2025ರಲ್ಲಿ 47 ಲಕ್ಷ ರೂ. ಖರ್ಚು ಮಾಡಿದ ಬೆಂಗಳೂರಿನ ದಂಪತಿ

ಬೆಂಗಳೂರಿನ ಕಂಟೆಂಟ್ ಕ್ರಿಯೇಟರ್ ದಂಪತಿ ಪ್ರಕೃತಿ ಅರೋರಾ ಮತ್ತು ಆಶಿಶ್ ಕುಮಾರ್, 2025ರ ತಮ್ಮ ವಾರ್ಷಿಕ ವೆಚ್ಚಗಳ ವಿವರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಬರೋಬ್ಬರಿ 47 ಲಕ್ಷ ರೂಪಾಯಿ ಖರ್ಚು ಮಾಡಿದ್ದು, ಇದರಲ್ಲಿ ಬಾಡಿಗೆ, ಫಿಟ್‌ನೆಸ್, ಆಹಾರ ಮತ್ತು 29 ಲಕ್ಷ ರೂಪಾಯಿ ಪ್ರವಾಸಕ್ಕೆ ಸೇರಿದೆ. ಈ ಪೋಸ್ಟ್ ವೈರಲ್ ಆಗಿದ್ದು, ದಂಪತಿಯ ಈ ಐಷಾರಾಮಿ ಖರ್ಚು ನೆಟ್ಟಿಗರನ್ನು ದಿಗ್ಭ್ರಮೆಗೊಳಿಸಿ ವ್ಯಾಪಕ ಪ್ರತಿಕ್ರಿಯೆ ಪಡೆದಿದೆ.

2025ರಲ್ಲಿ 47 ಲಕ್ಷ ರೂ. ಖರ್ಚು ಮಾಡಿದ  ಬೆಂಗಳೂರಿನ ದಂಪತಿ
ವೈರಲ್​​ ವಿಡಿಯೋ

Updated on: Jan 05, 2026 | 5:46 PM

ಬೆಂಗಳೂರು, ಜ.5: ಬೆಂಗಳೂರು ಮೂಲದ ಕಂಟೆಂಟ್ ಕ್ರಿಯೇಟರ್ ದಂಪತಿ (Bengaluru couple expenses) ತಮ್ಮ ವರ್ಷದ ಖರ್ಚಿನ ಬಗ್ಗೆ ಸೋಶಿಯಲ್​​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅವರು ಹಂಚಿಕೊಂಡಿರುವ ವಾರ್ಷಿಕ ಖರ್ಚಿನ ಬಗ್ಗೆ ನೆಟ್ಟಿಗರನ್ನು ದಿಗ್ಭ್ರಮೆಗೊಳಿಸಿದೆ. ಪ್ರಕೃತಿ ಅರೋರಾ ಮತ್ತು ಆಶಿಶ್ ಕುಮಾರ್ ಅವರು ಕಳೆದ ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಬಾಡಿಗೆ ಮತ್ತು ಪ್ರಯಾಣದಿಂದ ಹಿಡಿದು ಫಿಟ್‌ನೆಸ್ ಮತ್ತು ಶಾಪಿಂಗ್‌ವರೆಗೆ ಎಷ್ಟು ಖರ್ಚು ಮಾಡಿದ್ದಾರೆ ಎಂಬ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಬಾಡಿಗೆ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿರುವ ಇವರ ವಾರ್ಷಿಕ ಬಾಡಿಗೆ 5 ಲಕ್ಷ ರೂ. ಜತೆಗೆ ಫಿಟ್‌ನೆಸ್‌ ಕೂಡ ಖರ್ಚು ಮಾಡಿದ್ದಾರೆ. ಇದಕ್ಕಾಗಿ ವೈಯಕ್ತಿಕ ಟ್ರೈನರ್​​​ನ್ನು ಕೂಡ ನೇಮಕಾ ಮಾಡಿಕೊಂಡಿದ್ದಾರೆ. ಇದಕ್ಕಾಗಿ ವರ್ಷಕ್ಕೆ ಒಟ್ಟು 1 ಲಕ್ಷ ರೂ. ಖರ್ಚಾಗುತ್ತಿತ್ತು. ದಿನಸಿ, ಸಲಾಡ್‌ಗಳನ್ನು ಆರ್ಡರ್ ಮಾಡಿ ಮತ್ತು ಹೊರಗೆ ತಿನ್ನುವುದರಿಂದ ವಾರ್ಷಿಕ 2.5 ಲಕ್ಷ ರೂ ಖರ್ಚಾಗಿದೆ ಎಂದು ಹೇಳಿದ್ದಾರೆ. ಇದಲ್ಲದೆ, ಮನೆ ಕೆಲಸದವರಿಗೆ, ಅಪ್ಲಿಕೇಶನ್ ಚಂದಾದಾರಿಕೆಗಳು ಒಟ್ಟು 1.5 ಲಕ್ಷ ರೂ ಖರ್ಚು ಮಾಡಲಾಗಿದೆ. ಆರೈಕೆ ಮತ್ತು ಕ್ಯಾಬ್ ಪ್ರಯಾಣದಂತಹ ಇತರ ವೆಚ್ಚಗಳು ಒಟ್ಟು 1.3 ಲಕ್ಷ ಖರ್ಚು ಮಾಡಿದ್ದಾರೆ.

