
ಬೆಂಗಳೂರು, ಜ.29: ಬೆಂಗಳೂರಿನಲ್ಲಿ (Bengaluru) ರೆಸ್ಟೋರೆಂಟ್ಗಳಿಗೆ ಏನು ಕಡಿಮೆ ಇಲ್ಲ. ಬೀದಿ ಬೀದಿಯಲ್ಲಿ ರೆಸ್ಟೋರೆಂಟ್ಗಳು ಇದೆ. ಆದ್ರೆ ಅಲ್ಲಿ ಸರಿಯಾದ ಹಾಗೂ ಉತ್ತಮ ಗುಣಮಟ್ಟದ ಆಹಾರಗಳು ಸಿಗುತ್ತಾ? ಎಂಬ ಅನುಮಾನ ಮೂಡಿದೆ. ಹಣ ಗಳಿಸುವ ಆಸೆಯಲ್ಲಿ ಜನರ ಜೀವದ ಜತೆಗೆ ಚೆಲ್ಲಾಟ ಆಡುತ್ತಿದ್ದಾರೆ. ಇದೀಗ ಬೆಂಗಳೂರಿನ ಆಹಾರದ ಗುಣಮಟ್ಟದ ಬಗ್ಗೆ ಪ್ರಶ್ನೆ ಎದ್ದಿದೆ. ದೇಶ-ವಿದೇಶದ ಜನರನ್ನು ಬೆಂಗಳೂರು ಆಹಾರ ವಿಚಾರದಲ್ಲಿ ಸೆಳೆದುಕೊಂಡಿದೆ. ಆದರೆ ಇದೀಗ ಇಲ್ಲಿನ ರೆಸ್ಟೋರೆಂಟ್ ನಲ್ಲಿ ಸಿಗುವ ಆಹಾರಗಳು ಎಷ್ಟು ಸೇಫ್ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕಾಗಿದೆ. ಬೆಂಗಳೂರಿನಲ್ಲಿ ಜನಸಾಮಾನ್ಯರ ಹಸಿವನ್ನು ಬಂಡವಾಳ ಮಾಡಿಕೊಂಡ ಹೋಟೆಲ್ ಮಾಲೀಕರು ಆಹಾರದಲ್ಲೂ ಒಂದು ದಂಧೆಯನ್ನಾಗಿ ಮಾಡಿಕೊಂಡಿದ್ದಾರೆ. ರಾಜಾಜಿನಗರ ಬಳಿಯ ಶಿವನಗರ ಸಿಗ್ನಲ್ ಸಮೀಪದ ಹಂಗ್ರಿ ಬೈಟ್ಸ್ ಎಂಬ ರೆಸ್ಟೋರೆಂಟ್ ಅವಧಿ ಮೀರಿದ ಆಹಾರ ಉತ್ಪನ್ನಗಳನ್ನು ಬಳಸಿ ಅಡುಗೆ ತಯಾರಿಸುತ್ತಿದ್ದಾರೆ. ಸಾಸ್, ಮಯೋನಿಸ್, ಜ್ಯೂಸ್ ಫ್ಲೇವರ್ಸ್, ಸೇರಿ ಹತ್ತು ಹಲವು ಉತ್ಪನ್ನಗಳ ಎಕ್ಸ್‌ಪೈರಿ ಡೇಟ್ ಮುಗಿದು ಒಂದು ವರ್ಷವಾದರೂ ಅದನ್ನೇ ಬಳಸುತ್ತಿದ್ದಾರೆ ಎಂಬುದನ್ನು ಟಿವಿ9 ಕನ್ನಡ ಪತ್ತೆ ಮಾಡಿದೆ.
