
ಬೆಂಗಳೂರು, ಜ.22: ಸಾಮಾನ್ಯವಾಗಿ ಪೊಲೀಸರು ಎಲ್ಲ ಮುಗಿದ ಮೇಲೆ ಘಟನಾ ಸ್ಥಳಕ್ಕೆ ಬರುತ್ತಾರೆ ಎಂಬ ಮಾತಿದೆ. ಆದರೆ ಈ ಮಾತು ತಪ್ಪು, ಏಕೆಂದರೆ ಪೊಲೀಸರು ಕೂಡ ಜನರನ್ನು ರಕ್ಷಣೆ ಮಾಡಿರುವ ಹಲವು ಘಟನೆಗಳು ಇದೆ . ಇದೀಗ ಇಲ್ಲೊಂದು ಪೊಲೀಸರ ತಕ್ಷಣದ ಸ್ಪಂದನೆಯಿಂದ ಜೀವವೊಂದು ಉಳಿದಿದೆ. ಈ ಘಟನೆಯಿಂದ ಪೊಲೀಸರ ಮೇಲೆ ಮತ್ತಷ್ಟು ನಂಬಿಕೆಯನ್ನು ಹುಟ್ಟಿಸಿದೆ. ಪೊಲೀಸರು ಸರಿಯಾದ ಸಮಯಕ್ಕೆ ಬಂದು ಒಂದು ಜೀವವನ್ನು ಉಳಿಸಿರುವ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ಇದೀಗ ಬೆಂಗಳೂರಿನ ಪೊಲೀಸರು ಜನರಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಹುಳಿಮಾವು ಠಾಣೆ ವ್ಯಾಪ್ತಿಯ ಬಸವನಪುರದಲ್ಲಿ ಜ.20ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಪಶ್ಚಿಮ ಬಂಗಾಳ ಮೂಲದ ಯುವತಿಯನ್ನು ರಕ್ಷಣೆ ಮಾಡಲಾಗಿದೆ.
ಕೋಣನಕುಂಟೆ ಠಾಣೆ ಹೊಯ್ಸಳ ಪೊಲೀಸರು ಸರಿಯಾದ ಸಮಯಕ್ಕೆ ಬಂದು ಯುವತಿಯ ಜೀವ ಉಳಿಸಿದ್ದಾರೆ. ಯುವತಿ ವಿಷ ಸೇವನೆ ಮಾಡಿದ ಬಳಿಕ ತಂದೆಗೆ ಕರೆ ಮಾಡಿದ್ದಾಳೆ. ಇದರಿಂದ ಗಾಬರಿಗೊಂಡು ಏನು ಮಾಡಬೇಕು ಎಂದು ತೋಚದೆ, ತಂದೆ 112 ಗೆ ಕರೆ ಮಾಡಿದ್ದಾರೆ. ತಕ್ಷಣ ಕೋಣನಕುಂಟೆ ಠಾಣೆ ಹೊಯ್ಸಳ ಪೊಲೀಸರು ಕಾರ್ಯಪ್ರವೃತ್ತರಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಕೋಣನಕುಂಟೆ ಠಾಣೆ ಎಎಸ್ಐ ಶ್ರೀನಿವಾಸ ಮೂರ್ತಿ, ಕಾನ್ಸಟೇಬಲ್ ಮಂಜುನಾಥ್ ಈ ಯುವತಿಯನ್ನು ರಕ್ಷಣೆ ಮಾಡಿದ್ದಾರೆ. ಇದೀಗ ಯುವತಿ ಸುರಕ್ಷಿತವಾಗಿದ್ದು, ಯಾವುದೇ ತೊಂದರೆ ಇಲ್ಲ ಎಂದು ಹೇಳಲಾಗಿದೆ. ಆದರೆ ಆಕೆ ಯಾವ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಂಡಿದ್ದಾಳೆ ಎಂದು ತಿಳಿದಿಲ್ಲ.
ಇದನ್ನೂ ಓದಿ: ಕೆಲಸ ಹುಡುಕಲು ಹೋದವಳು ಶವವಾಗಿ ಪತ್ತೆ, ಇಷ್ಟಪಟ್ಟವನೊಂದಿಗೆ ಬಾಳುವ ಮೊದಲೇ ದುರಂತ ಅಂತ್ಯ
ಬೆಂಗಳೂರಿನ ಬೊಮ್ಮನಹಳ್ಳಿಯ ಹೊಂಗಸಂದ್ರದಲ್ಲಿ ಕಿರುಕುಳ ನೀಡುತ್ತಿದ್ದ ಪತಿಯನ್ನೇ ಪತ್ನಿ ಕೊಲೆ ಮಾಡಿದ್ದಾಳೆ. ಮೊದಲನೇ ಮಗಳು ಮನೆಬಿಟ್ಟು ಹೋಗಿದ್ದಕ್ಕೆ ಪತ್ನಿಗೆ ಪ್ರತಿದಿನ ಕಿರುಕುಳ ನೀಡುತ್ತಿದ್ದ ಮುರುಗೇಶ್ (50), ಇದರಿಂದ ಬೆಸತ್ತು ಪತ್ನಿ ಲಕ್ಷ್ಮೀ ಕೊಲೆ ಮಾಡಿದ್ದಾಳೆ. ಈ ಘಟನೆ ಜ.20ರಂದು ನಡೆದಿದೆ. ಈ ದಂಪತಿಗಳಿಗೆ ಇಬ್ಬರು ಹೆಣ್ಣು ಮಕ್ಕಳಿದ್ರೂ ಮೊದಲನೇ ಮಗಳಿಗೆ ಮದುವೆಯಾಗಿತ್ತು. ಆದರೆ ಎರಡನೇ ಮಗಳು ಮನೆ ಬಿಟ್ಟು ಹೋಗಿದ್ದಳು. ಈ ಕಾರಣಕ್ಕೆ ಅದೇ ದಿನ ರಾತ್ರಿ ಲಕ್ಷ್ಮೀ ಜೊತೆಗೆ ಮುರುಗೇಶ್ ಜಗಳ ಮಾಡಿಕೊಂಡಿದ್ದಾನೆ. ಇದರಿಂದ ಕೋಪಗೊಂಡು ಲಕ್ಷ್ಮೀ ಮುರುಗೇಶ್ ಅನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾಳೆ. ಇದೀಗ ಈ ಬಗ್ಗೆ ಬೊಮ್ಮನಹಳ್ಳಿ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ತನಿಖೆ ನಡೆಸಿದ್ದಾರೆ.
ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:10 am, Thu, 22 January 26