ನಾನು ಸೈಲೆಂಟ್ ಇರಬಹುದು, ಆದರೆ ಕೆಲಸದ ವಿಚಾರದಲ್ಲಿ ಸುಮ್ಮನಿರೋಲ್ಲ; ಅಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ತರಾಟೆ

ಆಡಳಿತದಲ್ಲಿ ಚುರುಕುಮುಟ್ಟಿಸಲು ಮುಂದಾದ ಸಿಎಂ ಬಸವರಾಜ ಬೊಮ್ಮಾಯಿ ವಿಕಾಸಸೌಧದಲ್ಲಿ ಕೆಡಿಪಿ ಸಭೆ ನಡೆಸುತ್ತಿದ್ದಾರೆ. ಪ್ರತಿ ಕೆಡಿಪಿ ಸಭೆಯನ್ನ ಸಿಎಸ್ ನಡೆಸುತ್ತಿದ್ದರು. ಅಭಿವೃದ್ಧಿ ವಿಚಾರದಲ್ಲಿ ಸಾಕಷ್ಟು ದೂರು ಬಂದ ಹಿನ್ನೆಲೆಯಲ್ಲಿ ಸ್ವತಃ ಸಿಎಂ ಬೊಮ್ಮಾಯಿ ಕೆಡಿಪಿ ಸಭೆ ನಡೆಸುತ್ತಿದ್ದಾರೆ. ಸದ್ಯ ಸಭೆಯಲ್ಲಿ ಸಿಎಂ ಅಧಿಕಾರಿಗಳ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.

ನಾನು ಸೈಲೆಂಟ್ ಇರಬಹುದು,  ಆದರೆ ಕೆಲಸದ ವಿಚಾರದಲ್ಲಿ ಸುಮ್ಮನಿರೋಲ್ಲ; ಅಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ತರಾಟೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Updated By: ಆಯೇಷಾ ಬಾನು

Updated on: Aug 31, 2021 | 1:00 PM

ಬೆಂಗಳೂರು: ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತರಾಟೆಗೆ ತೆಗೆದುಕೊಂಡಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳ ಅನುಷ್ಠಾನ ಸರಿಯಾಗಿ ಆಗ್ತಿಲ್ಲ. ಅನುಷ್ಠಾನದಲ್ಲಿ ಅಧಿಕಾರಿಗಳು ಸರಿಯಾಗಿ ತೊಡಗಿಸಿಕೊಳ್ಳುತ್ತಿಲ್ಲ. ಇದರಿಂದ ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ಅಧಿಕಾರಿಗಳ ವಿರುದ್ಧ ಸಿಎಂ ಬೊಮ್ಮಾಯಿ ಗರಂ ಆಗಿದ್ದಾರೆ.

ಆಡಳಿತದಲ್ಲಿ ಚುರುಕುಮುಟ್ಟಿಸಲು ಮುಂದಾದ ಸಿಎಂ ಬಸವರಾಜ ಬೊಮ್ಮಾಯಿ ವಿಕಾಸಸೌಧದಲ್ಲಿ ಕೆಡಿಪಿ ಸಭೆ ನಡೆಸುತ್ತಿದ್ದಾರೆ. ಪ್ರತಿ ಕೆಡಿಪಿ ಸಭೆಯನ್ನ ಸಿಎಸ್ ನಡೆಸುತ್ತಿದ್ದರು. ಅಭಿವೃದ್ಧಿ ವಿಚಾರದಲ್ಲಿ ಸಾಕಷ್ಟು ದೂರು ಬಂದ ಹಿನ್ನೆಲೆಯಲ್ಲಿ ಸ್ವತಃ ಸಿಎಂ ಬೊಮ್ಮಾಯಿ ಕೆಡಿಪಿ ಸಭೆ ನಡೆಸುತ್ತಿದ್ದಾರೆ. ಸದ್ಯ ಸಭೆಯಲ್ಲಿ ಸಿಎಂ ಅಧಿಕಾರಿಗಳ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. ಈ ವೇಳೆ ಅವರು, ಪ್ರತಿ ಕೆಡಿಪಿ ಸಭೆಯನ್ನು ನಾನೇ ತೆಗೆದುಕೊಳ್ತೇನೆ. ಅಭಿವೃದ್ಧಿ ಕೆಲಸಗಳ ಅನುಷ್ಠಾನ ಸರಿಯಾಗಿ ನಡೆಯುತ್ತಿಲ್ಲ.

ಅನುಷ್ಠಾನದಲ್ಲಿ ನೀವು ಸರಿಯಾಗಿ ತೊಡಗಿಸಿಕೊಳ್ತಿಲ್ಲ. ಇದರಿಂದ ಸರ್ಕಾರಕ್ಕೂ ಕೆಟ್ಟ ಹೆಸರು. ಇನ್ನುಮುಂದೆ ಇದಕ್ಕೆಲ್ಲಾ ನಾನು ಅವಕಾಶ ಕೊಡುವುದಿಲ್ಲ. ನಾನು ಸೈಲೆಂಟ್ ಇರಬಹುದು, ಆದರೆ ಕೆಲಸದ ವಿಚಾರದಲ್ಲಿ ಸುಮ್ಮನಿರಲ್ಲ ಎಂದು ಅಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ಕ್ಲಾಸ್ ತೆಗೆದುಕೊಂಡಿದ್ದಾರೆ.

ನೀವು ಮಾಡೋ ಕೆಲಸಕ್ಕೆ ಸರ್ಕಾರಕ್ಕೆ ಮುಜುಗರ. ಹಾಗಾಗಿ ಪ್ರತಿಯೊಂದು ಕೆಡಿಪಿ ಸಭೆ ನಾನೇ ತೆಗೆದುಕೊಳ್ತೇನೆ. ಕೆಲಸ ಮಾಡೋ ಇಚ್ಚಾಶಕ್ತಿ ಇರಬೇಕು. ಸರ್ಕಾರಕ್ಕೆ ಕೆಟ್ಟ ಹೆಸರು ಬರೋಕೆ ನಾನು ಬಿಡಲ್ಲ ಎಂದು ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

ಇದನ್ನೂ ಓದಿ: ರಾಜ್ಯದ ಕ್ರೀಡಾಪಟುಗಳಿಗೆ ಅಂತರಾಷ್ಟ್ರೀಯ ಮಟ್ಟದ ಕೋಚ್, ಬಜೆಟ್​ನಲ್ಲಿ ಕ್ರೀಡೆಗೆ ಹೆಚ್ಚಿನ ಅನುದಾನ: ಸಿಎಂ ಬಸವರಾಜ ಬೊಮ್ಮಾಯಿ 

ಮೇಕೆದಾಟು ಡಿಪಿಆರ್ ಬಗ್ಗೆ ಪ್ರಸ್ತಾಪಿಸಲು ಮುಂದಾದ ಕರ್ನಾಟಕ; ಚರ್ಚೆ ಮಾಡಕೂಡದು ಎಂದು ಆಕ್ಷೇಪ ತೆಗೆದ ತಮಿಳುನಾಡು