AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gold Silver Rate Today: ಚಿನ್ನದ ದರ ಸ್ಥಿರ, ಬೆಳ್ಳಿ ಬೆಲೆಯಲ್ಲಿ ಇಳಿಕೆ; ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಹೀಗಿದೆ ವಿವರ

Gold Silver Price in Bangalore: ದೈನಂದಿನ ದರ ಪರಿಶೀಲನೆಯಲ್ಲಿ ಗಮನಿಸಿದಾಗ ನಿನ್ನೆಯ ದರವನ್ನೇ ಚಿನ್ನ ಇಂದೂ ಹೊಂದಿದೆ. ಬೆಳ್ಳಿ ದರದಲ್ಲಿ ಕೊಂಚ ಇಳಿಕೆ ಕಂಡು ಬಂದಿದ್ದು, ಬೆಂಗಳೂರು ಸೇರಿ ವಿವಿಧ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ ಎಂಬುದನ್ನು ನೋಡೋಣ.

Gold Silver Rate Today: ಚಿನ್ನದ ದರ ಸ್ಥಿರ, ಬೆಳ್ಳಿ ಬೆಲೆಯಲ್ಲಿ ಇಳಿಕೆ; ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಹೀಗಿದೆ ವಿವರ
ಚಿನ್ನದ ಕಿವಿಯೋಲೆ (ಸಾಂದರ್ಭಿಕ ಚಿತ್ರ)
Follow us
shruti hegde
|

Updated on: May 20, 2021 | 10:15 AM

ಬೆಂಗಳೂರು: ಕಳೆದ ಮೂರು ತಿಂಗಳಿಗೆ ಹೋಲಿಸಿದರೆ ಮೇ ತಿಂಗಳಿನಲ್ಲಿ ಚಿನ್ನದ ದರ ಗರಿಷ್ಠ ಮಟ್ಟದಲ್ಲಿದೆ. ದೈನಂದಿನ ದರ ಪರಿಶೀಲನೆಯಲ್ಲಿ ಗಮನಿಸಿದಾಗ ನಿನ್ನೆಯ ದರವನ್ನೇ ಚಿನ್ನ ಇಂದೂ ಹೊಂದಿದೆ. ಬೆಳ್ಳಿ ದರದಲ್ಲಿ ಕೊಂಚ ಇಳಿಕೆ ಕಂಡು ಬಂದಿದ್ದು, ಬೆಂಗಳೂರು ಸೇರಿ ವಿವಿಧ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ ಎಂಬುದನ್ನು ನೋಡೋಣ.

ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 45,450 ರೂಪಾಯಿ ಇದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 49,590 ರೂಪಾಯಿ ಇದೆ. ಆದರೆ ಚೆನ್ನೈ ನಗರದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರದಲ್ಲಿ 210 ರೂಪಾಯಿ ಏರಿಕೆ ಕಂಡು ಬಂದಿದ್ದು, ಇಂದು ದರ 45,980 ರೂಪಾಯಿ ಆಗಿದೆ. ಹಾಗೆಯೇ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರದಲ್ಲಿ 240 ರೂಪಾಯಿ ಏರಿಕೆ ಕಂಡಿದ್ದು 50,160 ರೂಪಾಯಿ ಆಗಿದೆ. ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 110 ರೂಪಾಯಿ ಏರಿಕೆಯ ಬಳಿಕ 46,930 ರೂಪಾಯಿ ಆಗಿದೆ. ಹಾಗೆಯೇ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 50,830 ರೂಪಾಯಿಗೆ ಏರಿಕೆಯಾಗಿದೆ.

ಹೈದರಾಬಾದ್​ನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 45,600 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 49,750 ರೂಪಾಯಿ ಆಗಿದೆ. ಕೋಲ್ಕತ್ತಾದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 46,850 ರೂಪಾಯಿ ಆಗಿದ್ದು, 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 50,310 ರೂಪಾಯಿಗೆ ಏರಿಕೆ ಆಗಿದೆ. ಮುಂಬೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನ 350 ರೂಪಾಯಿ ಏರಿಕೆಯ ಬಳಿಕ 46,000 ರೂಪಾಯಿಗೆ ಏರಿಕೆ ಆಗಿದೆ. ಹಾಗೆಯೇ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 350 ರೂಪಾಯಿ ಏರಿಕೆಯ ಬಳಿಕ 47,000 ರೂಪಾಯಿಗೆ ಏರಿಕೆ ಆಗಿದೆ.

ಬೆಳ್ಳಿ ದರ ಮಾಹಿತಿ ವಾಣಿಜ್ಯ ನಗರಿ ಮುಂಬೈ ನಗರದಲ್ಲಿ 1ಕೆಜಿ ಬೆಳ್ಳಿ ದರದಲ್ಲಿ 700 ರೂಪಾಯಿ ಇಳಿಕೆಯ ಬಳಿಕ 72,300 ರೂಪಾಯಿ ಆಗಿದೆ. ಹಾಗೆಯೇ ಕೋಲ್ಕತ್ತಾದಲ್ಲಿ 1ಕೆಜಿ ಬೆಳ್ಳಿ 700 ರೂಪಾಯಿ ಇಳಿಕೆಯ ನಂತರ 72,300 ರೂಪಾಯಿ ಆಗಿದೆ. ಹೈದರಾಬಾದ್​ನಲ್ಲಿ 1 ಕೆಜಿ ಬೆಳ್ಳಿ 600 ರೂಪಾಯಿ ಇಳಿಕೆ ಕಂಡು ಬಂದಿದ್ದು, ಇಂದು ದರ 76,900 ರೂಪಾಯಿ ಆಗಿದೆ. ಇನ್ನು, ದೆಹಲಿಯಲ್ಲಿ 1ಕೆಜಿ ಬೆಳ್ಳಿ ದರದಲ್ಲಿ 700 ರೂಪಾಯಿ ಇಳಿಕೆಯ ಬಳಿಕ 72,300 ರೂಪಾಯಿ ಆಗಿದೆ. ಬೆಂಗಳೂರು ನಗರದಲ್ಲಿ 1 ಕೆಜಿ ಬೆಳ್ಳಿ ದರ 700 ರೂಪಾಯಿ ಇಳಿಕೆಯ ನಂತರ 72,300 ರೂಪಾಯಿ ಇಳಿಕೆ ಕಂಡಿದೆ.