ವೈರಲ್​​ ಪೋಸ್ಟ್​ ಇಲ್ಲಿದೆ ನೋಡಿ:

ಇನ್ನು ಈ ದಂಪತಿ ಹೆಚ್ಚು ಖರ್ಚು ಮಾಡಿದ್ದು ಪ್ರವಾಸಕ್ಕೆ, ವರ್ಷದಲ್ಲಿ 63 ವಿಮಾನಗಳಲ್ಲಿ ಪ್ರಯಾಣಿಸಿದ್ದಾರೆ. 2025ರಲ್ಲಿ 13 ದೇಶಗಳಿಗೆ ಭೇಟಿ ನೀಡಿದ್ದಾರೆ. ಹೋಟೆಲ್‌ಗಳು ಮತ್ತು ಏರ್ ಬೆಡ್ ಅಂಡ್ ಬ್ರೇಕ್‌ಫಾಸ್ಟ್ ಗಳಲ್ಲಿ 121 ರಾತ್ರಿ ಕಳೆದಿದ್ದಾರೆ. ಒಟ್ಟು 29 ಲಕ್ಷ ಖರ್ಚು ಮಾಡಿದ್ದಾರೆ. ಕಂಟೆಂಟ್ ಕ್ರಿಯೇಟರ್ ಆಗಿರುವ ಈ ದಂಪತಿ ಇದಕ್ಕಾಗಿ 2.5 ಲಕ್ಷ ರೂ ಖರ್ಚು ಮಾಡಿದ್ದಾರೆ. ಇದರ ಜತೆಗೆ ಇತರ ವಸ್ತುಗಳಿಗಾಗಿ 4.5 ಲಕ್ಷ ರೂ ಖರ್ಚು ಮಾಡಿದ್ದಾರೆ. 2025ರಲ್ಲಿ ಅವರ ವಾರ್ಷಿಕ ಖರ್ಚು ಸುಮಾರು 47 ಲಕ್ಷ ರೂ. ಎಂದು ಹೇಳಿದ್ದಾರೆ.

ಇದನ್ನೂ ಓದಿ: ಈ ಯೋಜನೆಗೆ ಕೇಂದ್ರದ ಅನುಮೋದನೆ ಸಿಕ್ಕರೆ ಬೆಂಗಳೂರಿನಿಂದ ಪುಣೆಗೆ ತಲುಪಲು 7 ಗಂಟೆ ಸಾಕು

ಇನ್ನು ಇವರು ಈ ಪೋಸ್ಟ್​​ನ್ನು ನೋಡಿ ಸೋಶಿಯಲ್​​​ ಮೀಡಿಯಾದಲ್ಲಿ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಒಬ್ಬರು ತಿಂಗಳಿಗೆ ಎಷ್ಟು ದುಡಿಯುತ್ತೀರಾ ಎಂದು ಒಬ್ಬರು ಕೇಳಿದ್ದಾರೆ. ಇನ್ನೊಬ್ಬರು ನನಗು ಪ್ರವಾಸ ಮಾಡುವ ಆಸೆ ಇದೆ. ಆದ್ರೆ ಗಳಿಕೆ ಕಡಿಮೆ ಎಂದು ಹೇಳಿದ್ದಾರೆ. ಹಣ ಗಳಿಸಿ ಏನ್​​ ಮಾಡೋದು, ಇರುವಷ್ಟು ದಿನ ಸುಖವಾಗಿರುವ ಎಂದು ಮತ್ತೊಬ್ಬರು ಕಮೆಂಟ್​​ ಮಾಡಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