವನ್ನು ಯಾವತ್ತೂ ನೋಡಿ ಎಂಬ ಮಿಮ್ಸ್​​​ಗಳು ಕೂಡ ವೈರಲ್​​ ಆಗಿದೆ. ಇದೀಗ ಇಲ್ಲೊಂದು ವಿಡಿಯೋ ಸೋಶಿಯಲ್​​ ಮೀಡಿಯಾ ತುಂಬಾ ತಮಾಷೆಯಾಗಿ ವೈರಲ್​​ ಆಗಿದೆ. ಪೂರವ್ ಎಂಬ ಯುವಕ ಚಳಿಯ ಬಗ್ಗೆ ಹಾಸ್ಯಮಯ ವಿಡಿಯೋವನ್ನು ಇನ್‌ಸ್ಟಾಗ್ರಾಮ್​​ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ಸಾವಿರಾರು ನೆಟ್ಟಿಗರು ಕಮೆಂಟ್​​ ಮಾಡಿದ್ದಾರೆ.

ಈ ವಿಡಿಯೋದಲ್ಲಿ ಹೀಗೆ ಹೇಳಿದ್ದಾರೆ. “ಹಾಯ್, ನಾನು ಶಿಮ್ಲಾ ಅಥವಾ ಹಿಮಾಚಲ ಪ್ರದೇಶದಲ್ಲಿ ಇಲ್ಲ, ಬೆಂಗಳೂರಿನ ಕೋರಮಂಗಲದಲ್ಲಿ ಇದ್ದೇನೆ. ನನಗೆ ಸಾಯುವವಷ್ಟು ಚಳಿಯಾಗುತ್ತಿದೆ. ನಾನು ಸ್ವೆಟರ್, ಮೇಲೆ ಸ್ವೆಟರ್, ಜಾಕೆಟ್ ಮತ್ತು ತಲೆಯ ಮೇಲೆ ಹೂಡಿ ಧರಿಸಿದ್ದೇನೆ. ಬೆಂಗಳೂರಿನ ಹವಾಮಾನ ಯಾಕಿಷ್ಟು ಬದಲಾವಣೆ ಆಗಿದೆ. ನನಗೆ ಅರ್ಥವಾಗುತ್ತಿಲ್ಲ. ದಿನದ ಕೆಲಸಗಳನ್ನು ಕೂಡ ಈ ಚಳಿಯ ಜತೆಗೆ ಎದುರಿಸಬೇಕು. ಈಗ ನಾನು ಹಾಲು ತರಲು ಹೀಗೆ ಹೋಗುತ್ತಿದ್ದೇನೆ. ಇದರ ಜತೆಗೆ ಬೆಂಗಳೂರಿನಲ್ಲಿ ಶೀತದ ವಾತಾವರಣ ಉಂಟಾಗಿದೆ. ಹಲವು ಜನ ಈಗಾಗಲೇ ಶೀತದಿಂದ ಬಳಲುತ್ತಿದ್ದಾರೆ. ನನ್ನ ಅಕ್ಕ-ಪಕ್ಕ ಜನರಿಗೂ ಶೀತ ಆಗಿದೆ. ಅದು ನನಗೆ ಬರಬಾರದು ಎಂದು ಅವರ ಹತ್ತಿರ ಕೂಡ ಹೋಗುತ್ತಿಲ್ಲ. ಭಯದಿಂದ ನಾನು ಕೆಮ್ಮಿನ ಸಿರಪ್ ಕುಡಿಯುತ್ತಿದ್ದೇನೆ ಮತ್ತು ಡೋಲೋ 650 ತೆಗೆದುಕೊಳ್ಳುತ್ತಿದ್ದೇನೆ” ಎಂದು ತಮಾಷೆಯಾಗಿ ಈ ಹೇಳಿದ್ದಾರೆ.

ಇದನ್ನೂ ಓದಿ: ನಾಲ್ಕು ಗಂಟೆಯ ಮದ್ವೆಗೆ ಲಕ್ಷ ಲಕ್ಷ ಹಣ ಖರ್ಚು ಮಾಡುವ ಅಗತ್ಯ ಏನಿದೆ? ಇದು ವಾಸ್ತವಿಕ ಸತ್ಯ

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:


ಇನ್ನು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಕೂಡ ಕಮೆಂಟ್​ ಮಾಡಿದ್ದಾರೆ. ಈ ವಿಡಿಯೋ 8 ಲಕ್ಷಕ್ಕೂ ಹೆಚ್ಚು ವಿಕ್ಷಣೆಯನ್ನು ಪಡೆದುಕೊಂಡಿದೆ. ಒಬ್ಬರು ಇದೊಂದು ಬೆಂಗಳೂರಿನ ಅತ್ಯಂತ ಜನಪ್ರಿಯ ವಿಷಯ ಎಂದು ಹೇಳಿದ್ದಾರೆ. ಇನ್ನೊಬ್ಬರು ಈ ಚಳಿಗೆ ಬುರ್ರಿಟೋದಂತೆ ಸುತ್ತಿಕೊಂಡು ಹೊರಗೆ ಬರುತ್ತಿದ್ದಾರೆ ಎಂದು ಹೇಳಿದ್ದಾರೆ. ಇನ್ನೊಬ್ಬ ವೀಕ್ಷಕರು ಕಚೇರಿಯಿಂದ ಚಳಿಗಾಲದ ಭತ್ಯೆ ಬೇಕು ಎಂದು ಹೇಳಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:07 am, Tue, 2 December 25