AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ ಕೇಸ್, ಕಾಲೇಜು ವಿರುದ್ಧ ಎಫ್​ಐಆರ್

ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಸಗಿ ಕಾಲೇಜು ವಿರುದ್ಧ ಎಫ್​ಐಆರ್​ ದಾಖಲಾಗಿದೆ.

ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ ಕೇಸ್, ಕಾಲೇಜು ವಿರುದ್ಧ ಎಫ್​ಐಆರ್
ಆದಿತ್ಯ ಪ್ರಭು
Jagadisha B
| Updated By: ರಮೇಶ್ ಬಿ. ಜವಳಗೇರಾ|

Updated on: Jul 19, 2023 | 6:58 AM

Share

ಬೆಂಗಳೂರು, (ಜುಲೈ 19): ಬೆಂಗಳೂರಿನಲ್ಲಿಇಂಜಿನಿಯರಿಂಗ್ ವಿದ್ಯಾರ್ಥಿ(Student) ಆದಿತ್ಯ ಪ್ರಭು(19) ಆತ್ಮಹತ್ಯೆ(Suicide)  ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಲೇಜು ವಿರುದ್ಧ ಎಫ್​ಐಆರ್ ದಾಖಲಾಗಿದೆ. ತಮ್ಮ ಮಗನಿಗೆ ಮಾನಸಿಕವಾಗಿ ನಿಂದನೆ ಮಾಡಿದ್ದಾರೆ ಎಂದು ಪಿಇಎಸ್ ಕಾಲೇಜು, ಇನ್ವಿಜಿಲೇಟರ್ ಹಾಗು ಸಿಬ್ಬಂದಿಯ ಮೇಲೆ ಮೃತ ವಿದ್ಯಾರ್ಥಿಯ ತಂದೆ ಗಿರೀಶ್ ಪ್ರಭು ದೂರು ದಾಖಲಿಸಿದ್ದಾರೆ. ಈ ದೂರಿನ ಮೇರೆಗೆ ಆತ್ಮಹತ್ಯೆಗೆ ಪ್ರಚೋದನೆ ಆರೋಪದಲ್ಲಿ ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರತಿಷ್ಠಿತ ಖಾಸಗಿ ಕಾಲೇಜ್ ವಿರುದ್ದ 306 ಅಡಿಯಲ್ಲಿ ಎಫ್​ಐಆರ್ ದಾಖಲಾಗಿದೆ.

ಇದನ್ನೂ ಓದಿ: Bengaluru News: PES ಕಾಲೇಜಿನ 8ನೇ ಮಹಡಿಯಿಂದ ಹಾರಿ ವಿದ್ಯಾರ್ಥಿ ಆತ್ಮಹತ್ಯೆ ಶಂಕೆ

ತಂದೆ ಆರೋಪವೇನು?

ಪಿಇಎಸ್ ಕಾಲೇಜಿನಲ್ಲಿ ಬಿಟೆಕ್ ವಿದ್ಯಾಭ್ಯಾಸ ಮಾಡುತ್ತಿದ್ದ ಆದಿತ್ಯ ಪ್ರಭು, ಮೊನ್ನೆ ಫಸ್ಟ್ ಇಯರ್​ ಸೆಕೆಂಡ್ ಸೆಮಿಸ್ಟರ್ ಪರೀಕ್ಷೆ ಬರೆಯುತ್ತಿದ್ದ. ಆದ್ರೆ, ಪರೀಕ್ಷೆ ವೇಳೆ ಮೊಬೈಲ್ ಬಳಸಿ ಕಾಪಿ ಮಾಡುತ್ತಿದ್ದನಂತೆ. ವೇಳೆ ಶಿಕ್ಷಕರೊಬ್ಬರ ಕೈಗೆ ಸಿಕ್ಕಿಬಿದ್ದಿದ್ದ. ಬಳಿಕ ಆದಿತ್ಯ ಪ್ರಭುನನ್ನು ಪರೀಕ್ಷಾ ಹಾಲ್​ನಿಂದ ಕರೆದುಕೊಂಡು ಹೋಗಿ ಕೊಠಡಿಯಲ್ಲಿ ಕೂರಿಸಲಾಗಿತ್ತು.ಈ ವೇಳೆ ವಿದ್ಯಾರ್ಥಿಗೆ ಮಾನಸಿಕವಾಗಿ ನಿಂದನೆ ಮಾಡಿದ್ದಾರೆ ಎಂದು ಪಿಇಎಸ್ ಕಾಲೇಜು, ಇನ್ವಿಜಿಲೇಟರ್ ಹಾಗು ಸಿಬ್ಬಂದಿಯ ಮೇಲೆ ಮೃತ ವಿದ್ಯಾರ್ಥಿಯ ತಂದೆ ಗಿರೀಶ್ ಪ್ರಭು ದೂರು ದಾಖಲಿಸಿದ್ದಾರೆ. ಈ ದೂರಿನ ಅನ್ವಯ ಬೆಂಗಳೂರಿನ ಗಿರಿನಗರ ಪೊಲೀಸರು ಕಾಲೇಜು ವಿರುದ್ಧ ಎಫ್​ಐಆರ್ ದಾಖಲಿಸಿದ್ದಾರೆ.

ಸಿಬಿಎಸ್ ಸಿಯಲ್ಲಿ ಶೇ.90ಕ್ಕೂ ಅಧಿಕ ಪರ್ಸೆಂಟ್ ಪಡೆದುಕೊಂಡಿದ್ದ. ಪ್ರಥಮ ಪಿಯುಸಿಯಲ್ಲಿ ಶೇ. 98.‌ ದ್ವಿತಿಯ ಪಿಯುಸಿಯಲ್ಲಿ ಡಿಸ್ಟಿಂಕ್ಷನ್ ಬಂದಿದ್ದ. ಹೀಗೆ ಹೆಚ್ಚು ಅಂಕ ಪಡೆದು ಉನ್ನತ ಕಾಲೇಜಿನಲ್ಲಿ ಸೀಟ್ ಪಡೆದುಕೊಂಡಿದ್ದ. ಆದಿತ್ಯ ಪ್ರಭುವಿನ ತಂದೆ ಇಂಜಿನಿಯರ್, ಮಗನನ್ನೂ ಸಹ ತಮ್ಮಂತೆ ಇಂಜಿನಿಯರ್ ಮಾಡಬೇಕೆಂಬ ಆಸೆ ಹೊತ್ತಿದ್ದರು. ಆದ್ರೆ, ಮಗ ಆದಿತ್ಯ ಪ್ರಭು ಜುಲೈ 17ರ ಮಧ್ಯಾಹ್ನ ಆದಿತ್ಯ ಪ್ರಭು (19) ಕಾಲೇಜು ಮೇಲೆಂದು ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ.