ಬೆಂಗಳೂರು: ಹಲವು ಪೊಲೀಸರಿಗೆ ವಂಚಿಸಿದ್ದ ನಕಲಿ ಐಪಿಎಸ್ ಅರ್ಜುನ್ ಅರೆಸ್ಟ್

|

Updated on: Jun 11, 2023 | 4:13 PM

ತಾನು ಎಸ್​ಪಿ ಅಂತ ಹೇಳಿಕೊಂಡು ವಂಚನೆಗಿಳಿದಿದ್ದ ನಕಲಿ ಐಪಿಎಸ್​ ಅಧಿಕಾರಿಯನ್ನು ಬೆಂಗಳೂರಿನ ಕಾಟನ್ ಪೇಟೆ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು: ಹಲವು ಪೊಲೀಸರಿಗೆ ವಂಚಿಸಿದ್ದ ನಕಲಿ ಐಪಿಎಸ್ ಅರ್ಜುನ್ ಅರೆಸ್ಟ್
ನಕಲಿ ಐಪಿಎಸ್ ಅಧಿಕಾರಿಯನ್ನು ಬಂಧಿಸಿದ ಬೆಂಗಳೂರು ಪೊಲೀಸರು
Follow us on

ಬೆಂಗಳೂರು: ವರ್ಗಾವಣೆ ದಂಧೆಯನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಹಲವು ಪೊಲೀಸರಿಗೆ ವಂಚನೆ (Cheating) ಮಾಡಿದ್ದ ನಕಲಿ ಐಪಿಎಸ್ (Fake IPS)​ ಅಧಿಕಾರಿಯನ್ನು ಬೆಂಗಳೂರಿನ (Bengaluru) ಕಾಟನ್ ಪೇಟೆ ಠಾಣಾ ಪೊಲೀಸರು ಬಂಧಿಸಿದ್ದಾರೆ. ಭುವನ್ ಕುಮಾರ್ ಬಂಧಿತ ಆರೋಪಿಯಾಗಿದ್ದಾನೆ. ತಾನು ಎಸ್​ಪಿ ಅಂತ ಹೇಳಿಕೊಂಡು ವಂಚನೆಗಿಳಿದಿದ್ದ ಈತ ಸದ್ಯ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ತೀವ್ರ ವಿಚಾರಣೆ ನಡೆಸಲಾಗುತ್ತಿದೆ.

ವರ್ಗಾವಣೆ ದಂಧೆಯನ್ನೇ ಬಂಡವಾಳವನ್ನಾಗಿ ಮಾಡಿಕೊಂಡ ಭುವನ್ ಕುಮಾರ್ ತನ್ನ ಹೆಸರನ್ನು ಅರ್ಜುನ್ ಅಂತ ಬದಲಿಸಿ ತಾನೊಬ್ಬ ಐಪಿಎಸ್ ಅಧಿಕಾರಿ ಎಂದು ಎಲ್ಲರಿಗೂ ಪರಿಚಯ ಮಾಡಿಕೊಂಡಿದ್ದನು. ಅಲ್ಲದೆ, ತನ್ನ ಸಂಬಂಧಿ ಹಿರಿಯ ಐಪಿಎಸ್ ಅಧಿಕಾರಿ ಇದ್ದಾರೆ ಅಂತ ನಂಬಿಸಿದ್ದು, ತಾನು ಕೆಲವೇ ದಿನಗಳಲ್ಲಿ ಎಕ್ಸಿಕ್ಯುಟಿವ್ ಆಗಿ ಬರುತ್ತೇನೆ ಅಂತ ಹೇಳಿಕೊಂಡಿದ್ದನು.

ಹೀಗೆ ನಕಲಿ ಐಪಿಎಸ್ ಮಾತಿಗೆ ಮರುಳಾದ ಕೆಲವು ಪೊಲೀಸರು ಪೋಸ್ಟಿಂಗ್ ಮಾಡಿಕೊಡಲು ಭುವನ್​ಗೆ ಹಣ ನೀಡಿದ್ದಾರೆ. ಹೀಗೆ ಸುಮಾರು ಒಂದೂವರೆ ಕೋಟಿಗೂ ಅಧಿಕ ಹಣವನ್ನು ಪಡೆದಿದ್ದಾನೆ. ಹಣ ಪಡೆದ ಬಳಿಕ ಪೋಸ್ಟಿಂಗ್ ವಿಚಾರ ಕೇಳಿದಾಗ ಸಬೂಬು ಹೇಳುತ್ತಾ ಇದ್ದನು. ಇದೇ ವೇಳೆ ಈತನ ಬಗ್ಗೆ ಕಾಟನ್ ಪೇಟೆ ಪೊಲೀಸರಿಗೆ ಮಾಹಿತಿ ಲಭ್ಯವಾದ ಹಿನ್ನೆಲೆ ಹುಡುಕಾಟಕ್ಕೆ ಮುಂದಾಗಿದ್ದಾರೆ.

ಇದನ್ನೂ ಓದಿ: ಪಕ್ಕದ ಮನೆ ಮಹಿಳೆ ಸ್ನಾನ ಮಾಡುವುದನ್ನು ಇಣುಕಿ ನೋಡುತ್ತಿದ್ದಾಗ ಸಿಕ್ಕಿಬಿದ್ದ ಆಸಾಮಿ

ಕಾರ್ಯಾಚರಣೆಗೆ ಇಳಿದಾಗಲೇ ಓರ್ವ ವ್ಯಕ್ತಿ ಸರ್ಕಾರ ಕೆಲಸ ಕೊಡಿಸುತ್ತೇನೆ ಅಂತ ವಂಚಿಸಿದ್ದಾಗಿ ದೂರು ನೀಡಿದ್ದಾರೆ. ಈ ವೇಳೆ ಫುಲ್ ಅಲರ್ಟ್ ಆದ ಕಾಟನ್ ಪೇಟೆ ಪೊಲೀಸರು, ದೂರುದಾರನಿಂದ‌ ಹಣ ಕೊಡುತ್ತೇನೆ ಅಂತ ಕರೆಸಿಕೊಂಡಿದ್ದಾರೆ. ಅದರಂತೆ ಹಣ ಪಡೆಯಲು ಬಂದ ಭುವನ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಸದ್ಯ ನಕಲಿ‌ ಐಪಿಎಸ್ ಅಧಿಕಾರಿ ಭುವನ್​ನನ್ನು ಬಂಧಿಸಿದ ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ. ಇದೇ ರೀತಿ ಎಷ್ಟು ಜನರಿಗೆ ವಂಚಿಸಲಾಗಿದೆ? ಯಾರಿಗೆಲ್ಲ ವಂಚಿಸಿದ್ದಾನೆ? ಎಲ್ಲೆಲ್ಲಿ ಎಷ್ಟೆಷ್ಟು ವಂಚಿಸಿದ್ದಾನೆ ಎಂಬಿತ್ಯಾದಿ ಆಯಾಮಗಳಲ್ಲಿ ವಿಚಾರಣೆ ನಡೆಸಲಾಗುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