ಬೆಂಗಳೂರಿನ ಟಾಪ್ 5 ಸರ್ಕಾರಿ ಆಸ್ಪತ್ರೆಗಳಲ್ಲಿ ದಿನಕ್ಕೆ 15ಕ್ಕೂ ಹೆಚ್ಚು ಆತ್ಮಹತ್ಯೆ ಕೇಸ್: ವೈದ್ಯರು ಕೊಟ್ಟ ಕಾರಣಗಳು ಇಂತಿವೆ

| Updated By: ರಮೇಶ್ ಬಿ. ಜವಳಗೇರಾ

Updated on: Nov 11, 2022 | 5:53 PM

ಸಿಲಿಕಾನ್ ಸಿಟಿಯ ಬೆಂಗಳೂರಿನಲ್ಲಿ ಆತ್ಮಹತ್ಯೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ದಿನಕ್ಕೆ ಎಷ್ಟು ಕೇಸ್ ವರದಿಯಾಗುತ್ತಿವೆ? ವೈದ್ಯರು ಹೇಳುವುದೇನು?

ಬೆಂಗಳೂರಿನ ಟಾಪ್ 5 ಸರ್ಕಾರಿ ಆಸ್ಪತ್ರೆಗಳಲ್ಲಿ ದಿನಕ್ಕೆ 15ಕ್ಕೂ ಹೆಚ್ಚು ಆತ್ಮಹತ್ಯೆ ಕೇಸ್: ವೈದ್ಯರು ಕೊಟ್ಟ ಕಾರಣಗಳು ಇಂತಿವೆ
suicide
Follow us on

ಬೆಂಗಳೂರು: ಕೋವಿಡ್ ಕಾಟದ ಬಳಿಕ ಆತ್ಮಹತ್ಯ ಎಂಬ ಭೂತ ಜನರ ಜೀವದ ಜೊತೆ ಸಾವಿನ ನರ್ತನ ಶುರುಮಾಡಿದೆ. ಇತ್ತೀಚಿನ ದಿನಗಳಲ್ಲಿ ಯುವಕರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆತ್ಮಹತ್ಯಗೆ ಶರಣಾಗುತ್ತಿದ್ದಾರೆ. ಕೋವಿಡ್ ಬಳಿಕ ಆತ್ಮಹತ್ಯೆ ಪ್ರಕರಣಗಳು (suicide cases) ಹೆಚ್ಚಾಗಿದ್ದು, ಸಿಲಿಕಾನ್ ಸಿಟಿ ಬೆಂಗಳೂರು (Bengaluru) ದಿನದಿಂದ ದಿನಕ್ಕೆ ಸುಸೈಡ್ ಸಿಟಿಯಾಗುತ್ತಿದೆ.

ದೇಶದಲ್ಲಿ ಅತಿ ಹೆಚ್ಚು ಆತ್ಮಹತ್ಯೆ ಪ್ರಕರಣಗಳು ವರದಿಯಾಗಿರುವ ಮೊದಲ ಐದು ರಾಜ್ಯಗಳಲ್ಲಿ ಕರ್ನಾಟಕ ಕೂಡ ಸ್ಥಾನ ಪಡೆದುಕೊಂಡಿದೆ. ಚಿಕ್ಕ ಪುಟ್ಟ ವಿಷಯಕ್ಕೂ ವಿದ್ಯಾರ್ಥಿಗಳು ಹಾಗೂ ಯುವಕರು ಜೀವ ಕಳೆದುಕೊಳ್ಳುತ್ತಿದ್ದಾರೆ. ಇನ್ನೂ ಬೆಂಗಳೂರಿನ ಟಾಪ್ 5 ಸರ್ಕಾರಿ ಆಸ್ಪತ್ರೆಗಳಲ್ಲಿ ದಿನಕ್ಕೆ 15ಕ್ಕೂ ಹೆಚ್ಚು ಆತ್ಮಹತ್ಯೆ ಪ್ರಕರಣಗಳು  ದಾಖಲಾಗುತ್ತಿವೆ.  ದಿನದಿಂದ ದಿನಕ್ಕೆ ಸಿಲಿಕಾನ್ ಸಿಟಿ ಬೆಂಗಳೂರಿಗೆ ಆತ್ಮಹತ್ಯೆಯ ಭೂತ ಒಕ್ಕರಿಸಿದ್ದು ವಿದ್ಯಾರ್ಥಿಗಳು ಯುವಕರ ಜೀವ ತಗೆಯುತ್ತಿದ್ದು ಆತಂಕಕ್ಕೆ ಕಾರಣವಾಗಿದೆ

