ಇಂದಿನಿಂದ 60 ದಿನಗಳ ಕಾಲ ರೇಸ್ ಕೋರ್ಸ್ ರಸ್ತೆ ಬಂದ್: ಪರ್ಯಾಯ ಮಾರ್ಗ ವಿವರ ಇಲ್ಲಿದೆ

ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿ ವೈಟ್‌ಟಾಪಿಂಗ್ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಅಕ್ಟೋಬರ್ 5 ರಿಂದ ಮುಂದಿನ 60 ದಿನಗಳ ಕಾಲ ವಾಹನ ಸಂಚಾರ ನಿಷೇಧಿಸಲಾಗಿದೆ. ಮೌರ್ಯ ಜಂಕ್ಷನ್ ಹಾಗೂ ಶಿವಾನಂದ ವೃತ್ತದ ನಡುವೆ ತೆರಳುವ ವಾಹನ ಸವಾರರಿಗೆ ಸಂಚಾರ ಪೊಲೀಸರು ಪರ್ಯಾಯ ಮಾರ್ಗಗಳನ್ನು ಪ್ರಕಟಿಸಿದ್ದಾರೆ. ರೇಸ್ ಕೋರ್ಸ್ ರಸ್ತೆ ಬಂದ್ ಹಾಗೂ ಬದಲಾಯಿಸಲಾದ ಸಂಚಾರ ಮಾರ್ಗಗಳ ಸಂಪೂರ್ಣ ವಿವರ ಇಲ್ಲಿದೆ.

ಇಂದಿನಿಂದ 60 ದಿನಗಳ ಕಾಲ ರೇಸ್ ಕೋರ್ಸ್ ರಸ್ತೆ ಬಂದ್: ಪರ್ಯಾಯ ಮಾರ್ಗ ವಿವರ ಇಲ್ಲಿದೆ
ಇಂದಿನಿಂದ 60 ದಿನಗಳ ಕಾಲ ರೇಸ್ ಕೋರ್ಸ್ ರಸ್ತೆ ಬಂದ್
Image Credit source: Deccan herald

Updated on: Oct 05, 2026 | 9:11 AM

ಮುಖ್ಯಾಂಶಗಳು

  • ರೇಸ್ ಕೋರ್ಸ್ ರಸ್ತೆಯಲ್ಲಿ ವೈಟ್‌ಟಾಪಿಂಗ್ ಕಾಮಗಾರಿ ಹಿನ್ನೆಲೆ ಸಂಚಾರ ಬಂದ್ ಮಾಡಲಾಗಿದೆ.
  • ಅಕ್ಟೋಬರ್ 5 ರಿಂದ 60 ದಿನಗಳ ಕಾಲ ಮಾರ್ಗ ಬದಲಾವಣೆ.
  • ವಾಹನ ಸವಾರರಿಗೆ ಪರ್ಯಾಯ ರಸ್ತೆ ಬಳಸಲು ಸಂಚಾರ ಪೊಲೀಸರ ಸೂಚನೆ.

ಬೆಂಗಳೂರು, ಅಕ್ಟೋಬರ್ 05: ನಗರದ ಪ್ರಮುಖ ರಸ್ತೆಗಳಲ್ಲಿ ಒಂದಾದ ರೇಸ್ ಕೋರ್ಸ್ ರಸ್ತೆಯಲ್ಲಿ ಮೌರ್ಯ ಜಂಕ್ಷನ್‌ನಿಂದ ಹರೇ ಕೃಷ್ಣ ರಸ್ತೆ ಜಂಕ್ಷನ್‌ವರೆಗೆ ವೈಟ್‌ಟಾಪಿಂಗ್ ಕಾಮಗಾರಿಯನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 5 ರಿಂದ ಅನ್ವಯವಾಗುವಂತೆ ಮುಂದಿನ 60 ದಿನಗಳ ಕಾಲ ಈ ಮಾರ್ಗದಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಪರ್ಯಾಯ ಮಾರ್ಗಗಳಲ್ಲಿ ಸಂಚರಿಸಲು ಟ್ರಾಫಿಕ್ ಪೊಲೀಸರು ಸೂಚಿಸಿದ್ದಾರೆ.