ಸ್ಯಾಂಡ್ ವಿಚ್, ಮೊಮೊಸ್, ಫ್ರೆಂಚ್ ಫ್ರೈಸ್ ಸೇರಿದಂತೆ ಇನ್ನು ಅನೇಕ ಆಹಾರ ತಯಾರಿಸಲು ಬಳಸುವ ಉತ್ಪನ್ನಗಳು ತುಂಬಾ ಕಳಪೆಯಾಗಿದೆ. ಒಂದು ವೇಳೆ ಇದನ್ನು ಅಪ್ಪಿ ತಪ್ಪಿ ತಿಂದರೆ, ಜೀವ ಹೋಗುವುದು ಖಂಡಿತ. ರೆಸ್ಟೋರೆಂಟ್ ನಡೆಸುವವರು ಗ್ರಾಹಕರ ಆರೋಗ್ಯದ ಬಗ್ಗೆ ಕಿಂಚಿತ್ತು ಕಾಳಜಿ ವಹಿಸದಿರುವುದು ದುರಂತ. ಟಿವಿ9 ಸ್ಥಳಕ್ಕೆ ಭೇಟಿ ನೀಡಿದ ಬೆನ್ನಲ್ಲೇ ಆರೋಗ್ಯ ಅಧಿಕಾರಿ ರೆಸ್ಟೋರೆಂಟ್ ಮಾಲೀಕರಿಗೆ 2 ಸಾವಿರ ದಂಡ ವಿಧಿಸಿ ಎಚ್ಚರಿಕೆ ನೀಡಿದ್ದಾರೆ. ಇನ್ನು ರೆಸ್ಟೋರೆಂಟ್ ಮಾಲೀಕರು ಹಾಗೂ ಅಡುಗೆ ತಯಾರಿಸುವವರ ಮಧ್ಯೆ ನಾನಾ ರೀತಿಯ ವೈಯಕ್ತಿಕ ತಕರಾರು ಹಾಗೂ ಭಿನ್ನಾಭಿಪ್ರಾಯಗಳಿವೆ. ಕೊನೆಗೆ ಅದರ ಸೇಡನ್ನ ಪರಿಣಾಮ ದುಡ್ಡು ಕೊಟ್ಟು ಆಹಾರ ಸವಿಯಲು ಬಂದ ಗ್ರಾಹಕರ ಮೇಲೆ ತೀರಿಸಿಕೊಳ್ಳಲಾಗುತ್ತಿದೆ.
ಇದನ್ನೂ ಓದಿ: ರಾತ್ರಿ ವೇಳೆ ಭಯಾನಕ ಶಬ್ದ, ಬೆಳಿಗ್ಗೆ ಎದ್ದು ನೋಡಿದ್ರೆ ಕಾರು, ಬೈಕ್ ಜಖಂ, ಭಯದ ವಾತವಾರಣದಲ್ಲಿ ಸ್ಥಳೀಯರು
ಇಷ್ಟು ದೊಡ್ಡ ಮಟ್ಟದ ಉಲ್ಲಂಘನೆ ಪತ್ತೆಯಾದ ನಂತರವೂ ಆರೋಗ್ಯ ಅಧಿಕಾರಿಗಳು ಕೇವಲ ₹2,000 ದಂಡ ವಿಧಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಜನರ ಜೀವಕ್ಕೆ ಅಪಾಯ ತರುವ ಇಂತಹ ಹೋಟೆಲ್‌ಗಳಿಗೆ ಇಷ್ಟು ಕಡಿಮೆ ದಂಡ ವಿಧಿಸುವುದು ದಂಧೆಕೋರರಿಗೆ ಭಯವಿಲ್ಲದಂತೆ ಮಾಡುತ್ತದೆ ಎಂಬುದು ಕಟು ಸತ್ಯ.
ಸಾಧ್ಯವಾದರೆ ಹೋಟೆಲ್‌ನ ಅಡುಗೆ ಮನೆ ಎಷ್ಟು ಸ್ವಚ್ಛವಾಗಿದೆ ಎಂದು ಒಮ್ಮೆ ಕಣ್ಣಾಡಿಸಿ.
ಹಾರದಲ್ಲಿ ಅಸಹಜ ವಾಸನೆ ಅಥವಾ ರುಚಿ ಕಂಡುಬಂದರೆ ತಕ್ಷಣ ತಿನ್ನುವುದನ್ನು ನಿಲ್ಲಿಸಿ.
ದೊಡ್ಡ ರೆಸ್ಟೋರೆಂಟ್ ಅಥವಾ ಬ್ರ್ಯಾಂಡ್ ಎಂಬ ಕಾರಣಕ್ಕೆ ಎಲ್ಲವೂ ಸರಿ ಇರುತ್ತದೆ ಎಂದು ಕುರುಡಾಗಿ ನಂಬಬೇಡಿ.
ವರದಿ: ಲಕ್ಷ್ಮೀ ನರಸಿಂಹ, ಟಿವಿ9 ಕನ್ನಡ
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:50 am, Thu, 29 January 26