ಬೆಂಗಳೂರಿನಲ್ಲಿ ಹೋಂ ಐಸೋಲೇಶನ್​ನಲ್ಲಿರುವವರಿಗೆ ಉಸಿರು ಕೊಡುತ್ತಿರುವ ‘ಕೇಶವ‘; ಆಕ್ಸಿಜನ್ ಅಗತ್ಯವಿರುವವರು ಇಲ್ಲಿ ಗಮನಿಸಿ

|

Updated on: May 16, 2021 | 2:55 PM

ಈ ಬಾರಿಯೂ ಕೇಶವ ಸೇವಾ ಸಮಿತಿಯ ಸುಮಾರು 600 ಕಾರ್ಯಕರ್ತರು ಕೊವಿಡ್ ವಿರುದ್ಧದ ಹೊರಾಟದಲ್ಲಿ ಸಕ್ರಿಯವಾಗಿದ್ದಾರೆ. 100 ಸ್ಲಂ , 54 ವಾರ್ಡ್​ಗಳಲ್ಲಿ ಕೇಶವ ಸೇವಾ ಸಮಿತಿಯ ಕಾರ್ಯವ್ಯಾಪ್ತಿ ವಿಸ್ತರಿಸಿದೆ.

ಬೆಂಗಳೂರಿನಲ್ಲಿ ಹೋಂ ಐಸೋಲೇಶನ್​ನಲ್ಲಿರುವವರಿಗೆ ಉಸಿರು ಕೊಡುತ್ತಿರುವ ‘ಕೇಶವ‘; ಆಕ್ಸಿಜನ್ ಅಗತ್ಯವಿರುವವರು ಇಲ್ಲಿ ಗಮನಿಸಿ
ಕೇಶವ ಸೇವಾ ಸಮಿತಿಯ ವತಿಯಿಂದ ಆಕ್ಸಿಜನ್ ಕಾನ್ಸ್ಂಟ್ರೇಟರ್ ಸೇವೆ ಉದ್ಘಾಟನೆ
Follow us on

ಬೆಂಗಳೂರು: ಸಕಲ ಮಾನವ ಕುಲವನ್ನೇ ಅಲ್ಲಾಡಿಸುತ್ತಿರುವ ಕೊವಿಡ್ ಎಂಬ ಸೋಂಕಿನ ವಿರುದ್ಧ ಹೋರಾಡಲು ಲಸಿಕೆ, ಸಾಮಾಜಿಕ ಅಂತರಗಳು ಎಷ್ಟು ಮುಖ್ಯವೋ ಮಾನವೀಯತೆಯೂ ಅಷ್ಟೇ ಮುಖ್ಯ. ಇದನ್ನರಿತ ಸಂಸ್ಥೆಯೊಂದು ಕೊವಿಡ್ ಸೋಂಕಿತರಿಗೆ ಹಲವು ವಿಧವಾಗಿ ನೆರವಾಗುತ್ತಿದೆ. ಆಕ್ಸಿಜನ್ ಇಲ್ಲ, ಲಸಿಕೆ ಇಲ್ಲ ಎಂಬ ಕೂಗುಗಳ ನಡುವೆಯೇ ಬೆಂಗಳೂರಿನ ಕೇಶವ ಸೇವಾ ಸಮಿತಿ ದೆಹಲಿಯಿಂದ ಆಕ್ಸಿಜನ್ ಕಾನ್ಸ್ಂಟ್ರೇಟರ್​ಗಳನ್ನು ತರಿಸಿ ಸೋಂಕಿತರ ನೆರವಿಗೆ ಧಾವಿಸುತ್ತಿದೆ. ಈಮೂಲಕ ರಾಜ್ಯದ ಇತರ ಸಂಘ ಸಂಸ್ಥೆಗಳಿಗೆ ಮಾದರಿಯಾಗಿದೆ.