ಇದನ್ನೂ ಓದಿ: Gold Rate Today: ಗ್ರಾಹಕರಿಗೆ ಖುಷಿಯ ವಿಚಾರ; ಕುಸಿತ ಕಾಣುತ್ತಿರುವ ಚಿನ್ನದ ದರ

ಮಂಗಳೂರು: NH 169ರಲ್ಲಿ ಗುಡ್ಡ ಕುಸಿತ, ಒಂದು ಬದಿ ರಸ್ತೆ ಸಂಚಾರ ಬಂದ್​
ಮಂಗಳೂರು: NH 169ರಲ್ಲಿ ಗುಡ್ಡ ಕುಸಿತ, ಒಂದು ಬದಿ ರಸ್ತೆ ಸಂಚಾರ ಬಂದ್​
ದುಬೈನ 67 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಅವಘಡ; 3,820 ನಿವಾಸಿಗಳ ಸ್ಥಳಾಂತರ
ದುಬೈನ 67 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಅವಘಡ; 3,820 ನಿವಾಸಿಗಳ ಸ್ಥಳಾಂತರ
ಟೆಸ್ಟ್‌ ಚಾಂಪಿಯನ್​ಶಿಪ್ ಗೆಲ್ಲುತ್ತಿದ್ದಂತೆ ಭಾವುಕರಾದ ಆಫ್ರಿಕಾ ಆಟಗಾರರು
ಟೆಸ್ಟ್‌ ಚಾಂಪಿಯನ್​ಶಿಪ್ ಗೆಲ್ಲುತ್ತಿದ್ದಂತೆ ಭಾವುಕರಾದ ಆಫ್ರಿಕಾ ಆಟಗಾರರು
ಕನ್ನಡ ಸಿನಿಮಾ ಚೆನ್ನಾಗಿ ಓಡುತ್ತಿದ್ದರೂ, ಹಿಂದಿ ಸಿನಿಮಾಕ್ಕ ಅವಕಾಶ
ಕನ್ನಡ ಸಿನಿಮಾ ಚೆನ್ನಾಗಿ ಓಡುತ್ತಿದ್ದರೂ, ಹಿಂದಿ ಸಿನಿಮಾಕ್ಕ ಅವಕಾಶ
ನೀರು ಹುಡುಕುತ್ತಾ ಒಣಗಿದ ಬಾವಿಗೆ ಬಿದ್ದ ಚಿರತೆ
ನೀರು ಹುಡುಕುತ್ತಾ ಒಣಗಿದ ಬಾವಿಗೆ ಬಿದ್ದ ಚಿರತೆ
ಉಪನ್ಯಾಸಕ ಕನ್ನಡದಲ್ಲಿ ಮಾತನಾಡಿದ್ದಕ್ಕೆ ಕೆಲಸದಿಂದ ತೆಗೆದ RV ಕಾಲೇಜು ಮಂಡಳಿ
ಉಪನ್ಯಾಸಕ ಕನ್ನಡದಲ್ಲಿ ಮಾತನಾಡಿದ್ದಕ್ಕೆ ಕೆಲಸದಿಂದ ತೆಗೆದ RV ಕಾಲೇಜು ಮಂಡಳಿ
ವಿಶ್ವಾಸ್ ಕುಮಾರ್ ರಮೇಶ್​ ಆರೋಗ್ಯವನ್ನೂ ವಿಚಾರಿಸಿದ ಕಾಂಗ್ರೆಸ್ ನಾಯಕರು
ವಿಶ್ವಾಸ್ ಕುಮಾರ್ ರಮೇಶ್​ ಆರೋಗ್ಯವನ್ನೂ ವಿಚಾರಿಸಿದ ಕಾಂಗ್ರೆಸ್ ನಾಯಕರು
ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದಾಗ ಗ್ರಾಮಸ್ಥರಿಂದ ಶಾಸಕನಿಗೆ ತರಾಟೆ
ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದಾಗ ಗ್ರಾಮಸ್ಥರಿಂದ ಶಾಸಕನಿಗೆ ತರಾಟೆ
ವಿಮಾನದ ಕರ್ಕಶ ಶಬ್ದ ಕೇಳಿ ಪತನ ನಿಶ್ಚಿತ ಅಂದುಕೊಂಡಿದ್ದೆ: ಮತ್ತೊಬ್ಬ ಮಹಿಳೆ
ವಿಮಾನದ ಕರ್ಕಶ ಶಬ್ದ ಕೇಳಿ ಪತನ ನಿಶ್ಚಿತ ಅಂದುಕೊಂಡಿದ್ದೆ: ಮತ್ತೊಬ್ಬ ಮಹಿಳೆ
ಭಾರೀ ಮಳೆ: ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಕುಸಿಯುತ್ತಿರುವ ಗುಡ್ಡ!
ಭಾರೀ ಮಳೆ: ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಕುಸಿಯುತ್ತಿರುವ ಗುಡ್ಡ!