Gruha Jyothi Scheme: ಒಂದು ಆರ್​ಆರ್ ಸಂಖ್ಯೆಗೆ ಮಾತ್ರ ಉಚಿತ ವಿದ್ಯುತ್: ಕೆಜೆ ಜಾರ್ಜ್ ಪುನರುಚ್ಚಾರ

|

Updated on: Jun 05, 2023 | 9:02 PM

ಬೆಸ್ಕಾಂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಇಂಧನ ಇಲಾಖೆ ಸಚಿವ ಕೆಜೆ ಜಾರ್ಜ್, ಒಂದು ಆರ್​ಆರ್ ಸಂಖ್ಯೆಗೆ ಮಾತ್ರ ಉಚಿತ ವಿದ್ಯುತ್ ಎಂದು ಹೇಳುವ ಮೂಲಕ ತಮ್ಮ ನಿಲುವನ್ನು ಪುನರುಚ್ಚರಿಸಿದರು.

Gruha Jyothi Scheme: ಒಂದು ಆರ್​ಆರ್ ಸಂಖ್ಯೆಗೆ ಮಾತ್ರ ಉಚಿತ ವಿದ್ಯುತ್: ಕೆಜೆ ಜಾರ್ಜ್ ಪುನರುಚ್ಚಾರ
ಒಂದು ಆರ್​ಆರ್ ಸಂಖ್ಯೆಗೆ ಮಾತ್ರ ಉಚಿತ ವಿದ್ಯುತ್ ಎಂದು ಸ್ಪಷ್ಟಪಡಿಸಿದ ಸಚಿವ ಕೆಜೆ ಜಾರ್ಜ್
Follow us on

ಬೆಂಗಳೂರು: ಒಂದು ಆರ್​ಆರ್ ಸಂಖ್ಯೆಗೆ ಮಾತ್ರ ಉಚಿತ ವಿದ್ಯುತ್ (Free Electricity) ಎಂದು ಹೇಳುವ ಮೂಲಕ ಇಂಧನ ಇಲಾಖೆ ಸಚಿವ ಕೆಜೆ ಜಾರ್ಜ್ (KJ George) ಅವರು ಸರ್ಕಾರದ ನಿಲುವನ್ನು ಪುನರುಚ್ಚರಿಸಿದರು. ಬೆಂಗಳೂರಿನಲ್ಲಿ ನಡೆದ ಬೆಸ್ಕಾಂ (BESCOM) ಅಧಿಕಾರಿಗಳೊಂದಿಗಿನ ಸಭೆಯ ನಂತರ ಮಾತನಾಡಿದ ಸಚಿವರು, ಬಾಡಿಗೆದಾರರು ಮತ್ತು ಮಾಲೀಕರು ಅಂತ ನಾವು ವ್ಯತ್ಯಾಸ ಮಾಡುತ್ತಿಲ್ಲ. ಸ್ಥಾವರ ಎಂಬುದರ ಅರ್ಥ ಒಂದು ಆರ್​ಆರ್ ನಂಬರ್. ಯಾರು ಎಷ್ಟೇ ಆರ್​ಆರ್ ನಂಬರ್ ಹೊಂದಿರಲಿ, ಆದರೆ ಒಂದು ಆರ್​ಆರ್ ನಂಬರ್​​ಗೆ ಮಾತ್ರ ಯೋಜನೆ ಅಡಿಯಲ್ಲಿ ಬರುತ್ತದೆ ಎಂದು ಸ್ಪಷ್ಟಪಡಿಸಿದರು.

