ಪರಪ್ಪನ ಅಗ್ರಹಾರ ಜೈಲಿಂದ ನಾಲ್ವರು ಕರವೇ ಕಾರ್ಯಕರ್ತರ ಬಿಡುಗಡೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 31, 2023 | 5:44 PM

ನಾಮಫಲಕದಲ್ಲಿ ಕನ್ನಡ ಕಡ್ಡಾಯಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡರ ಜೊತೆ ಹೋರಾಟದಲ್ಲಿ ಪ್ರಮುಖ ಜವಾಬ್ದಾರಿ ಹೊತ್ತಿದ್ದ ಬೆಂಗಳೂರು ಯುವ ಘಟಕದ ಅಧ್ಯಕ್ಷ ಕಾರ್ತಿಕ್ ಗೌಡ ಸೇರಿ ಪೊಲೀಸರು ಬಂಧಿಸಿದ್ದರು. ಇದೀಗ ನಾಲ್ವರನ್ನು ಜೈಲಿಂದ ಬಿಡುಗಡೆಗೊಳಿಸಲಾಗಿದೆ.

ಪರಪ್ಪನ ಅಗ್ರಹಾರ ಜೈಲಿಂದ ನಾಲ್ವರು ಕರವೇ ಕಾರ್ಯಕರ್ತರ ಬಿಡುಗಡೆ
ಕರವೇ ಕಾರ್ಯಕರ್ತರ ಬಿಡುಗಡೆ
Follow us on

ಬೆಂಗಳೂರು, ಡಿ.31: ನಾಮಫಲಕ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ನಾಲ್ವರು ಕರವೇ ಕಾರ್ಯಕರ್ತ(Karave Workers)ರನ್ನು ಬೆಳಗ್ಗೆ ಬಿಡುಗಡೆಗೊಳಿಸಲಾಗಿದೆ. ಕರವೇ ಬೆಂಗಳೂರು ನಗರದ ಯುವ ಘಟಕದ ಅಧ್ಯಕ್ಷ ಕಾರ್ತಿಕ್ ಗೌಡ, ಕಾರ್ಯಕರ್ತರಾದ ಶರತ್, ಲೋಕೇಶ್ ಗೌಡ, ಹೇಮಂತ್ ಎಂಬುವವರು ಜೈಲಿನಿಂದ ಬಿಡುಗಡೆಯಾಗಿದ್ದು, ಅವರನ್ನು ಕರವೇ ಕಾರ್ಯಕರ್ತರು ಪಟಾಕಿ ಸಿಡಿಸಿ, ಹಾರ ಹಾಕಿ ಬರಮಾಡಿಕೊಂಡಿದ್ದಾರೆ.

ನಾಮಫಲಕದಲ್ಲಿ ಕನ್ನಡ ಕಡ್ಡಾಯಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡರ ಜೊತೆ ಹೋರಾಟದಲ್ಲಿ ಪ್ರಮುಖ ಜವಾಬ್ದಾರಿ ಹೊತ್ತಿದ್ದ ಬೆಂಗಳೂರು ಯುವ ಘಟಕದ ಅಧ್ಯಕ್ಷ ಕಾರ್ತಿಕ್ ಗೌಡ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದರು. ಈ ಕುರಿತು ಕಬ್ಬನ್ ಪಾರ್ಕ್ ಹಾಗೂ ಕಾಟನ್‌ಪೇಟೆಯಲ್ಲಿ ಪ್ರಕರಣಗಳು ದಾಖಲಿಸಲಾಗಿತ್ತು. ಇದೀಗ ಬಿಡುಗಡೆಗೊಳಿಸಲಾಗಿದೆ.

ಇದನ್ನೂ ಓದಿ:ನಾಮಫಲಕ ಧ್ವಂಸ ಪ್ರಕರಣ: ಕರ್ನಾಟಕ ರಕ್ಷಣಾ ವೇದಿಕೆ ವಿರುದ್ದ ಮತ್ತೆ 3 ಕೇಸ್ ಬುಕ್

ಇತ್ತೀಚೆಗೆ ಬೆಂಗಳೂರಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ನಾಮಫಲಕ ರ್ಯಾಲಿ ನಡೆಸಿತ್ತು. ಅಂಗಡಿ ಮುಂಗಟ್ಟುಗಳು ನಾಮಫಲಕಗಳು ಶೇ 60ರಷ್ಟು ಕನ್ನಡದಲ್ಲಿ ಇರಬೇಕೆಂದು ಆಗ್ರಹಿಸಿತ್ತು. ಅಲ್ಲದೇ ರ್ಯಾಲಿ ವೇಳೆ ಬೇರೆ ಬೇರೆ ಭಾಷೆಗಳಲ್ಲಿದ್ದ ಅಂಗಡಿಗಳ ಬೋರ್ಡ್​ಗಳನ್ನು ಕಿತ್ತೆಸೆಯಲಾಗಿತ್ತು. ಈ ಸಂಬಂಧ ಪೊಲೀಸರು ನಾರಾಯಣಗೌಡ ಸೇರಿದಂತೆ ಹಲವು ಕರವೇ ಕಾರ್ಯಕರ್ತರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:39 pm, Sun, 31 December 23