ಬೆಂಗಳೂರಿನಲ್ಲಿ ಸುಸೈಡ್ ಅಂಕಿ ಸಂಖ್ಯೆ

* ಕೆ ಸಿ ಜನರಲ್ ಆಸ್ಪತ್ರೆ ಪ್ರತಿ ದಿನ 2-3 ಪ್ರಕರಣ ವರದಿಯಾಗ್ತೀವೆ

* ವಿಕ್ಟೋರಿಯಾ ಪ್ರತಿ ದಿನ 5-6 ಪ್ರಕರಣ

* ಬೋರಿಂಗ್ ಪ್ರತಿ ದಿನ – 3-4 ಪ್ರಕರಣ

* ಜಯನಗರ ಸರ್ಕಾರಿ ಆಸ್ಪತ್ರೆ ದಿನಕ್ಕೆ 2-3 ಪ್ರಕರಣ

* ಸಿ.ವಿ.ರಾಮನ್ ಆಸ್ಪತ್ರೆ ದಿನಕ್ಕೆ 3-4 ಪ್ರಕರಣ

ಇನ್ನು ಈ ಬಗ್ಗೆ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆ ಉಪ ನಿರ್ದೇಶಕರು ಮಾನಸಿಕ ಆರೋಗ್ಯ ವಿಭಾಗದ ಡಾ, ರಜನಿ ಪಿ ಪ್ರತಿಕ್ರಿಯಿಸಿದ್ದು, ಕೇವಲ ಐದೇ ಐದು ಸರ್ಕಾರಿ ಆಸ್ಪತ್ರೆಗಳಲ್ಲಿ ಕಳೆದ ಎರಡು ತಿಂಗಳಿನಿಂದ ಪ್ರತಿ ತಿಂಗಳ 260 ರಿಂದ 300 ಕೇಸ್ ವರದಿಯಾಗ್ತೀರೊದು ಆತಂಕಕ್ಕೆ ಕಾರಣವಾಗಿದೆ.. ಹೆಚ್ಚಿನ ಪ್ರಕರಣಗಳಲ್ಲಿ ಒಂದು ಸರಿ ಆತ್ಮಹತ್ಯೆಗೆ ಪ್ರಯತ್ನ ಪಟ್ಟವರು ಮತ್ತೆ ಮತ್ತೆ ಆತ್ಮಹತ್ಯೆಗೆ ಪ್ರಯತ್ನಿಸುತ್ತಿರುವುದೇ ಇದಕ್ಕೆ ಕಾರಣ ಎಂದಿದ್ದಾರೆ.

