
ಬೆಂಗಳೂರು: ಠೇವಣಿದಾರರಿಗೆ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದ್ದ ಕುರುಹಿನಶೆಟ್ಟಿ ಕೋ ಆಪರೇಟಿವ್ ಬ್ಯಾಂಕ್ನ (Kuruhinashetty Cooperative Bank) ಅಧ್ಯಕ್ಷನನ್ನು ಪೊಲೀಸರು ಬಂಧಿಸಿದ್ದಾರೆ. ಕೆಂಪೇಗೌಡ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2011ರಲ್ಲಿ ಕುರುಹಿನ ಶೆಟ್ಟಿ ಬ್ಯಾಂಕ್ ಸ್ಥಾಪನೆಯಾಗಿತ್ತು. ಈ ಬ್ಯಾಂಕ್ನಲ್ಲಿ ಅನೇಕ ಜನರು ಠೇವಣಿ ಇಟ್ಟಿದ್ದಾರೆ. ಆದರೆ ಬ್ಯಾಂಕ್ ಮಾತ್ರ ಠೇವಣಿದಾರರಿಗೆ ವಂಚನೆ ಮಾಡಿತ್ತು. ಬ್ಯಾಂಕ್ ಚಿಟ್ಸ್ ಕಂಪನಿ, ಜೆರಾಕ್ಸ್ ಪ್ರತಿಗಳಿಗೆ ಹೆಚ್ಚು ಸಾಲ ಮಂಜೂರು ಮಾಡುತ್ತಿತ್ತು. ಬ್ಯಾಂಕ್ ಒಂದೇ ಸ್ವತ್ತಿನ ಮೇಲೆ ಅನೇಕ ಬಾರಿ ಲೋನ್ ನೀಡುತ್ತಿತ್ತು. ಇದೇ ರೀತಿಯಾಗಿ ಅಧ್ಯಕ್ಷರು ಸೇರಿ ಐವರು ಆರೋಪಿಗಳು ಸುರಭಿ ಚಿಟ್ ಫಂಡ್ಸ್ ಚೇರ್ಮನ್ ಬಿ ಟಿ ಮೋಹನ್ಗೆ ಸುಮಾರು 75 ಕೋಟಿಗೂ ಅಧಿಕ ಸಾಲ ನೀಡಿದ್ದರು. ಹೀಗೆ ಜನರ ಹಣ ಪಡೆದು ವಂಚನೆ ಮಾಡುತ್ತಿದ್ದ ಅಧ್ಯಕ್ಷ ಬಿ ಎಲ್ ಶ್ರೀನಿವಾಸ್, ಈಶ್ವರಪ್ಪ, ದಯಾನಂದ ಹೆಗ್ಡೆ, ಚಂದ್ರಶೇಖರ್, ಬಿ ಟಿ ಮೋಹನ್ನನ್ನು ಕೆಂಪೇಗೌಡ ನಗರ ಪೊಲೀಸರು ಬಂಧಿಸಿದ್ದಾರೆ. ಕೆಂಪೇಗೌಡ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