ಬೆಂಗಳೂರು: ತೆಂಗಿನಕಾಯಿ ಕೀಳಲು ಮರ ಏರಿದ್ದ ವ್ಯಕ್ತಿಗೆ ಹೃದಯಾಘಾತ ಸಂಭವಿಸಿ ಮರದ ಮೇಲೆಯೇ ಮೃತಪಟ್ಟಿರುವ ಘಟನೆ ಬೆಂಗಳೂರಿನ ಕೆಂಗೇರಿಯಲ್ಲಿ ನಡೆದಿದೆ. ಮೈಲಸಂದ್ರ ನಿವಾಸಿಯಾಗಿರುವ ನಾರಾಯಣಪ್ಪ(60) ಮೃತರು. ಅವರು ಬೆಳಗ್ಗೆ 7.30ರ ಸುಮಾರಿಗೆ ವೆಂಕಟರಮಣ ಸ್ವಾಮಿ ದೇವಸ್ಥಾನದ ಸಮೀಪವಿರುವ 50 ಅಡಿ ತೆಂಗಿನಮರವನ್ನು ಏರಿದ್ದಾರೆ, ಇದು ಮೊದಲ ಬಾರಿಯಲ್ಲಿ ಪ್ರತಿ ಬಾರಿಯೂ ನಾರಾಯಣಪ್ಪ ಅವರೇ ತೆಂಗಿನಕಾಯಿ ಕೀಳುತ್ತಿದ್ದರು.
ಈ ಬಾರಿಯೂ ತೆಂಗಿನ ಕಾಯಿ ಕೀಳಲೆಂದು ಮರ ಹತ್ತಿದ್ದರು, ಆದರೆ ಎಷ್ಟೊತ್ತಾದರೂ ಅವರು ಕೆಳ ಬರಲಿಲ್ಲ, ಕಾಯಿಗಳನ್ನೂ ಕಿತ್ತಿರಲಿಲ್ಲ, ಕಳೆದ 1 ಗಂಟೆಯಿಂದ ಅವರು ಕುಳಿತಲ್ಲೇ ಕುಳಿತಿದ್ದರು, ಕರೆ ಮಾಡಿದರೂ ಸ್ಪಂದನೆ ಇರಲಿಲ್ಲ. ಆಗ ಅನುಮಾನ ಮೂಡಿತ್ತು, ತಕ್ಷಣ ಅಗ್ನಿ ಶಾಮಕ ಸಿಬ್ಬಂದಿಗೆ ಕರೆ ಮಾಡಿ ಸಹಾಯ ಕೇಳಲಾಯಿತು.
ಅಗ್ನಿಶಾಮಕ ಸಿಬ್ಬಂದಿ ಕ್ರೇನ್ ಮೂಲಕ ಅವರನ್ನು ಕೆಳಗಿಳಿಸಿದ್ದಾರೆ, ಆಗ ನಾರಾಯಣಪ್ಪ ಮೃತಪಟ್ಟಿರುವುದು ಗೊತ್ತಾಗಿದೆ. ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.
ಮತ್ತಷ್ಟು ಓದಿ: Heart Attack: ನಿಮಗೆ ಹೃದಯಾಘಾತದ ಅಪಾಯ ಎದುರಾಗಬಾರದು ಎಂದಿದ್ದರೆ ಈ ಒಂದು ವಿಚಾರವನ್ನು ಸದಾ ನೆನಪಿನಲ್ಲಿಡಿ
ಮರದ ಬುಡದಲ್ಲಿ ಗೋಣಿ ಚೀಲ, ಹಗ್ಗದ ಬಂಡಲ್ ಮತ್ತು ಕುಡುಗೋಲು ಪತ್ತೆಯಾಗಿದ್ದು, ಮೃತರು ನಿತ್ಯ ತೆಂಗಿನ ಕಾಯಿ ಕೀಳಲು ಮರ ಹತ್ತುತ್ತಿದ್ದರು ಎಂಬುದು ತಿಳಿದುಬಂದಿದೆ.
ಒಂದೊಮ್ಮೆ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ಚಳಿಗಾಲದಲ್ಲಿ ತುಂಬಾ ಎಚ್ಚರಿಕೆವಹಿಸಬೇಕು, ನಾರಾಯಣಪ್ಪ ಅವರಿಗೆ ಮೊದಲಿನಿಂದ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳಿತ್ತೇ ಎಂಬುದರ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.
ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