ಮಾನಸಿಕ ವೈದ್ಯರು ಹೇಳುವ ಪ್ರಕಾರ ಕೊವಿಡ್ ಬಳಿಕ ವಿದ್ಯಾರ್ಥಗಳು ಹಾಗೂ ಯುವಕರಲ್ಲಿ ವೃತ್ತಿಪರ ಕ್ಷೇತ್ರದಲ್ಲಿ ಸಂಪನ್ಮೂಲಗಳ ಕೊರತೆ ಮತ್ತು ಅಗತ್ಯವಿರುವ ಸಮಯದಲ್ಲಿ ಕುಟುಂಬದ ಬೆಂಬಲದ ಕೊರತೆಯಿಂದ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ಇದಲ್ಲದೇ ಒಂದು‌ ಟೈಮ್ ಆತ್ಮಹತ್ಯೆ ಮಾಡಿಕೊಂಡವರು ಪದೇ ಪದೇ ಆತ್ಮಹತ್ಯೆ ಯತ್ನ ಮಾಡುತ್ತಿದ್ದಾರೆ. ಹೀಗಾಗಿ ಕೌನ್ಸಿಲಿಂಗ್ ಅಗತ್ಯ ಇದೆ. ಯಾರು ಚಿಕಿತ್ಸೆಯಿಂದ ಸಲಹೆಯಿಂದ ವಂಚಿತರಾಗುತ್ತಿದ್ದಾರೋ ಅವರೇ ಹೆಚ್ಚು ಆತ್ಮಹತ್ಯಗೆ ಮುಂದಾಗುತ್ತಿರುವುದರ ಬಗ್ಗೆ ವೈದ್ಯರು ಆತಂಕ ಹೊರ ಹಾಕಿದ್ದಾರೆ.

ಇನ್ನು ಕೆಲವು ಪ್ರಕರಣಗಳಲ್ಲಿ ವಿದ್ಯಾರ್ಥಿಗಳಿಗೆ ಪೋಷಕರಿಂದ ಬರುತ್ತಿರುವ ಕಲಿಕಾ ಫಲಿತಾಂಶದ ಒತ್ತಡ, ಕಡಿಮೆ ಅಂಕ ಬರ್ತಿದೆ ಅನ್ನೋ ಮಾನಸಿಕ ಹಿಂಸೆ, ಮೊಬೈಲ್ ಗೀಳು ಕೂಡಾ ಆತ್ಮಹತ್ಯೆ ಪ್ರಯತ್ನಕ್ಕೆ ಕಾರಣವಾಗಿರುವ ಬಗ್ಗೆ ವೈದ್ಯರು ಎಚ್ಚರಿಕೆ ನೀಡ್ತಿದ್ದಅರೆ.

ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ಪ್ರಕಾರ, ಪ್ರತಿ ವರ್ಷ ಏಳು ಲಕ್ಷಕ್ಕೂ ಹೆಚ್ಚು ಮಂದಿ ಆತ್ಮಹತ್ಯೆ ಮಾಡಿಕೊಂಡು ತಮ್ಮ ಜೀವನ ಕೊನೆಗೊಳಿಸುತ್ತಿದ್ದಾರೆ. ಇದಕ್ಕಿಂತ ಎಷ್ಟೋ ಪಟ್ಟು ಹೆಚ್ಚು ಜನರು ಆತ್ಮಹತ್ಯೆ ಕುರಿತು ಯೋಚಿಸುತ್ತಿರುತ್ತಾರೆ. ತೀವ್ರ ವೇದನೆ ಅಥವಾ ಸಮಸ್ಯೆಗಳಿಂದ ಬಳಲುತ್ತಿರುವ ಲಕ್ಷಾಂತರ ಮಂದಿಯಲ್ಲಿ ಆತ್ಮಹತ್ಯೆ ಮನೋಭಾವ ಇರುತ್ತದೆ. ಇದು ಗಂಭೀರವಾದ ಮಾನಸಿಕ ಆರೋಗ್ಯ ಸಮಸ್ಯೆಯಾಗಿದ್ದು, ಸರ್ಕಾರ ಇದಕ್ಕೆ ಕಡಿವಾಣ ಹಾಕಬೇಕಾಗಿದೆ.

ವರದಿ: ವಿನಯಕುಮಾರ್ ಕಾಶಪ್ಪನವರ್, ಟಿವಿ9, ಬೆಂಗಳೂರು 

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:53 pm, Fri, 11 November 22