
ಬೆಂಗಳೂರು, ಜ.5: ಬೆಂಗಳೂರಿನ (Bengaluru) ಕಂಪನಿಯೊಂದರಲ್ಲಿ ನಡೆದ ಹೃದಯಸ್ಪರ್ಶಿ ಕ್ಷಣವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಕಾರ್ಪೊರೇಟ್ ಕಂಪನಿಯ ಬಾಸ್ ಒಬ್ಬರು ಇನ್‌ಸ್ಟಾಗ್ರಾಮ್‌ನಲ್ಲಿ ಈ ಬಗ್ಗೆ ಹಂಚಿಕೊಂಡಿದ್ದಾರೆ. ಚಿಕ್ಕ ಯಶಸ್ಸನ್ನು ದೊಡ್ಡದಾಗಿ ಆಚರಿಸಿಕೊಂಡಿರುವ ಕ್ಷಣಕ್ಕೆ ಕಂಪನಿಯೊಂದು ಸಾಕ್ಷಿಯಾಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋರ್ವಸ್ ಹೆಚ್ಚು ಪಡೆದ ಸಹೋದ್ಯೋಗಿಗಾಗಿ ಈ ವಿಶೇಷ ದಿನವನ್ನು ಉತ್ತಮವಾಗಿ ಆಚರಣೆ ಮಾಡಿಕೊಂಡಿದ್ದಾರೆ. ಈ ವಿಡಿಯೋವನ್ನು ಐಶ್ವರ್ಯ ಎಂಬ ಮಹಿಳೆ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. 2 ಸಾವಿರ ಫಾಲೋವರ್ಸ್ಗಳನ್ನು ಪಡೆದುಕೊಂಡದ್ದಕ್ಕಾಗಿ ಕಂಪನಿ ಇದನ್ನು ಸಂಭ್ರಮಿಸಿದೆ.
ಐಶ್ವರ್ಯ ಈ ವಿಡಿಯೋದಲ್ಲಿ ಬಾಸ್ ಇರುವ ರೂಮ್ಗೆ ಹೋಗುವುದನ್ನು ಕಾಣಬಹುದು, ಜತೆಗೆ ಇತರ ಸಹದ್ಯೋಗಿಗಳು ಕೂಡ ಅಲ್ಲಿ ಇದ್ದರು. ಮೊದಲಿಗೆ ಐಶ್ವರ್ಯ ಅವರಿಗೆ ಇಲ್ಲಿ ಏನಾಗುತ್ತಿದೆ ಎಂಬುದು ಅರ್ಥ ಆಗಿಲ್ಲ. ಬಾಸ್ ರೂಮ್ನಲ್ಲಿ ಇದ್ದ ಬೋರ್ಡ್ನ್ನು ನೋಡಿ ಅಚ್ಚರಿಯಿಂದ ನಗುತ್ತಾರೆ. ಜತೆಗೆ ಮೇಜಿನ ಮೇಲೆ ಇರಿಸಲಾದ ಕೇಕ್ ಅನ್ನು ಗಮನಿಸುತ್ತಾರೆ. ಈ ಕೇಕ್ನಲ್ಲಿ “2k ಅನುಯಾಯಿಗಳಿಗೆ ಶುಭಾಶಯಗಳು. ಅಭಿನಂದನೆಗಳು ಐಶು” ಎಂದು ಬರೆದಿದ್ದಾರೆ. ನಂತರ ಐಶ್ವರ್ಯ ತನ್ನ ಬಾಸ್ ಮತ್ತು ತಂಡದ ಸದಸ್ಯರೊಂದಿಗೆ ಕೇಕ್ನ್ನು ಕತ್ತರಿಸುತ್ತಾರೆ.
