ಬೆಂಗಳೂರು: ಚಿನ್ನ, ಬೆಳ್ಳಿಯಂತಹ ಆಭರಣಗಳ ಅಂದ್ರೆ ಯಾರಿಗೆ ತಾನೇ ಇಷ್ಟವಿರಲ್ಲ ಅಲ್ವೇ. ಚಿನ್ನ ಕೊಳ್ಳಲು ಮುಗಿ ಬೀಳುವ ಆಸೆ. ಆದರೆ ದರ ಎಷ್ಟಿರಬಹುದು ಎಂಬ ಚಿಂತೆ! ನಮ್ಮ ನಗರಕ್ಕಿಂತ ಬೇರೆ ನಗರಗಳಲ್ಲಿ ಚಿನ್ನದ ದರ ಎಷ್ಟಾಗಿದೆ? ಎಂಬ ಪ್ರಶ್ನೆಯೂ ಎದುರಾಗುವುದು ಸಹಜ. ಹಾಗೆಯೇ ನಮ್ಮ ನಗರದಲ್ಲಿ ಆಭರಣದ ಬೆಲೆ ಕಡಿಮೆ ಇದ್ದಾಗ ಖುಷಿಯಾಗುವುದೂ ಅಷ್ಟೇ ಸಹಜ.
ನಾವು ಕೂಡಿಟ್ಟ ಹಣಕ್ಕೆ ಚಿನ್ನ ಕೊಳ್ಳಬಹುದೇ? ದರ ಇಳಿಕೆಯತ್ತ ಮುಖ ಮಾಡಿದೆಯೇ? ನಿನ್ನೆಗಿಂತ ಇಂದು ಆಭರಣದ ಬೆಲೆ ಎಷ್ಟಿದೆ? ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರವಿಲ್ಲಿದೆ. ಬೆಂಗಳೂರು ಸೇರಿ ವಿವಿಧ ನಗರಗಳಲ್ಲಿ ಚಿನ್ನ, ಬೆಳ್ಳಿ ದರ ಹೇಗಿದೆ ಎಂಬುದರ ಸಂಪೂರ್ಣ ವಿವರ ಇಲ್ಲಿದೆ.
ದೈನಂದಿನ ಪರಿಶೀಲನೆಯಲ್ಲಿ ಆಭರಣ ದರವನ್ನು ಗಮನಿಸಿದಾಗ ಹಾವು ಏಣಿ ಆಟ ಆಡುತ್ತಿರುವುದು ಮಾಮೂಲಿ. ಕಳೆದ ಒಂದು ವಾರದಿಂದ ಚಿನ್ನದ ದರ ಕೊಂಚ ಏರಿಕೆಯಾಗುತ್ತಲೇ ಬಂದಿದೆ. ಬೆಂಗಳೂರು ನಗರದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನ ನಿನ್ನೆ 45,450 ರೂಪಾಯಿ ಇತ್ತು. ಇಂದು 150 ರೂಪಾಯಿ ಏರಿಕೆಯ ಬಳಿಕ 45,600 ರೂಪಾಯಿಗೆ ತಲುಪಿದೆ. ಹಾಗೆಯೇ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ ನಿನ್ನೆ 49,590 ರೂಪಾಯಿ ಇತ್ತು. ಇಂದು 160 ರೂಪಅಯಿ ಏರಿಕೆಯ ಬಳಿಕ 49,750 ರೂಪಾಯಿಗೆ ತಲುಪಿದೆ.
ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರದಲ್ಲಿ 210 ರೂಪಾಯಿ ಏರಿಕೆಯಾಗಿದ್ದು ಇಂದು 45,980 ರೂಪಾಯಿ ಆಗಿದೆ. ಹಾಗೆಯೇ 24 ಕ್ಯಾರೆಟ್ 10 ಗ್ರಾಂ ಚಿನ್ನ ನಿನ್ನೆ 49,920 ರೂಪಾಯಿ ಇದ್ದು, 240 ರೂಪಾಯಿ ಏರಿಕೆಯ ಬಳಿಕ 50,160 ರೂಪಾಯಿ ಆಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ ನಿನ್ನೆ 46,820 ರೂಪಾಯಿ ಇತ್ತು. ಇಂದು 110 ರೂಪಾಯಿ ಏರಿಕೆ ಬಳಿಕ 46,930 ರೂಪಾಯಿಗೆ ಹೆಚ್ಚಳವಾಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ ನಿನ್ನೆ 50,720 ರೂಪಾಯಿ ಇದ್ದು, ಇಂದು 110 ರೂಪಾಯಿ ಏರಿಕೆ ನಂತರ 50,830 ರೂಪಾಯಿ ಆಗಿದೆ.
ಬೆಳ್ಳಿ ದರ ಮಾಹಿತಿ
ಕಳೆದೆರಡು ದಿನಗಳಿಂದ ಬೆಳ್ಳಿ ದರ ಕೊಂಚವೇ ಇಳಿಯುತ್ತಿದೆ. ದೆಹಲಿಯಲ್ಲಿ 1ಕೆಜಿ ಬೆಳ್ಳಿ ದರ 1,100 ರೂಪಾಯಿ ಇಳಿಕೆ ಬಳಿಕ 71,200 ರೂಪಾಯಿಗೆ ಕುಸಿದಿದೆ. ಚೆನ್ನೈನಲ್ಲಿ 1ಕೆಜಿ ಬೆಳ್ಳಿಯಲ್ಲಿ 500 ರೂಪಾಯಿ ಇಳಿಕೆಯ ಬಳಿಕ ಇಂದಿನ ದರ 76,400 ರೂಪಾಯಿ ಆಗಿದೆ. ಬೆಂಗಳೂರು ನಗರದಲ್ಲಿ 1ಕೆಜಿ ಬೆಳ್ಳಿ ದರದಲ್ಲಿ 1,100 ರೂಪಾಯಿ ಕುಸಿತ ಕಂಡು ಬಂದಿದ್ದು, ಇಂದಿನ ದರ 71,200 ರೂಪಾಯಿ ಆಗಿದೆ.
ಇದನ್ನೂ ಓದಿ: Gold loan: ಕೊರೊನಾ ಎರಡನೇ ಅಲೆಗೆ ಜನರು ಬೆಂಡು; ಚಿನ್ನದ ಮೇಲಿನ ಸಾಲಕ್ಕೆ ಮತ್ತೆ ಡಿಮ್ಯಾಂಡ್