ವೃದ್ಧಾಪ್ಯದಲ್ಲೂ ಉದ್ಯೋಗದ ಹುಡುಕಾಟ: ಬೆಂಗಳೂರು ಸಮೀಕ್ಷೆಯ ಆತಂಕಕಾರಿ ವರದಿ!

ಬೆಂಗಳೂರಿನಲ್ಲಿ ನಡೆಸಲಾದ ಸಮೀಕ್ಷೆಯೊಂದರ ಪ್ರಕಾರ, ಆರ್ಥಿಕ ಅಭದ್ರತೆ ಹಾಗೂ ಹೆಚ್ಚುತ್ತಿರುವ ವೈದ್ಯಕೀಯ ವೆಚ್ಚಗಳಿಂದಾಗಿ ಹಿರಿಯ ನಾಗರಿಕರು ಮತ್ತೆ ಉದ್ಯೋಗ ಹುಡುಕುವ ಅನಿವಾರ್ಯತೆಗೆ ಸಿಲುಕಿದ್ದಾರೆ. ಇನ್ನೊಂದೆಡೆ, ಸೂಕ್ತ ಕೌಶಲ್ಯವಿದ್ದರೂ ಯುವಜನರಿಗೂ ಉದ್ಯೋಗ ಸಿಗದೆ ಪರದಾಡುತ್ತಿರುವ ಸ್ಥಿತಿ ನಿರ್ಮಾಣವಾಗಿದೆ. ದೇಶದ ಆರ್ಥಿಕ ಪರಿಸ್ಥಿತಿ ಹಾಗೂ ಉದ್ಯೋಗ ಬಿಕ್ಕಟ್ಟಿನ ವಿವರಣಾತ್ಮಕ ವರದಿ ಇಲ್ಲಿದೆ.

ವೃದ್ಧಾಪ್ಯದಲ್ಲೂ ಉದ್ಯೋಗದ ಹುಡುಕಾಟ: ಬೆಂಗಳೂರು ಸಮೀಕ್ಷೆಯ ಆತಂಕಕಾರಿ ವರದಿ!
ಸಾಂದರ್ಭಿಕ ಚಿತ್ರ

Updated on: Oct 25, 2026 | 8:45 AM

ಮುಖ್ಯಾಂಶಗಳು

  • ಆರ್ಥಿಕ ಸಂಕಷ್ಟದಿಂದಾಗಿ ಬೆಂಗಳೂರಿನಲ್ಲಿ ವೃದ್ಧರು ಉದ್ಯೋಗದ ಹುಡುಕಾಟದಲ್ಲಿದ್ದಾರೆ.
  • ಪಿಂಚಣಿ ಕೊರತೆ ಹಾಗೂ ವೈದ್ಯಕೀಯ ವೆಚ್ಚಗಳು ಹಿರಿಯರನ್ನು ಉದ್ಯೋಗಕ್ಕೆ ತಳ್ಳುತ್ತಿವೆ.
  • ಮಾರುಕಟ್ಟೆಯಲ್ಲಿ ಅನುಭವಿ ಹಿರಿಯರಿಗೂ ಮತ್ತು ಪದವೀಧರ ಯುವಕರಿಗೂ ಕೆಲಸ ಸಿಗುತ್ತಿಲ್ಲ.

ಬೆಂಗಳೂರು, ಅಕ್ಟೋಬರ್ 25: ಇಂದಿನ ಕಾಲದಲ್ಲಿ ಯುವಕರೇ ಕೆಲಸಕ್ಕಾಗಿ ಹಪಹಪಿಸುತ್ತಿರುವಾಗ ಬೆಂಗಳೂರಿನಲ್ಲಿ ನಡೆಸಲಾದ ಇತ್ತೀಚಿನ ಸಮೀಕ್ಷೆಯೊಂದರ ಪ್ರಕಾರ, ಆರ್ಥಿಕ ಅಸ್ಥಿರತೆ ಮತ್ತು ಜೀವನ ನಿರ್ವಹಣೆಯ ಬಿಕ್ಕಟ್ಟು ಹಿರಿಯ ನಾಗರಿಕರನ್ನು ಈ ಇಳಿವಯಸ್ಸಿನಲ್ಲೂ ಕೆಲಸ ಹುಡುಕುವಂತೆ ಒತ್ತಾಯಿಸುತ್ತಿದೆ. ಪಿಂಚಣಿ ಸಾಕಾಗದೆ ಇರುವುದು, ದುಬಾರಿ ವೈದ್ಯಕೀಯ ವೆಚ್ಚಗಳು ಮತ್ತು ಕುಟುಂಬದ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವ ಅನಿವಾರ್ಯತೆಯಿಂದಾಗಿ ಸಾಕಷ್ಟು ವೃದ್ಧರು ಉದ್ಯೋಗ ಮಾರುಕಟ್ಟೆಗೆ ಮರಳುತ್ತಿದ್ದಾರೆ. ಆದರೆ, ಯುವಕರಿಗೇ ಉದ್ಯೋಗ ಸಿಗದ ಪರಿಸ್ಥಿತಿಯಲ್ಲಿ ಹಿರಿಯ ನಾಗರಿಕರು ಉದ್ಯೋಗವನ್ನರಸಿ ಹೋಗುತ್ತಿರುವುದು ದೊಡ್ಡ ಪ್ರಶ್ನೆಯಾಗಿದೆ.