ಐಶ್ವರ್ಯ ತನ್ನ ವೃತ್ತಿಪರ ಪ್ರಯಾಣ ಮತ್ತು ಅದರಲ್ಲಿ ತನ್ನ ಬಾಸ್ ವಹಿಸಿದ ಜವಾಬ್ದಾರಿಯನ್ನು ಉತ್ತಮ ನಿಭಾಯಿಸಿದ್ದಾರೆ ಎಂಬುದನ್ನು ಇದು ಪ್ರತಿಬಿಂಬಿಸುತ್ತದೆ. ನನ್ನ ಕಾರ್ಪೊರೇಟ್ ಪ್ರಯಾಣದಲ್ಲಿ ನಾನು ನಿಜವಾಗಿಯೂ ಅದೃಷ್ಟಶಾಲಿ ಎಂದು ಈ ಪೋಸ್ಟ್ನಲ್ಲಿ ಹೇಳಿದ್ದಾರೆ. ಒಬ್ಬ ಉತ್ತಮ ಬಾಸ್ ಹೊಸ ವಿಷಯಗಳನ್ನು ಪ್ರಯತ್ನಿಸಲು ನಮ್ಮನ್ನು ಪ್ರೇರೇಪಿಸುತ್ತಾರೆ ಎಂದು ಬರೆದುಕೊಂಡಿದ್ದಾರೆ. ನಮ್ಮ ಬಾಸ್ ನಮಗೆ ಅಗತ್ಯವಿರುವ ಬೆಂಬಲವನ್ನು ನೀಡುತ್ತಾರೆ ಮತ್ತು ಬೆಳೆಯಲು ಪುಶ್ ನೀಡುತ್ತಾರೆ. ಅವರ ಈ ಬೆಂಬಲ ಇನ್ನಷ್ಟು ಕಲಿಯಲು, ವೃತ್ತಿಪರವಾಗಿ ಬೆಳೆಯಲು ಮತ್ತು ಹೊಸ ಅವಕಾಶಗಳು ಮತ್ತು ಕೌಶಲ್ಯಗಳನ್ನು ಪಡೆಯಲು ಸಹಾಯ ಮಾಡಿದೆ.
ಇದನ್ನೂ ಓದಿ: ಬೆಂಗಳೂರಿನ ಸಂಚಾರ ಉಲ್ಲಂಘನೆ ಗುರುತಿಸಲು ಹೆಲ್ಮೆಟ್ನ್ನು ಟ್ರಾಫಿಕ್ ಪೊಲೀಸ್ ಸಾಧನವಾಗಿ ಪರಿವರ್ತಿಸಿದ ಟೆಕ್ಕಿ
ಇನ್ನು ಈ ವಿಡಿಯೋವನ್ನು ನೋಡಿ ಅನೇಕ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಬಾಸ್ ಮತ್ತು ಕೆಲಸದ ಸ್ಥಳದ ಸಂಸ್ಕೃತಿಯನ್ನು ಅನೇಕರು ಶ್ಲಾಘಿಸಿದ್ದಾರೆ. ಬಾಸ್ಗಳ ಒತ್ತಡದ ನಡುವೆ ಇಂತಹ ಕೆಲಸದ ಬೆಳವಣಿಗೆಯನ್ನು ಪೋತ್ಸಾಹಿಸುವುದು ಉತ್ತಮ ಎಂದು ಇನ್ನೊಬ್ಬರು ಹೇಳಿದ್ದಾರೆ. ಇದು ತುಂಬಾ ಹೃದಯಸ್ಪರ್ಶಿಯಾಗಿದೆ ಎಂದು ಮತ್ತೊಬ್ಬರು ಹೇಳಿದ್ದಾರೆ. ನನಗೆ ಈ ಕ್ಲಿಪ್ ನಿಜವಾಗಿಯೂ ಇಷ್ಟವಾಯಿತು, ಪ್ರತಿಯೊಬ್ಬರೂ ಅವರಂತಹ ಬಾಸ್ ಅನ್ನು ಬಯಸುತ್ತಾರೆ ಎಂದು ಮತ್ತೊಬ್ಬರು ಹೇಳಿದ್ದಾರೆ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