ಬೆಂಗಳೂರು, ಮೇ 23: ಕ್ಷುಲ್ಲಕ ಕಾರಣಕ್ಕೆ ಡೆಲಿವರಿ ಬಾಯ್ (Delivery boy) ಗ್ರಾಹಕನ ಮೇಲೆ ಹಲ್ಲೆ ಮಾಡಿರುವ ಘಟನೆ ಬಸವೇಶ್ವರ ನಗರದಲ್ಲಿ (Basaveshwara Nagar) ನಡೆದಿದೆ. ಬುಧವಾರ ಮೇ.21 ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ದಿನಸಿ ಸಾಮಾಗ್ರಿ ಡೆಲಿವರಿ ಮಾಡಲು ಬಂದಿದ್ದ ಜ್ಸೆಫ್ಟೋ ಸ್ಟೋರ್ ಡೆಲಿವರಿ ಬಾಯ್ ವಿಷ್ಣುವರ್ಧನ್ ಎಂಬುವನು ಗ್ರಾಹಕ ಶಂಶಾಂಕ್ ಕಣ್ಣಿಗೆ ಪಂಚ್ ಮಾಡಿ, ನಿಂದಿಸಿದ್ದಾನೆ. ಶಶಾಂಕ್ ಅವರ ಕಣ್ಣಿನ ಕೆಳಭಾಗದ ಮೂಳೆ ಮುರಿದಿದೆ.
ಆರ್ಡರ್ ಡೆಲಿವರಿ ಅಡ್ರೆಸ್ ಬದಲಾಗಿದ್ದಕ್ಕೆ ಗಲಾಟೆ ನಡೆದಿದೆ ಎಂದು ತಿಳಿದುಬಂದಿದೆ. ಡೆಲಿವರಿ ರಿಸೀವ್ ಮಾಡಿಕೊಳ್ಳು ಬಂದಿದ್ದ ಶಶಾಂಕ್ ಅವರ ನಾದಿನಿಯವರಿಗೆ ಡೆಲಿವರಿ ಬಾಯ್ ವಿಷ್ಣುವರ್ಧನ್ ನಿಂದನೆ ಮಾಡಿದ್ದಾನೆ. ನಾದಿನಿಯನ್ನು ನಿಂದಿಸಿದ್ದಕ್ಕೆ ಮನೆಯಿಂದ ಹೊರಬಂದು ಶಶಾಂಕ್ ಪ್ರಶ್ನಿಸಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಡೆಲಿವರಿ ಬಾಯ್ ವರ್ತನೆ ಕಂಡು ಶಶಾಂಕ್ ಪೊಲೀಸರಿಗೆ ಕರೆ ಮಾಡಲು ಮುಂದಾದರು.
ಪೊಲೀಸರ ಹೆಸರು ಹೇಳುತ್ತಿದ್ದಂತೆ ದ್ವಿ ಚಕ್ರವಾಹದಿಂದ ಇಳಿದು ಬಂದು ಡಿಲಿವರಿ ಬಾಯ್ ವಿಷ್ಣವರ್ಧನ್ ಗ್ರಾಹಕ ಶಶಾಂಕ್ ಅವರ ಕಣ್ಣಿಗೆ ಪಂಚ್ ಮಾಡಿದ್ದಾನೆ. ಇದರಿಂದ ಗ್ರಾಹಕ ಶಶಾಂಕ್ ಅವರ ಕಣ್ಣಿನ ಕೆಳ ಭಾಗದ ಮೂಳೆ ಮುರಿದಿದೆ. ಕಣ್ಣು ಮಂಜಾಗಿದ್ದು ದೃಷ್ಟಿ ಸ್ವಲ್ಪಮಟ್ಟಿಗೆ ಹಾನಿಯಾಗಿದೆ. ಇದೇ ಪರಿಸ್ಥಿತಿ ಇದ್ದಲ್ಲಿ ಅಪರೇಷನ್ ಮಾಡುವುದು ಅನಿವಾರ್ಯ ಎಂದು ವೈದ್ಯರು ಹೇಳಿದ್ದಾರೆ. ಘಟನೆ ಸಂಬಂಧ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ಸಂಬಂಧ ಎಫ್ಐಆರ್ ದಾಖಲಿಸಿ ಪೊಲೀಸರ ಆರೋಪಿ ವಿಷ್ಣವರ್ಧನ್ಗಾಗಿ ಹುಡುಕಾಟ ನಡೆಸಿದ್ದಾರೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಹೆಚ್ಚುತ್ತಿರುವ ಕೋವಿಡ್: ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ
ಜ್ಸೆಫ್ಟೋ ಸ್ಟೋರ್ ಮ್ಯಾನೇಜರ್ ಗೆ ದೂರು ನೀಡಿದರೇ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ನೀವೂ ವಾದಿಸಿದ್ದಕ್ಕೆ ಡೆಲಿವರಿ ಬಾಯ್ ಹೊಡೆದಿದ್ದಾನೆಂದು ಎಂದು ಸಮರ್ಥನೆ ನೀಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