ಆರ್ಥಿಕ ಭದ್ರತೆಯ ಕೊರತೆ

ಉದ್ಯೋಗಕ್ಕಾಗಿ ಅಲೆಯುತ್ತಿರುವ ಹಿರಿಯ ನಾಗರಿಕರಲ್ಲಿ ಬಹುಪಾಲು ಮಂದಿ ತಮ್ಮ ದೈನಂದಿನ ಅವಶ್ಯಕತೆಗಳು ಹಾಗೂ ವೈದ್ಯಕೀಯ ಖರ್ಚುಗಳಿಗಾಗಿ ಪರದಾಡುತ್ತಿದ್ದಾರೆ. ಸಂಸಾರದ ಜವಾಬ್ದಾರಿ ಮತ್ತು ಹಣಕಾಸಿನ ಮುಗ್ಗಟ್ಟು ಅವರನ್ನು ವಿಶ್ರಾಂತಿ ಪಡೆಯುವ ವಯಸ್ಸಿನಲ್ಲೂ ದುಡಿಯುವಂತೆ ಮಾಡಿದೆ. ಈ ಸಮೀಕ್ಷೆಯ ವರದಿಯಂತೆ, ವೃದ್ಧರಿಗೆ ಸೂಕ್ತ ಕೆಲಸ ಸಿಗುವುದು ಕಷ್ಟಕರವಾಗಿದ್ದು, ಮಾರುಕಟ್ಟೆಯಲ್ಲಿ ಕಿರಿಯ ವಯಸ್ಸಿನವರೇ ಮೊದಲ ಆದ್ಯತೆಯಾಗುತ್ತಿರುವುದು ಹಿರಿಯರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದೆ.

ಯುವಜನರ ಉದ್ಯೋಗದ ಪರದಾಟ

ಇತ್ತೀಚಿನ ವರ್ಷಗಳಲ್ಲಿ ಕೇವಲ ಹಿರಿಯರು ಮಾತ್ರವಲ್ಲದೆ, ಅತ್ಯುತ್ತಮ ಡಿಗ್ರಿ ಹಾಗೂ ತಾಂತ್ರಿಕ ಕೌಶಲ್ಯ ಹೊಂದಿರುವ ಲಕ್ಷಾಂತರ ಯುವಕ-ಯುವತಿಯರು ಕೂಡ ಉದ್ಯೋಗ ಸಿಗದೆ ಬೀದಿಪಾಲಾಗುತ್ತಿದ್ದಾರೆ. ದಿಢೀರ್ ಉದ್ಯೋಗ ಕಡಿತ , ಸ್ಪರ್ಧಾತ್ಮಕತೆಯ ಕೊರತೆ ಮತ್ತು ಖಾಲಿ ಹುದ್ದೆಗಳಿಗಿಂತ ನೌಕಾಕಾಂಕ್ಷಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿರುವುದು ಇದಕ್ಕೆ ಪ್ರಮುಖ ಕಾರಣ. ಓದು ಮುಗಿಸಿ ಉದ್ಯೋಗಕ್ಕಾಗಿ ವರ್ಷಗಟ್ಟಲೆ ಕಾಯುತ್ತಿರುವ ಯುವಜನರ ಗೋಳು ಕೇಳುವವರೇ ಇಲ್ಲದಂತಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More
Loading...
Unable to load recommendations.
Follow Us