ಬೆಂಗಳೂರು: ಬೆಂಗಳೂರಿನ ನಿರ್ಮಾಣ ಹಂತದ ಕಟ್ಟಡದಲ್ಲಿ ಅಸ್ತಿಪಂಜರ ಪತ್ತೆ

ಬೆಂಗಳೂರಿನಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಅಸ್ತಿಪಂಜರ ಪತ್ತೆಯಾಗಿದೆ. ಕೊತ್ತನೂರು ಠಾಣಾ ವ್ಯಾಪ್ತಿಯ ಕಟ್ಟಡದಲ್ಲಿ ಪತ್ತೆಯಾಗಿದ್ದು, ಇದು 7-8 ತಿಂಗಳ ಹಿಂದೆ ಸಾವನ್ನಪ್ಪಿರುವ ವ್ಯಕ್ತಿಯದ್ದು ಎಂದು ಹೇಳಲಾಗಿದೆ. ಕಟ್ಟಡದ ಪ್ರಕರಣ ಕೋರ್ಟ್​ನಲ್ಲಿ ಇದ್ದ ಕಾರಣ ಹತ್ತು ವರ್ಷಗಳಿಂದ ಕಟ್ಟಡ ನಿರ್ಮಾಣ ನಿಲ್ಲಿಸಲಾಗಿತ್ತು. ಇದೀಗ ಈ ಕಟ್ಟಡದಲ್ಲಿ ಮತ್ತೆ ಕೆಲಸ ಶುರು ಮಾಡಬೇಕು ಎಂದು ಮಾಲೀಕ ಸೇರಿದಂತೆ ಕಾರ್ಮಿಕರು ಸ್ವಚ್ಛ ಮಾಡಲು ಬಂದಿರುವಾಗ ಈ ಅಸ್ತಿಪಂಜರ ಪತ್ತೆಯಾಗಿದೆ.

ಬೆಂಗಳೂರು: ಬೆಂಗಳೂರಿನ ನಿರ್ಮಾಣ ಹಂತದ ಕಟ್ಟಡದಲ್ಲಿ ಅಸ್ತಿಪಂಜರ ಪತ್ತೆ
ಸಾಂದರ್ಭಿಕ ಚಿತ್ರ

Updated on: Oct 04, 2025 | 2:27 PM

ಬೆಂಗಳೂರು, ಅ.4: ಬೆಂಗಳೂರಿನಲ್ಲಿ (Bengaluru skeleton) ಅಚ್ಚರಿಯ ಘಟನೆಯೊಂದು ನಡೆದಿದೆ. ನಗರದ ನಿರ್ಮಾಣ ಹಂತದ ಕಟ್ಟಡದಲ್ಲಿ ಅಸ್ತಿಪಂಜರಯೊಂದು ಪತ್ತೆಯಾಗಿದೆ. ಇದೀಗ ಈ ಘಟನೆ ನಗರದಲ್ಲಿ ಆತಂಕ ಸೃಷ್ಟಿಸಿದೆ. ಕೊತ್ತನೂರು ಬಳಿಯಲ್ಲಿರುವ ಅಪಾರ್ಟ್ಮೆಂಟ್​​ನಲ್ಲಿ ಈ ಅಸ್ತಿಪಂಜರ ಪತ್ತೆಯಾಗಿದ್ದು, ಈ ಅಸ್ತಿಪಂಜರ 7-8 ತಿಂಗಳ ಹಿಂದೆ ಸಾವನ್ನಪ್ಪಿರುವ ವ್ಯಕ್ತಿಯದ್ದು ಎಂದು ಹೇಳಲಾಗಿದೆ. ಕಟ್ಟಡಕ್ಕೆ ಸಂಬಂಧಿಸಿದ ಪ್ರಕರಣವೊಂದು ಕೋರ್ಟ್​​​ನಲ್ಲಿದ್ದ ಕಾರಣ ಕಳೆದ 10ವರ್ಷದಿಂದ ಇಲ್ಲಿ ಯಾವುದೇ ರೀತಿಯ ನಿರ್ಮಾಣ ಕೆಲಸಗಳು ನಡೆದಿರಲಿಲ್ಲ. ಹಾಗಾಗಿ ಈ ಕಟ್ಟಡ ಪಾಳು ಬಿದ್ದಿತ್ತು. ಇಲ್ಲಿ ಅನೇಕ ಅಕ್ರಮ ಚಟುವಟಿಕೆಗಳು ಕೂಡ ನಡೆಯುತ್ತಿತ್ತು ಎಂದು ಹೇಳಲಾಗಿದೆ.