ಮೌರ್ಯ ಜಂಕ್ಷನ್‌ ಕಡೆಗೆ ಹೋಗುವ ವಾಹನಗಳಿಗೆ ಪ್ರವೇಶ ನಿಷೇಧ

ಶಿವಾನಂದ ಜಂಕ್ಷನ್‌ನಿಂದ ಮೌರ್ಯ ಜಂಕ್ಷನ್‌ ಕಡೆಗೆ ಹಾಗೂ ಟ್ರೈಲೈಟ್ ಜಂಕ್ಷನ್‌ನಿಂದ ಮೌರ್ಯ ಜಂಕ್ಷನ್‌ ಕಡೆಗೆ ಹೋಗುವ ವಾಹನಗಳಿಗೆ ಪ್ರವೇಶ ನಿಷೇಧಿಸಲಾಗಿದೆ. ಸಂಕಿ ರಸ್ತೆಯಿಂದ ಕೆ.ಆರ್. ಮಾರ್ಕೆಟ್ ಕಡೆಗೆ ತೆರಳುವ ಬಿಎಂಟಿಸಿ, ಖಾಸಗಿ ಬಸ್‌ಗಳು ಮತ್ತು ಭಾರಿ ವಾಹನಗಳು ವಿಂಡ್ಸರ್ ಮ್ಯಾನರ್‌ನಿಂದ ಎಲ್‌ಆರ್‌ಡಿಇ ಜಂಕ್ಷನ್‌ಗೆ ತೆರಳಿ, ಬಲಕ್ಕೆ ತಿರುವು ಪಡೆದು ಬಸವೇಶ್ವರ ಜಂಕ್ಷನ್ ಮೂಲಕ ಸಾಗಬೇಕಾಗುತ್ತದೆ.

ಪರ್ಯಾಯ ಮಾರ್ಗ ಹೀಗಿದೆ

ಮಜೆಸ್ಟಿಕ್ ಕಡೆಗೆ ಹೋಗುವ ವಾಹನಗಳು ಸಂಕಿ ರಸ್ತೆಯಿಂದ ಕುಮಾರ ಕೃಪಾ ರಸ್ತೆ ಮಾರ್ಗವಾಗಿ ಶಿವಾನಂದ ವೃತ್ತ ತಲುಪಿ, ಬಲಕ್ಕೆ ತಿರುಗಿ ಎಸ್‌ಸಿ ರಸ್ತೆ ಹಿಡಿದು ಸಾಗಬಹುದು. ಹಳೆಯ ಜೆಡಿಎಸ್ ಜಂಕ್ಷನ್‌ನಿಂದ ಟ್ರೈಲೈಟ್ ಜಂಕ್ಷನ್ ಕಡೆಗೆ ತೆರಳುವವರು ರೇಸ್‌ವ್ಯೂ ಜಂಕ್ಷನ್‌ನಲ್ಲಿ ಎಡಕ್ಕೆ ತಿರುಗಿ ಕುಮಾರ ಕೃಪಾ ರಸ್ತೆಯ ಮೂಲಕ ಶಿವಾನಂದ ಜಂಕ್ಷನ್ ತಲುಪಬಹುದು.

ಇನ್ನು ಟ್ರೈಲೈಟ್ ಜಂಕ್ಷನ್‌ನಿಂದ ಮೌರ್ಯ ಜಂಕ್ಷನ್‌ಗೆ ಹೋಗುವ ವಾಹನ ಸವಾರರು ಶಿವಾನಂದ ಫ್ಲೈಓವರ್ ಬಳಸಿ, ನೆಹರೂ ವೃತ್ತದ ಮೂಲಕ ಎಸ್‌ಸಿ ರಸ್ತೆ ಸೇರಿ ಮಜೆಸ್ಟಿಕ್ ತಲುಪಬಹುದಾಗಿದೆ. ಕಾಮಗಾರಿ ಮುಗಿಯುವವರೆಗೆ ಸಾರ್ವಜನಿಕರು ಹಾಗೂ ವಾಹನ ಸವಾರರು ಸಂಚಾರ ಪೊಲೀಸರ ಸೂಚನೆಗಳನ್ನು ಪಾಲಿಸಿ ಸಹಕರಿಸುವಂತೆ ಕೋರಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:08 am, Mon, 5 October 26

ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More
Loading...
Unable to load recommendations.
Follow Us