ಹೋಂ ಐಸೋಲೇಶನ್​ನಲ್ಲಿ ಇರುವ ಕೊವಿಡ್ ಸೋಂಕಿತರಿಗೆ ಅಗತ್ಯ ಪ್ರಮಾಣದಲ್ಲಿ ಮೆಡಿಕಲ್ ಆಕ್ಸಿಜನ್ ದೊರೆಯುತ್ತಿಲ್ಲ ಎಂಬ ಕೂಗು ಕೇಳುತ್ತಿದ್ದಂತೆ ಕೇಶವ ಸೇವಾ ಸಮಿತಿ ನೆರವಿಗೆ ಧಾವಿಸಿದೆ. ದೆಹಲಿಯಲ್ಲಿ ಆಕ್ಸಿಜನ್ ಕಾನ್ಸ್ಂಟ್ರೇಟರ್ ದೊರೆಯುವ ಮಾಹಿತಿ ಸಿಕ್ಕ ತಕ್ಷಣವೇ ಅಲ್ಲಿಂದ ಆಕ್ಸಿಜನ್ ಕಾನ್ಸ್ಂಟ್ರೇಟರ್ ತರಿಸಲು ಮುಂದಾಯಿತು. ಸದ್ಯ 10 ಆಕ್ಸಿಜನ್ ಕಾನ್ಸ್ಂಟ್ರೇಟರ್​ಗಳನ್ನು ತರಿಸಿ ಹೋಂ ಐಸೋಲೇಶನ್​ನಲ್ಲಿ ಇರುವ ಅಗತ್ಯ ಸೋಂಕಿತರಿಗೆ ಒದಗಿಸುತ್ತಿದೆ. ದಾಸರಹಳ್ಳಿ, ಯಲಹಂಕ, ಡಿ.ಜೆ.ಹಳ್ಳಿ ಮುಂತಾದೆಡೆ ಹೋಂ ಐಸೋಲೇಶನ್​ನಲ್ಲಿ ಇರುವ ಸೋಂಕಿತರಿಗೆ ಆಕ್ಸಿಜನ್ ಕಾನ್ಸ್ಂಟ್ರೇಟರ್​ಗಳನ್ನು ನೀಡಲಾಗಿದೆ.

ಯೋಗ ತರಬೇತಿ

ಹಿಂದಿನ ವರ್ಷ ಕೊವಿಡ್ ಹೆಚ್ಚಳವಾದಾಗಲೂ ಕೇಶವ ಸೇವಾ ಸಮಿತಿ ಕೊವಿಡ್ ವಿರುದ್ಧದ ಹೋರಾಟಕ್ಕೆ ಮುಂದಾಗಿತ್ತು. ಸ್ಲಂ ಪ್ರದೇಶಗಳಲ್ಲಿ ಮಾಸ್ಕ್, ಸ್ಯಾನಿಟೈಸರ್ ವಿತರಿಸಿ ಕೊವಿಡ್ ಜಾಗೃತಿ ಮೂಡಿಸಿತ್ತು. ಈ ಬಾರಿಯೂ ಕೇಶವ ಸೇವಾ ಸಮಿತಿಯ ಸುಮಾರು 600 ಕಾರ್ಯಕರ್ತರು ಕೊವಿಡ್ ವಿರುದ್ಧದ ಹೊರಾಟದಲ್ಲಿ ಸಕ್ರಿಯವಾಗಿದ್ದಾರೆ. 100 ಸ್ಲಂ, 54 ವಾರ್ಡ್​ಗಳಲ್ಲಿ ಕೇಶವ ಸೇವಾ ಸಮಿತಿಯ ಕಾರ್ಯವ್ಯಾಪ್ತಿ ವಿಸ್ತರಿಸಿದೆ.  ದಾನಿಗಳು, ಹಿತೈಶಿಗಳು ಕೇಶವ ಸೇವಾ ಸಮಿತಿಯ ಜತೆ ಕೈಗೂಡಿಸಿದ್ದಾರೆ.

ಬೆಂಗಳೂರು ನಗರದಲ್ಲಿ ಆಕ್ಸಿಜನ್ ಕಾನ್ಸ್ಂಟ್ರೇಟರ್ ಅಗತ್ಯ ಇರುವ ಹೋಂ ಐಸೋಲೇಶನ್​ನಲ್ಲಿರುವ ಕೊವಿಡ್ ಸೋಂಕಿತರಿಗೆ ಮೆಡಿಕಲ್ ಆಕ್ಸಿಜನ್ ಅಗತ್ಯ ಬಿದ್ದಲ್ಲಿ ಈ ಸಂಖ್ಯೆಗಳಿಗೆ ವಾಟ್ಸ್​ ಆ್ಯಪ್ ಮೂಲಕ ಸಂಪರ್ಕಿಸಬಹುದು- 994550449, 9448845195, 9845674120

ಅಗತ್ಯವುಳ್ಳವರ ನೆರವಿಗೆ ಧಾವಿಸುತ್ತಿದೆ ಕೇಶವ ಸೇವಾ ಸಮಿತಿ

ಇದನ್ನೂ ಓದಿ: ಕೊವಿಡ್ ಸಂಬಂಧಿ ಸೇವೆಗಳಿಗೆ ಆಧಾರ್ ಕಾರ್ಡ್ ಕಡ್ಡಾಯವಲ್ಲ; ಯುಐಡಿಎಐ ಸ್ಪಷ್ಟನೆ

ಕೊವಿಡ್ ವಿರುದ್ಧದ ಹೋರಾಟದಲ್ಲಿ ನಿರತ ವೈದ್ಯರಿಗೆ ಸಿಎಂ ಯಡಿಯೂರಪ್ಪ ಕೃತಜ್ಞತೆ
(Bengaluru Keshava Seva Samiti arranges oxygen concentrator to Home Isolation Covid patients)

Published On - 8:02 am, Sun, 16 May 21