ಹತ್ತು ವರ್ಷಗಳಿಂದ ಕಟ್ಟಡ ನಿರ್ಮಾಣ ಸ್ಥಗಿತಗೊಂಡಿತ್ತು. ಇದೀಗ ನೆನ್ನೆ ಶುಕ್ರವಾರ (ಅ.3)ದಂದು ಮತ್ತೆ ಕೆಲಸ ಶುರು ಮಾಡಬೇಕೆಂದು ಕಟ್ಟಡ ಬಳಿ ಬಂದು ಸ್ವಚ್ಛ ಮಾಡಬೇಕು ಮಾಲೀಕರು ಬಂದಿದ್ದಾರೆ. ಈ ವೇಳೆ ಈ ಅಸ್ತಿಪಂಜರ ಸಿಕ್ಕಿದೆ. ಮಾಲೀಕ ಸೇರಿದಂತೆ ಕಾರ್ಮಿಕರುಈ ಸ್ಥಳಕ್ಕೆ ಬಂದು ಸ್ಛಚ್ಛ ಮಾಡುತ್ತಿರುವಾಗ ಈ ಅಸ್ತಿಪಂಜರ ಸಿಕ್ಕಿದೆ ಪೊಲೀಸರ ಬಳಿ ಹೇಳಿಕೊಂಡಿದ್ದಾರೆ. ಇನ್ನು ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಜತೆಗೆ ಸೋಕೋ ಟೀಂ ಕೂಡ ಅಸ್ತಿಪಂಜರ ಇರುವ ಸ್ಥಳಕ್ಕೆ ಬಂದಿದೆ. ಇದೀಗ ಪೊಲೀಸರು  ಈ ಬಗ್ಗೆ ತನಿಖೆಯನ್ನು ನಡೆಸಿದ್ದಾರೆ.

ಇದನ್ನೂ ಓದಿ: ಜಾತಿಗಣತಿ ಹೆಸರಿನಲ್ಲಿ ಬಂದು ಮಹಿಳೆ ಮೇಲೆ ಹಲ್ಲೆ: ದರೋಡೆಗೆ ಯತ್ನ?

ಸೋಕೋ ಟೀಂ ಅಸ್ತಿಪಂಜರ ಪರಿಶೀಲನೆ ನಡೆಸಿ FSLಗೆ ಕಳುಹಿಸಿದೆ. ಇದನ್ನು ಕೊತ್ತನೂರು ಪೊಲೀಸರು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೊತ್ತನೂರು ಬಳಿಯ ಅಪಾರ್ಟ್​​ಮೆಂಟ್​ನ ನಾಲ್ಕನೇ ಮಹಡಿಯಲ್ಲಿ ಪತ್ತೆಯಾಗಿರುವ ಈ ಅಸ್ತಿಪಂಜರವನ್ನು ಇದು ಸುಮಾರು 35 ರಿಂದ 40 ವರ್ಷ ವಯಸ್ಸಿನ ಗಂಡಸಿನದ್ದು ಎಂದು ಹೇಳಲಾಗಿದೆ. ಪ್ಯಾಂಟ್ ಹಾಗೂ ಶರ್ಟ್ ಧರಿಸಿ ಮಲಗಿದ್ದ ಸ್ಥಿತಿಯಲ್ಲಿ ಅಸ್ಥಿಪಂಜರ ಪತ್ತೆಯಾಗಿದ್ದು, ಈ ಸಾವಿಗೆ ಹಾಗೂ ಇದು ಯಾರ ಅಸ್ತಿಪಂಜರ ಎಂದು ಪತ್ತೆ ಮಾಡಬೇಕಿದೆ. ಈ ಬಗ್ಗೆ ಕೊತ್ತನೂರು ಪೊಲೀಸರು ಹೆಚ್ಚಿನ ತನಿಖೆಯನ್ನು ನಡೆಸುವುದಾಗಿ ಹೇಳಿಕೊಂಡಿದ್ದಾರೆ.

ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

Published On - 1:41 pm, Sat, 4 October 25