ನಿರ್ಮಾಣ ಹಂತದ ಈಜಿಪುರ ಮೇಲ್ಸೇತುವೆಯನ್ನ ದೀಪದ ಕಂಬಗಳಾಗಿ ಬಳಕೆ..! ಫೋಟೋ ವೈರಲ್​

|

Updated on: Jul 19, 2023 | 9:18 AM

ಈಜಿಪುರ ಮೇಲ್ಸೇತುವೆ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಈಜಿಪುರ ಮೇಲ್ಸೇತುವೆ ಕಾಮಗಾರಿ ಆರಂಭವಾಗಿ ಐದು ವರ್ಷಗಳು ಕಳೆದಿದ್ದು, ಕಾಮಗಾರಿ ನೆನೆಗುದಿಗೆ ಬಿದ್ದಿದೆ. ಇದೀಗ ಹೊಸ ಗುತ್ತಿಗಾರರು ಸಿಕ್ಕಿದ್ದು, ಕಾಮಗಾರಿ ಆರಂಭವಾಗಬೇಕಿದೆ. ಇದರ ಮಧ್ಯೆ ಈಜಿಪುರ ಮೇಲ್ಸೇತುವೆಯ ಕಂಬಗಳ ಮೇಲೆ ಯಾರೋ ವಿದ್ಯುತ್​ ದೀಪಗಳನ್ನು ಹಾಕಿದ್ದಾರೆ.

ನಿರ್ಮಾಣ ಹಂತದ ಈಜಿಪುರ ಮೇಲ್ಸೇತುವೆಯನ್ನ ದೀಪದ ಕಂಬಗಳಾಗಿ ಬಳಕೆ..! ಫೋಟೋ ವೈರಲ್​
ಈಜಿಪುರ ಮೇಲ್ಸೇತುವೆ
Follow us on

ಬೆಂಗಳೂರು: ಈಜಿಪುರ ಮೇಲ್ಸೇತುವೆ (Ejipura Flyover) ಮತ್ತೆ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್​ ಆಗಿದೆ. ಈಜಿಪುರ ಮೇಲ್ಸೇತುವೆ ಕಾಮಗಾರಿ ಆರಂಭವಾಗಿ ಐದು ವರ್ಷಗಳು ಕಳೆದಿದ್ದು, ಕಾಮಗಾರಿ ನೆನೆಗುದಿಗೆ ಬಿದ್ದಿದೆ. ಇದೀಗ ಹೊಸ ಗುತ್ತಿಗಾರರು ಸಿಕ್ಕಿದ್ದು, ಕಾಮಗಾರಿ ಆರಂಭವಾಗಬೇಕಿದೆ. ಇದರ ಮಧ್ಯೆ ಈಜಿಪುರ ಮೇಲ್ಸೇತುವೆಯ ಕಂಬಗಳ ಮೇಲೆ ಯಾರೋ ವಿದ್ಯುತ್​ ದೀಪಗಳನ್ನು ಹಾಕಿದ್ದಾರೆ. ಈ ಭಾವಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್​ ಆಗುತ್ತಿದೆ. ಈ ಭಾವಚಿತ್ರ ವೈರಲ್​ ಆಗುತ್ತಿದ್ದಂತೆ ಸಾಕಷ್ಟು ನೆಟ್ಟಿಗರು “ದೀಪಗಳು ಮೇಲ್ಸೇತುವೆ ಕಾಮಗಾರಿ ಮತ್ತೆ ಆರಂಭವಾಗುತ್ತೆ” ಎಂಬ ಸೂಚನೆ ನೀಡುತ್ತಿವೆ ಎಂದಿದ್ದಾರೆ.

ಅರ್ನವ್ ಗುಪ್ತಾ ಎಂಬ ಟೆಕ್ಕಿ ಫ್ಲೈಓವರ್ ಮೇಲಿನ ದೀಪಗಳ ಚಿತ್ರವನ್ನು ಟ್ವಿಟರ್​​​ನಲ್ಲಿ ಹಂಚಿಕೊಂಡಿದ್ದು, “ಫ್ಲೈಓವರ್ ಅನ್ನು ಎಂದಿಗೂ ನಿರ್ಮಿಸುವುದಿಲ್ಲ. ನಾವು ಈಗ ಕಂಬಗಳನ್ನು ದೀಪದ ಕಂಬಗಳಾಗಿ ಬಳಸುತ್ತಿದ್ದೇವೆ” ಎಂದು ಬರೆದಿದ್ದಾರೆ.

