ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯ ಮಾಡಿಕೊಂಡು ವಂಚಿಸುತ್ತಿದ್ದ ಖತರ್ನಾಕ್ ವಂಚಕ (Crafty)ನನ್ನು ನಗರದ ಹೆಚ್ಎಎಲ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಿರಂತರ ಎರಡು ತಿಂಗಳುಗಳ ಕಾಲ ವಂಚಕನ ಬೇಟೆಗೆ ಹೊಂಚು ಹಾಕಿ ಕುಳಿತಿದ್ದ ಪೊಲೀಸರ ಬಲೆಗೆ ಕೊನೆಗೂ ವಂಚಕ ಪೃಥ್ವಿ (34) ಬಿದ್ದಿದ್ದಾನೆ. ಬಂಧಿತ ಆರೋಪಿಯಿಂದ 8 ಕಾರುಗಳನ್ನು ಮತ್ತು ಕ್ಯಾಮರಾವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ಮುಂದುವರಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯ ಆದವರ ಬಗ್ಗೆ ಎಚ್ಚರದಿಂದ ಇರಬೇಕು. ಏಕೆಂದರೆ ವಂಚಕರು ಸಕ್ರಿಯರಾಗಿದ್ದಾರೆ. ಅದರಂತೆ ಬಂಧಿತ ವಂಚಕ ಪೃಥ್ವಿ, ವಿವಾಹವಾಗಿದ್ದರೂ ಫೇಸ್ ಬುಕ್ನಲ್ಲಿ ಅಪರಿಚಿತರನ್ನು ಪರಿಚಯ ಮಾಡಿಕೊಳ್ಳುತ್ತಿದ್ದ, ಹುಡುಗಿಯರ ಜೊತೆ ಶೋಕಿ ಮಾಡುತ್ತಿದ್ದನು. ಇದರ ಜೊತೆಗೆ ಜೂಜು ಆಡುವ ಚಟಕ್ಕೂ ಬಿದ್ದಿದ್ದನು. ಇದಕ್ಕೆ ಹಣ ಸುರಿಯಲು ಓಎಲ್ಎಕ್ಸ್ ಮತ್ತು ಫೇಸ್ಬುಕ್ ಅನ್ನು ಅಸ್ತ್ರವನ್ನಾಗಿ ಮಾಡಿಕೊಂಡಿದ್ದನು.
ಇದನ್ನೂ ಓದಿ: Crime News: ಬೈಕ್ ಮೇಲೆ ಬಂದು ಮಾಂಗಲ್ಯ ಸರ ದೋಚಿ ಕಳ್ಳರು ಪರಾರಿ
ಫೇಸ್ಬುಕ್ನಲ್ಲಿ ರಾಯಲ್ ರೀತಿ ಕಾಣುವ ಹಾಗೆ ಫೋಟೊ ಹಾಕುತ್ತಿದ್ದ ಪೃಥ್ವಿ, ಅಪರಿಚಿತರಿಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸುತ್ತಾನೆ. ಅಲ್ಲದೆ ಚಾಟಿಂಗ್ ಕೂಡ ಮಾಡಲು ಪ್ರಾರಂಭಿಸುತ್ತಾನೆ. ತಿಂಗಳು ಕಳೆಯುತ್ತಿದ್ದಂತೆ ತನ್ನ ವರಸೆ ಶುರು ಮಾಡುತ್ತಾನೆ. ಅದರಂತೆ ಅಮ್ಮನಿಗೆ ಹುಷಾರಿಲ್ಲ, ಅರ್ಜೆಂಟ್ ಆಗಿ ಕಾರು ಬೇಕಿತ್ತು ಎನ್ನುತ್ತಿದ್ದ, ಹೀಗೆ ಪಡೆದ ಕಾರನ್ನು ಮಾರಾಟ ಮಾಡಿ ಪರಾರಿಯಾಗುತ್ತಿದ್ದ. ಒಂದು ಕಾರಿಗೆ ಒಂದೂವರೆಯಿಂದ ಮೂರು ಲಕ್ಷದ ವರೆಗೆ ಹಣ ಪಡೆಯುತ್ತಿದ್ದ. ಪರಿಚಯಸ್ಥರ ಬಳಿ ಅರ್ಜೆಂಟ್ ಆಗಿ ಹಣದ ಅವಶ್ಯಕತೆ ಇದೆ ಎಂದು ಹೇಳಿ ವಂಚನೆ ಮಾಡುತ್ತಿದ್ದ.
ಇದನ್ನೂ ಓದಿ: Crime News: ದೆಹಲಿಯ ಮೈದಾನದಲ್ಲಿ ಶವದ ತುಂಡುಗಳನ್ನು ತುಂಬಿಟ್ಟಿದ್ದ ಬ್ಯಾಗ್ ಪತ್ತೆ; ಕೊಲೆಯಾದವರ ಸುಳಿವೇ ಸಿಕ್ಕಿಲ್ಲ
ಫೇಸ್ಬುಕ್ ಜೊತೆಗೆ ಓಎಲ್ಎಕ್ಸ್ ಅನ್ನೂ ಟಾರ್ಗೆಟ್ ಮಾಡುತ್ತಿದ್ದ. ಇದರಲ್ಲಿ ವೈಟ್ಬೋರ್ಡ್ ವಾಹನಗಳನ್ನು ಬಾಡಿಗೆಗೆ ಪಡೆದುಕೊಂಡು ಮಾರಾಟ ಮಾಡುತ್ತಿದ್ದ. ಕಾರು ಮಾತ್ರವಲ್ಲ ಕ್ಯಾಮರಾಗಳನ್ನು ಕೂಡ ಪಡೆದು ಮಾರಾಟ ಮಾಡುತ್ತಿದ್ದ. ಪೊಲೀಸರ ಕೈಗೆ ಸಿಕ್ಕಿಬೀಳಬಾರದೆಂದು ಪದೇಪದೇ ಸಿಮ್ ಕಾರ್ಡ್ ಬದಲಾಯಿಸಿಕೊಳ್ಳುತ್ತಿದ್ದ. ಈತನನ್ನು ಪತ್ತೆಹಚ್ಚುವುದೇ ಪೊಲೀಸರಿಗೆ ದೊಡ್ಡ ತಲೆನೋವಾಗಿತ್ತು.
ಕಳೆದ 2 ತಿಂಗಳಿನಿಂದ ಶತಪ್ರಯತ್ನ ಮಾಡಿ ಕೊನಗೂ ಖತರ್ನಾಕ್ ವಂಚಕ ಪೃಥ್ವಿಯನ್ನು ಹೆಚ್ಎಎಲ್ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶ್ವಿಯಾಗಿದ್ದಾರೆ. ಪಿಎಸ್ಐ ಹನುಮಂತು ಮತ್ತು ತಂಡ ನಿರಂತರ ಎರಡು ತಿಂಗಳ ಕಾರ್ಯಾಚರಣೆ ನಡೆಸಿದ್ದು, ಐಷಾರಾಮಿ ಬೆಂಜ್ ಕಾರು ಸೇರಿದಂತೆ 8 ಕಾರು ಹಾಗೂ ಕ್ಯಾಮರಾವನ್ನು ವಶಕ್ಕೆ ಪಡೆದಿದ್ದಾರೆ.
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:14 am, Tue, 7 June 22