ಡೆಂಘಿ ಪ್ರಕರಣಗಳು ಬೆಂಗಳೂರು ಮತ್ತು ರಾಜ್ಯದಲ್ಲಿಯೂ ಹೆಚ್ಚಾಗುತ್ತಿವೆ: ಕಾರಣಗಳೇನು? ಏನು ಮಾಡಬೇಕು

| Updated By: ಸಾಧು ಶ್ರೀನಾಥ್​

Updated on: May 13, 2024 | 11:42 AM

ಏಪ್ರಿಲ್ ನಿಂದ ಮೇ 10ರವೆಗೆ ಪಾಲಿಕೆ ವ್ಯಾಪ್ತಿಯಲ್ಲಿ 930 ಪ್ರಕರಣ ದಾಖಲಾಗಿವೆ. 1974 ಟೆಸ್ಟ್ ಗಳಲ್ಲಿ 930 ಜನರಿಗೆ ಡೆಂಘಿ ಪಾಸಿಟಿವ್ ಬಂದಿದೆ. ರಾಜ್ಯದಲ್ಲಿ ಒಟ್ಟು 2,500 ಡೆಂಘಿ ಪ್ರಕರಣಗಳು ಪತ್ತೆಯಾಗಿವೆ. ಮಳೆಯ ಹಿನ್ನೆಲೆ ಡೆಂಘಿ ನಿರ್ಲಕ್ಷ್ಯ ಮಾಡಿದ್ರೆ ಇನ್ನೂ ಹೆಚ್ಚಳ ಸಾಧ್ಯತೆ ಎಂದು ವೈದ್ಯರು ಎಚ್ಚರಿಸಿದ್ದಾರೆ.

ಡೆಂಘಿ ಪ್ರಕರಣಗಳು ಬೆಂಗಳೂರು ಮತ್ತು ರಾಜ್ಯದಲ್ಲಿಯೂ ಹೆಚ್ಚಾಗುತ್ತಿವೆ: ಕಾರಣಗಳೇನು? ಏನು ಮಾಡಬೇಕು
ಡೆಂಘಿ ಪ್ರಕರಣಗಳು ಬೆಂಗಳೂರು ಮತ್ತು ರಾಜ್ಯದಲ್ಲಿಯೂ ಹೆಚ್ಚಾಗುತ್ತಿವೆ
Follow us on

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ (Bengaluru) ಕಾಲರಾ, ಹೀಟ್ ವೇವ್ ನಡುವೆ ಮತ್ತೊಂದು ಟೆನ್ಷನ್ ಶುರುವಾಗಿದೆ. ಬೇಸಿಗೆ ಮಳೆ ಜೋರಾಗಿಯೇ ಬೀಳುತ್ತಿದೆ. ಬಿಸಿಲು-ಮಳೆ ಮಧ್ಯೆ ಬೆಂಗಳೂರಿನಲ್ಲಿ ಡೆಂಘಿ ಪ್ರಕರಣಗಳು ಶುರುವಾಗಿವೆ. ಒಂದು ತಿಂಗಳಿನಲ್ಲಿ ಸಾವಿರಾರು ಡೆಂಘಿ ಪ್ರಕರಣಗಳು ಈಗಾಗಲೇ ದಾಖಲಾಗಿವೆ. ಮಳೆಯಿಂದಲೂ ಡೆಂಘಿ ಪ್ರಕರಣ (Dengue) ಹೆಚ್ಚಾಗುತ್ತಿದೆಯಂತೆ. ಪ್ರತಿನಿತ್ಯ 50-60 ಪ್ರಕರಣಗಳು ನಗರದ ನಾನಾ ಭಾಗಗಳಲ್ಲಿ ದಾಖಲಾಗುತ್ತಿವೆ. ಏಪ್ರಿಲ್ ನಿಂದ ಮೇ 10ರವೆಗೆ ಪಾಲಿಕೆ ವ್ಯಾಪ್ತಿಯಲ್ಲಿ 930 ಪ್ರಕರಣ ದಾಖಲಾಗಿವೆ (Health).

ಒಟ್ಟು 1974 ಟೆಸ್ಟ್ ಗಳಲ್ಲಿ 930 ಜನರಿಗೆ ಡೆಂಘಿ ಪಾಸಿಟಿವ್ ಬಂದಿದೆ. ಇನ್ನು ರಾಜ್ಯದಲ್ಲಿ ಒಟ್ಟು 2,500 ಡೆಂಘಿ ಪ್ರಕರಣಗಳು ಪತ್ತೆಯಾಗಿವೆ. ಮಳೆಯ ಹಿನ್ನೆಲೆ ಡೆಂಘಿ ನಿರ್ಲಕ್ಷ್ಯ ಮಾಡಿದ್ರೆ ಇನ್ನೂ ಹೆಚ್ಚಳ ಸಾಧ್ಯತೆ ಎಂದು ವೈದ್ಯರು ಎಚ್ಚರಿಸಿದ್ದಾರೆ. ಗಮನಾರ್ಹವೆಂದರೆ ನಗರದ ಸೌತ್ ಝೋನ್ ನಲ್ಲಿ ಅತಿಹೆಚ್ಚು 453 ಪ್ರಕರಣಗಳು ದಾಖಲುಗೊಂಡಿವೆ. ಡೆಂಘಿ ಪ್ರಕರಣ ತಾಂಡವವಾಡುತ್ತಿರುವುದು ಆರೋಗ್ಯ ಇಲಾಖೆಗೆ ಇದೀಗ ತಲೆ ಬಿಸಿಯಾಗಿದೆ. ಡೆಂಘಿ ತಡೆಗೆ ಬಿಬಿಎಂಪಿ ಪಾಲಿಕೆ ಮುಂದಾಗಿದೆ.

Also Read: ರಾಮನಗರದಲ್ಲಿ ರಣಬಿಸಿಲು: 500 ಕೋಟಿ ಮೌಲ್ಯದ ಮಾವು ಲಾಸ್! 28 ‌ಸಾವಿರ ರೈತ ಕುಟುಂಬಗಳು ಸಂಷಕ್ಟದಲ್ಲಿ

ನಗರದಲ್ಲಿ ಬಿಬಿಎಂಪಿ ವಲಯವಾರು ಡೆಂಘಿ ಪ್ರಕರಣ ಕಾಣಿಸಿಕೊಂಡಿರುವುದು ನೋಡೋದಾದ್ರೆ…

* ಬೊಮ್ಮನಹಳ್ಳಿ ಝೋನ್ – 20 ಪ್ರಕರಣ
* ದಾಸರಹಳ್ಳಿ ಝೋನ್ – 2 ಪ್ರಕರಣ
* ಈಸ್ಟ್ ಝೋನ್ – 224 ಪ್ರಕರಣ
* ಮಹದೇವಪುರ ಝೋನ್ – 97 ಪ್ರಕರಣ
* ಆರ್ ಆರ್ ನಗರ ಝೋನ್ – 18 ಪ್ರಕರಣ
* ಸೌತ್ ಝೋನ್ – 453 ಪ್ರಕರಣ
* ವೆಸ್ಟ್ ಝೋನ್ – 99 ಪ್ರಕರಣ
* ಯಲಹಂಕ – 17 ಪ್ರಕರಣ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