ಬೆಂಗಳೂರು, ಆಗಸ್ಟ್ 12: ಬಿಬಿಎಂಪಿ (BBMP) ಕೇಂದ್ರ ಕಚೇರಿ ಆವರಣದಲ್ಲಿರುವ ಗುಣನಿಯಂತ್ರಣ ಪ್ರಯೋಗಾಲಯದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ (Fire Accident) ಗಾಯಗೊಂಡ ಒಂಬತ್ತು ಸಿಬ್ಬಂದಿ ಪೈಕಿ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ವಿಕ್ಟೋರಿಯಾ ಆಸ್ಪತ್ರೆ ಡೀನ್ ಮತ್ತು ನಿರ್ದೇಶಕ ಡಾ.ರಮೇಶ್ ಕೃಷ್ಣ ಹೇಳಿದ್ದಾರೆ. ಉಳಿದ ಆರು ಮಂದಿ ಗಾಯಾಳುಗಳು ಚೇತರಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ರೋಗಿಗಳ ಪ್ರಸ್ತುತ ಸ್ಥಿತಿಗತಿ ಬಗ್ಗೆ ಮಾನಿಟರ್ ಮಾಡಲಾಗುತ್ತಿದೆ. ಎಲ್ರೂ ಆರೋಗ್ಯವಾಗಿದ್ದಾರೆ. ಆದರೆ ಒಂಬತ್ತು ಜನರಲ್ಲಿ ಮೂವರ ಪರಿಸ್ಥಿತಿ ಚಿಂತಾಜನಕವಾಗಿದೆ. ಡಯಾಲಿಸಿಸ್ ರೋಗಿಯಾಗಿರುವ ಕಿರಣ್ ಸ್ಥಿತಿ ಗಂಭೀರವಾಗಿದೆ. ನಿನ್ನೆಯೂ ಡಯಲಿಸಸ್ ಮಾಡಲಾಗುತ್ತು. ಈಗ ಮತ್ತೆ ಡಯಾಲಿಸಿಸ್ ಮಾಡಲು ಸೂಚಿಸಿದ್ದಾರೆ ಎಂದು ಡಾ.ರಮೇಶ್ ಕೃಷ್ಣ ತಿಳಿಸಿದರು.
ಇದನ್ನೂ ಓದಿ: ಶುಕ್ರವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ನಡೆದ ಅಗ್ನಿ ಅವಗಢದ ತನಿಖೆ ಮೂರು ಆಯಾಮಗಳಲ್ಲಿ ನಡೆಯಲಿದೆ: ಡಿಕೆ ಶಿವಕುಮಾರ್, ಡಿಸಿಎಮ್
ಜ್ಯೋತಿ ಎಂಬವರ ಸ್ಥಿತಿ ಕೂಡ ಗಂಭೀರವಾಗಿದೆ. ಅವರ ಮುಖದ ಭಾಗಕ್ಕೆ ಹೆಚ್ಚಿನ ಗಾಯಗಳಾಗಿವೆ. ಇವರು ಅತಿ ಗಂಭೀರವಾಗಿದ್ದಾರೆ. ಸದ್ಯ ಗಾಯಾಳುಗಳ ಪೈಕಿ ಇವರು ಹೈರಿಸ್ಕ್ನಲ್ಲಿದ್ದಾರೆ. ಶಿವಕುಮಾರ್ ಕೂಡ ಹೈರಿಸ್ಕ್ನಲ್ಲಿದ್ದಾರೆ. ಇವರಿಬ್ಬರಿಗೆ ಏರ್ ವೇನಲ್ಲಿ ಸಮ್ಯಸೆ ಆಗಿದೆ ಎಂದು ಡಾ.ರಮೇಶ್ ಕೃಷ್ಣ ಹೇಳಿದ್ದಾರೆ.
ಸದ್ಯಕ್ಕೆ ಮೂರು ಗಾಯಾಳುಗಳ ಸ್ಥಿತಿ ರಿಸ್ಕ್ನಲ್ಲಿದೆ. ಇನ್ನೂ ನಾಲ್ಕು ದಿನಗಳ ಕಾಲ ಇವರ ಆರೋಗ್ಯದ ಮೇಲೆ ನಿಗಾ ಇರಿಸುವ ಅಗತ್ಯವಿದೆ. ಉಳಿದ ಆರು ಗಾಯಾಳುಗಳು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ರಮೇಶ್ ಕೃಷ್ಣ ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