ನಾವು ಉಚಿತವಾಗಿ ನೀಡುತ್ತಿರುವುದು ಒಂದು RR‌ ನಂಬರ್​​ಗೆ ಮಾತ್ರ. ಒಂದೇ ಮನೆಯಲ್ಲಿ ಎರಡು ಮೂರು RR ನಂಬರ್ ಇಟ್ಟುಕೊಳ್ಳಬಹುದು, ನಾವು ಬೇಡ ಎನ್ನಲ್ಲ, ಆದರೆ 200 ಯುನಿಟ್ ಗಿಂತ ಹೆಚ್ಚಾದರೆ ಅವರಿಗೆ ಉಚಿತವಾಗಿವಾಗಿ ಸಿಗಲ್ಲ. ಒಂದೇ ಆರ್. ಆರ್ ನಂಬರ್ ಇಟ್ಟುಕೊಳ್ಳಬೇಕು. ಆರ್.ಆರ್ ಮೀಟರ್​ನ ಒಂದು ವರ್ಷದ ಸರಾಸರಿಯಲ್ಲಿ ಮಾಡುತ್ತಾ ಇದ್ದೇವೆ. ಮಾಲೀಕ ಹಾಗೂ ಬಾಡಿಗೆದಾರ ಎಂಬ ವ್ಯತ್ಯಾಸ ಇರಲ್ಲ. ಯಾರಿಗೆ ಉಚಿತವಾಗಿ ಕೊಡುತ್ತೇವೋ ಎಂದು ಗೊತ್ತಾಗಬೇಕಲ್ಲ, ಅದಕ್ಕೆ ಅರ್ಜಿ ಕರೆದಿದ್ದೇವೆ. ಎರಡು ಕೋಟಿ ಐದಿನೈದು ಲಕ್ಷ ಆರ್. ಆರ್ ನಂಬರ್ ಇದಾವೆ. ಸುಮಾರು 13 ಸಾವಿರ ಕೋಟಿ ವೆಚ್ಚ ಆಗಲಿದೆ ಎಂದರು.

ಬೆಂಗಳೂರಿನ ಕೆ.ಆರ್.ವೃತ್ತದ ಬಳಿ ಇರುವ ಬೆಸ್ಕಾಂ ಕಚೇರಿಯಲ್ಲಿ ಗೃಹಜ್ಯೋತಿ ಯೋಜನೆ ಜಾರಿ ವಿಚಾರವಾಗಿ ಅಧಿಕಾರಿಗಳೊಂದಿಗೆ ಸಚಿವ ಜಾರ್ಜ್ ಅವರು ಸಭೆ ನಡೆಸಿದರು. ಈ ವೇಳೆ, ನಿಬಂಧನೆಗಳಿಗೆ ಸಂಬಂಧಿಸಿದಂತೆ ಸುದೀರ್ಘ ಚರ್ಚೆ ನಡೆಸಿದರು. ಇದೇ ಸಂದರ್ಭದಲ್ಲಿ ಇನ್ನಿತರ ಮಾಹಿತಿಗಳನ್ನೂ ಕಲೆಹಾಕಿಕೊಂಡರು.

ಗೃಹಜ್ಯೋತಿ ಯೋಜನೆಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹೊಸ ನಿಬಂಧನೆ ಹಾಕಿದ್ದು, ಯೋಜನೆಯ ಲಾಭ ಪಡೆಯಲು ಸೇವಾ ಸಿಂಧು ಮೂಲಕ ಅರ್ಜಿ ಸಲ್ಲಿಸಲು ಸೂಚನೆ ನೀಡಿದೆ. ಆ ಮೂಲಕ ಅರ್ಜಿ ಸಲ್ಲಿಸಿದವರಿಗಷ್ಟೇ 200 ಯುನಿಟ್ ವರೆಗೆ ವಿದ್ಯುತ್ ಉಚಿತವಾಗಿ ಸಿಗಲಿದೆ. ಜುಲೈ 1 ರಿಂದ ಗೃಹ ಜ್ಯೋತಿ ಜಾರಿಯಾಗಲಿದೆ.

