ಬೆಂಗಳೂರು ಸುತ್ತಮುತ್ತ 12 ಹೊಸಾ ಮಾರುಕಟ್ಟೆ ಆರಂಭ

ಬೆಂಗಳೂರು: ಮಹಾಮಾರಿ ಕೊರೊನಾಗೆ ಸಿಲಿಕಾನ್ ಸಿಟಿ ತತ್ತರಿಸಿ ಹೋಗಿದೆ. ಈ ವೇಳೆ ರೈತರು ತಾವು ಬೆಳೆದ ಬೆಲೆಯನ್ನು ಮಾರುಕಟ್ಟೆಗೆ ಸಾಗಿಸಲಾಗದೆ, ಸರಿಯಾದ ಬೆಲೆಯೂ ಸಿಗದೆ ಕಣ್ಣೀರು ಹಾಕುತ್ತಿದ್ದಾನೆ. ಹೀಗಾಗಿ ರೈತರಿಗೆ ಸಹಾಯವಾಗಲು ನಗರದಲ್ಲಿ 12 ಹೊಸ ಮಾರುಕಟ್ಟೆಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ. ಇಂದು ನಡೆದ ಸಭೆ ಬಳಿಕ ಮಾತನಾಡಿದ ಡಿಸಿಎಂ ಅಶ್ವಥ್ ನಾರಾಯಣ್ ಬೆಂಗಳೂರು ಸುತ್ತಮುತ್ತ ಹೊಸ 12 ಮಾರುಕಟ್ಟೆ ಆರಂಭಕ್ಕೆ ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ತೋಟಗಾರಿಕೆ ಉತ್ಪನ್ನ ಮತ್ತು ಹೂವು ಮಾರಾಟಕ್ಕೆ 12 ಹೊಸ ಮಾರುಕಟ್ಟೆ […]

ಬೆಂಗಳೂರು ಸುತ್ತಮುತ್ತ 12 ಹೊಸಾ ಮಾರುಕಟ್ಟೆ ಆರಂಭ
ಸಾಧು ಶ್ರೀನಾಥ್​

Updated on: Apr 16, 2020 | 1:27 PM

ಬೆಂಗಳೂರು: ಮಹಾಮಾರಿ ಕೊರೊನಾಗೆ ಸಿಲಿಕಾನ್ ಸಿಟಿ ತತ್ತರಿಸಿ ಹೋಗಿದೆ. ಈ ವೇಳೆ ರೈತರು ತಾವು ಬೆಳೆದ ಬೆಲೆಯನ್ನು ಮಾರುಕಟ್ಟೆಗೆ ಸಾಗಿಸಲಾಗದೆ, ಸರಿಯಾದ ಬೆಲೆಯೂ ಸಿಗದೆ ಕಣ್ಣೀರು ಹಾಕುತ್ತಿದ್ದಾನೆ. ಹೀಗಾಗಿ ರೈತರಿಗೆ ಸಹಾಯವಾಗಲು ನಗರದಲ್ಲಿ 12 ಹೊಸ ಮಾರುಕಟ್ಟೆಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ. ಇಂದು ನಡೆದ ಸಭೆ ಬಳಿಕ ಮಾತನಾಡಿದ ಡಿಸಿಎಂ ಅಶ್ವಥ್ ನಾರಾಯಣ್ ಬೆಂಗಳೂರು ಸುತ್ತಮುತ್ತ ಹೊಸ 12 ಮಾರುಕಟ್ಟೆ ಆರಂಭಕ್ಕೆ ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ತೋಟಗಾರಿಕೆ ಉತ್ಪನ್ನ ಮತ್ತು ಹೂವು ಮಾರಾಟಕ್ಕೆ 12 ಹೊಸ ಮಾರುಕಟ್ಟೆ :
ಕೃಷಿ, ತೋಟಗಾರಿಕೆ ಉತ್ಪನ್ನ ಮತ್ತು ಹೂವು ಮಾರಾಟಕ್ಕೆ 12 ಹೊಸ ಮಾರುಕಟ್ಟೆ ನಿರ್ಮಿಸಲಾಗುವುದು. ಹೀಗಾಗಿ ಕಂದಾಯ ಇಲಾಖೆಗೆ ಜಾಗ ಕೊಡಲು ಮನವಿ ಮಾಡಿಕೊಂಡಿದ್ದೇವೆ. ಬೆಂಗಳೂರಿನಲ್ಲಿ ಅಗತ್ಯ ವಸ್ತು ತಯಾರಿಸುವ ಫ್ಯಾಕ್ಟರಿಗಳ ಸಿಬ್ಬಂದಿಗೆ ಇಂದಿನಿಂದ ಪಾಸ್ ವಿತರಣೆ ಮಾಡಲಾಗುವುದು. ಗುಳೆ ಬಂದಿರುವ ಕಟ್ಟಡ ಕಾರ್ಮಿಕರಿಗೆ ಆಹಾರ ಕೊಡ್ತಿದ್ದೇವೆ. ಪಡಿತರ ಚೀಟಿ ಅರ್ಜಿ ಸಲ್ಲಿಸಿದವರಿಗೂ ಪಡಿತರ ಹಂಚಿಕೆ ಆಗ್ತಿದೆ ಎಂದು ಹೇಳಿದ್ರು.

ದ್ರಾಕ್ಷಿ ಬೆಲೆ ಸಹಜ ಸ್ಥಿತಿಗೆ:
ಇನ್ನು ತೋಟಗಾರಿಕೆ ಇಲಾಖೆಯಲ್ಲಿ ಈ ಹಿಂದೆ ಒಂದೂವರೆ ಸಾವಿರ ಟನ್ ವಹಿವಾಟು ನಡೀತಿತ್ತು. ಈಗ 5 ಸಾವಿರ ಟನ್ ತೋಟಗಾರಿಕೆ ಉತ್ಪನ್ನ ವಹಿವಾಟು ನಡೆಯುತ್ತಿದೆ. ಟೊಮೇಟೊ ಮತ್ತು ದ್ರಾಕ್ಷಿ ಬೆಲೆ ಸಹಜ ಸ್ಥಿತಿಗೆ ಬಂದಿದೆ. ದ್ರಾಕ್ಷಿಗಳನ್ನ ವೈನ್ ಡಿಸ್ಟಲರಿಗೆ ನೀಡುವ ಕುರಿತು ಅಬಕಾರಿ ಇಲಾಖೆ ಜತೆ ಚರ್ಚೆ ನಡೆದಿದೆ.

ಸರ್ಕಾರ ಬೀಜ ವಿತರಣಾ ಸಂಸ್ಥೆಗಳಿಗೆ 83 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿತ್ತು. ಅದನ್ನ ಈಗ ಸರ್ಕಾರದ ವತಿಯಿಂದ ನೀಡುವ ವ್ಯವಸ್ಥೆ ಆಗಿದೆ. ಬೆಂಗಳೂರಿನಲ್ಲಿ ತರಕಾರಿ ಮತ್ತು ಹಣ್ಣು ವ್ಯಾಪಾರ ಮಾಡಲು 320 ಮೊಬೈಲ್ ವಾಹನ ಸಂಚಾರ ಮಾಡ್ತಿದೆ. ರೇಷ್ಮೆ ಮಾರುಕಟ್ಟೆ ಸುಧಾರಣೆ ಆಗಿದೆ. 120 ಟನ್ ಖರೀದಿ ಮಾಡುವ ವ್ಯವಸ್ಥೆ ಆಗಿದೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ತಿಳಿಸಿದ್ದು.

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us