ಇನ್ನು ಈ ಫೋಟೋಗಳು ವೇಗವಾಗಿ ವೈರಲ್​ ಆಗುತ್ತಿದ್ದು, ಕೆಲವರು ಈ ದೀಪಗಳನ್ನು ಯಾವುದಕ್ಕಾಗಿ ಬಳಸುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಬಸು ಎಂಬವರು ಅದ್ಭುತ ನೋಟ! ಕಂಬದ ಮೇಲೆ ಕೂತು ಬೆಳದಿಂಗಳ ಊಟ ಮಾಡಬಹುದು ಎಂದರು.

ಇದನ್ನೂ ಓದಿ:  ಗೂಗಲ್ ಸ್ಮಾರಕಗಳ ಪಟ್ಟಿಯಲ್ಲಿ ಬೆಂಗಳೂರಿನ ಈಜಿಪುರ ಮೇಲ್ಸೇತುವೆ; ಟ್ವಿಟರ್​ನಲ್ಲಿ ವ್ಯಂಗ್ಯ

ಕೋರಮಂಗಲದ 100 ಅಡಿ ಮುಖ್ಯ ರಸ್ತೆಯಲ್ಲಿ ಹಾದು ಹೋಗುವ ಈ ಫ್ಲೈ ಓವರ್ ಈಜಿಪುರ ಮುಖ್ಯ ರಸ್ತೆ ಜಂಕ್ಷನ್, ಹೊರ ವರ್ತುಲ ರಸ್ತೆಯಿಂದ ಕೇಂದ್ರೀಯ ಸದನ ಜಂಕ್ಷನ್‌ಗೆ ಸಂಪರ್ಕ ಕಲ್ಪಿಸುತ್ತದೆ. ಬರೋಬ್ಬರಿ 2.5 ಕಿ. ಮೀ. ಉದ್ದದ ಈ ಮೇಲ್ಸೇತುವೆ ನಿರ್ಮಾಣ ಮಾಡಲು ಟೆಂಡರ್​ ಅನ್ನು ಕೋಲ್ಕತ್ತಾ ಮೂಲದ ನಿರ್ಮಾಣ ಸಂಸ್ಥೆ ಸಿಂಪ್ಲೆಕ್ಸ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್‌ಗೆ ನೀಡಲಾಗಿತ್ತು. ಈ ಸಂಸ್ಥೆ ಒಟ್ಟು 81 ಪಿಲ್ಲರ್‌ಗಳನ್ನು ನಿರ್ಮಿಸಬೇಕಿತ್ತು. ಆದರೆ ಸಂಸ್ಥೆ 67 ಪಿಲ್ಲರ್‌ಗಳನ್ನಷ್ಟೇ ನಿರ್ಮಿಸಿದೆ.

ಈಜಿಪುರ ಫ್ಲೈ ಓವರ್ ನಿರ್ಮಾಣ ಯೋಜನೆಗೆ ಬಿಬಿಎಂಪಿ ಒಟ್ಟು 252 ಕೋಟಿ ರೂ. ವ್ಯಯಿಸಬೇಕಿದೆ. ನಾಲ್ಕನೇ ಬಾರಿ ನಡೆದ ಟೆಂಡರ್ ಪ್ರಕ್ರಿಯೆಯಲ್ಲಿ ಕೇವಲ ಒಂದೇ ಒಂದು ಕಂಪನಿ ಭಾಗವಹಿಸಿತ್ತು. ಹೀಗಾಗಿ, ಅವರಿಗೇ ಈ ಕಾಮಗಾರಿ ನಡೆಸುವ ಅವಕಾಶ ಸಿಕ್ಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:17 am, Wed, 19 July 23