ಇದನ್ನೂ ಓದಿ: Gruha Jyothi Scheme: ಗೃಹಜ್ಯೋತಿಗೆ ಹೊಸ ನಿಬಂಧನೆ, ಉಚಿತ ವಿದ್ಯುತ್​ಗಾಗಿ ಸೇವಾಸಿಂಧು ಮೂಲಕ ಅರ್ಜಿ ಸಲ್ಲಿಸಲು ಸೂಚನೆ

ವಾರ್ಷಿಕ ಸರಾಸರಿ ಬಳಕೆಯು 100 ಯೂನಿಟ್‌ ಇದೆ ಎಂದಿಟ್ಟುಕೊಳ್ಳೋಣ (ಮಾಸಿಕ ವಿದ್ಯುತ್ ಬಳಕೆಯನ್ನು ಒಟ್ಟು ಲೆಕ್ಕ ಹಾಕಿ 12 ರಿಂದ ಭಾಗಿಸುವ ಮೂಲಕ ಇದನ್ನು ಪಡೆಯಲಾಗಿದೆ). ಮುಖ್ಯಮಂತ್ರಿಗಳು ಹೇಳಿದ ಪ್ರಕಾರ, ಒಟ್ಟು ಸರಾಸರಿ ಬಳಕೆಯ ಮೇಲೆ ಹೆಚ್ಚುವರಿ ಶೇ 10 ರಷ್ಟನ್ನು ಒದಗಿಸಲಾಗುತ್ತದೆ. ಇದರೊಂದಿಗೆ, ಶೇ 110 ಯೂನಿಟ್ ವರೆಗೆ ವಿದ್ಯುತ್ ಬಳಸಿದರೆ ಬಿಲ್ ಪಾವತಿಸಬೇಕಿಲ್ಲ. ಜುಲೈ ತಿಂಗಳಿನಿಂದ, ಈ 110 ಯೂನಿಟ್​ ವರೆಗೆ ವಿದ್ಯುತ್ ಉಚಿತವಾಗಿರುತ್ತವೆ. ಉದಾಹರಣೆಗೆ, ಜುಲೈನಲ್ಲಿ, ವಿದ್ಯುತ್ ಬಳಕೆಯು 200 ಯೂನಿಟ್‌ಗಳಾಗಿದ್ದರೆ, ಈ ಪೈಕಿ 110 ಯೂನಿಟ್ ಉಚಿತವಾಗಿರುತ್ತದೆ ಮತ್ತು ಉಳಿದ 90 ಯೂನಿಟ್‌ಗಳಿಗೆ ನೀವು ಪಾವತಿಸಬೇಕಾಗುತ್ತದೆ.

ವಾರ್ಷಿಕ ಸರಾಸರಿ ಬಳಕೆ 200 ಯೂನಿಟ್‌ಗಳ ವರೆಗೆ ಇರುವ ಯಾರಿಗೇ ಆದರೂ, ಜುಲೈನಿಂದ ಆ ಮಿತಿಯವರೆಗಿನ ಅವರ ವಿದ್ಯುತ್ ಬಳಕೆ ಉಚಿತವಾಗಿರುತ್ತದೆ. ಆದರೆ, ಒಂದು ತಿಂಗಳ ಸರಾಸರಿ ಬಳಕೆ 200 ಯೂನಿಟ್‌ಗಿಂತ ಹೆಚ್ಚಿದ್ದರೆ ಸಂಪೂರ್ಣ ಬಿಲ್ ಪಾವತಿಸಬೇಕೇ ಅಥವಾ 200 ಯೂನಿಟ್‌ಗಳಿಗೆ ಮಾತ್ರ ವಿನಾಯಿತಿ ನೀಡಲಾಗುತ್ತದೆಯೇ? ಉಳಿದ ಬಿಲ್ ಮಾತ್ರ ಪಾವತಿಸಬೇಕೇ ಎಂಬುದನ್ನು ಸರ್ಕಾರ ಇನ್ನೂ ಸ್ಪಷ್ಟಪಡಿಸಿಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:40 pm, Mon, 5 June 23