ಬೆಂಗಳೂರು: ಬಹಿರಂಗ ಹೇಳಿಕೆ ನೀಡದಂತೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಜೆಡಿಎಸ್ ಶಾಸಕರಿಗೆ ಸೂಚನೆ ನೀಡಿದ್ದಾರೆ. ರಾಮನಗರ ತಾಲೂಕಿನ ಬಿಡದಿ ಬಳಿಯ ಕೇತಗಾನಹಳ್ಳಿ ತೋಟದ ಮನೆಯಲ್ಲಿ ಗರಂ ಆದ ಹೆಚ್ಡಿಕೆ, ಏನೇ ಸಮಸ್ಯೆಯಿದ್ದರೂ 4 ಗೋಡೆ ಮಧ್ಯೆ ಬಗೆಹರಿಸಿಕೊಳ್ಳಬೇಕು. ಯಾರೇ ಚರ್ಚೆಗೆ ಬಂದರೂ ಅಂತಹವರಿಗೆ ಮುಕ್ತ ಅವಕಾಶವಿದೆ. ನಾವು ಯಾರಿಗೂ ಸಹ ಪಕ್ಷ ಬಿಟ್ಟು ಹೋಗುವಂತೆ ಹೇಳಿಲ್ಲ. ಹೋಗುವವರನ್ನು ಹೇಗೆ ಹಿಡಿದಿಟ್ಟುಕೊಳ್ಳಲು ಆಗುತ್ತದೆ ಅಂತ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಮ್ಮ ಪಕ್ಷದ ಶಕ್ತಿ ಬಳಕೆ ಮಾಡಿಕೊಂಡು ನಮ್ಮ ಕಾರ್ಯಕರ್ತರನ್ನು ನಡು ನೀರಿನಲ್ಲಿ ಬಿಟ್ಟು ಹೋದರು. ಇವರಿಂದಲೇ ಪಕ್ಷದ ಸಂಘಟನೆ ಹಿಂದೆ ಉಳಿದಿದ್ದು. ಅಧಿಕಾರದ ರುಚಿ ಕಂಡು ನಡು ನೀರಲ್ಲಿ ಕಾರ್ಯಕರ್ತರನ್ನು ಬಿಟ್ಟು ಹೋಗುತ್ತಾರೆ. ನಾಯಕರಿಂದ ಪಕ್ಷ ಅಲ್ಲ, ಕಾರ್ಯಕರ್ತರಿಂದ ಪಕ್ಷ ಅನ್ನೋದು ಗೊತ್ತಾಗುತ್ತದೆ. ಪಕ್ಷ ಬಿಟ್ಟು ಹೋಗಿ ಎಂದು ಹೇಳಿಲ್ಲ. ಹೋದ ಮೇಲೆ ನಾನೇನು ಮಾಡಲು ಆಗಲ್ಲ. ಪಕ್ಷಕ್ಕೆ ಕುತ್ತಿಗೆ ಕುಯ್ದು, ಬೆನ್ನಿಗೆ ಚೂರಿ ಹಾಕುತ್ತಿದ್ದಾರೆ. ಅಂತಹ ಕ್ಷೇತ್ರದಲ್ಲಿ ಬದಲಿ ನಾಯಕರನ್ನು ಆಯ್ಕೆ ಮಾಡಲೇಬೇಕು. ಮೂರ್ನಾಲ್ಕು ಕ್ಷೇತ್ರದಲ್ಲಿ ಹೀಗೆ ಆಗಿದೆ. ನಮ್ಮಿಂದ ಯಾವುದೇ ಶಾಸಕರಿಗೆ ಅಪಪ್ರಚಾರ ಆಗಿಲ್ಲ ಅಂತ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಕಾಂಗ್ರೆಸ್ ನಾಯಕರಿಗೆ ನಡುಕ
ಜೆಡಿಎಸ್ ಬಗ್ಗೆ ಕಾಂಗ್ರೆಸ್ ನಾಯಕರಿಗೆ ನಡುಕ ಶುರವಾಗಿದೆ ಎಂದು ಹೇಳಿಕೆ ನೀಡಿದ ಹೆಚ್ಡಿಕೆ, ಜೆಡಿಎಸ್ ನಿಷ್ಕ್ರಿಯವಾಗಿಬಿಟ್ಟಿದೆ ಎಂದು ತಿಳಿದುಕೊಂಡಿದ್ದರು. ನಾವು ಕಾರ್ಯಾಗಾರ ಶುರು ಮಾಡ್ತಿದ್ದಂತೆ ನಡುಕ ಶುರುವಾಗಿದೆ. ಹೀಗಾಗಿ ನಮ್ಮಂತೆಯೇ ಕಾರ್ಯಾಗಾರ ಆಯೋಜಿಸುತ್ತಿದ್ದಾರೆ ಅಂತ ಅಭಿಪ್ರಾಯಪಟ್ಟರು.
ಕೊಲೆಗಡುಕ ಸರ್ಕಾರ
ಇನ್ನು ಇದೇ ವೇಳೆ ತಾಯಿ, ಮಕ್ಕಳ ಆತ್ಮಹತ್ಯೆ ಪ್ರಕರಣದ ಬಗ್ಗೆ ಕುಮಾರಸ್ವಾಮಿ ಪ್ರತಿಕ್ರಿಯಿಸಿದರು. ನೆಲಮಂಗಲದ ತಾಯಿ, ಮಕ್ಕಳ ಆತ್ಮಹತ್ಯೆ ಹೃದಯವಿದ್ರಾವಕ. ಸರ್ಕಾರಿ ನೌಕರರು ಮೃತಪಟ್ಟರೆ ಅನುಕಂಪದ ಮೇಲೆ ಕೆಲಸ ನೀಡಬೇಕು. ಆದರೆ ಆ ಹೆಣ್ಣು ಮಗಳಿಗೆ ಈ ಸರ್ಕಾರ ಕೆಲಸವೂ ಕೊಟ್ಟಿಲ್ಲ. ಈ ಸರ್ಕಾರಕ್ಕೆ ಯಾವ ಗಮನವೂ ಇರಲಿಲ್ಲ. ಇದು ಕೊಲೆಗಡುಕ ಸರ್ಕಾರ ಅಂದರೆ ತಪ್ಪಾಗಲ್ಲ. ಆ ಹೆಣ್ಣು ಮಗಳು ಎಷ್ಟು ಕಷ್ಟ ಅನುಭವಿಸಿರಬೇಕು ಅಂತ ಸರ್ಕಾರದ ವಿರುದ್ದ ಗುಡುಗಿದರು.
ಜೆಡಿಎಸ್ ಪಕ್ಷ ಎಲ್ಲ ಸಮುದಾಯಗಳನ್ನು ಗೌರವಿಸುತ್ತದೆ. ಅಲ್ಪಸಂಖ್ಯಾತ ಸಮುದಾಯಕ್ಕೆ ಹಲವು ಕೊಡುಗೆ ನೀಡಿದ್ದೇವೆ. ಎಲ್ಲ ಸಮುದಾಯಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗ್ತೇವೆ. ವಿಜಯದಶಮಿ ಬಳಿ ಜಿಲ್ಲಾವಾರು ಸಭೆಗಳನ್ನು ಮಾಡುತ್ತೇವೆ. ಬೆಂಗಳೂರಿನ ಜೆಪಿ ಭವನದಲ್ಲಿ ಜಿಲ್ಲಾವಾರು ಸಭೆ ಮಾಡ್ತೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ
ಗಾಂಧಿನಗರ ಮಹಾನಗರ ಪಾಲಿಕೆ ಚುನಾವಣೆ; ಮತಗಟ್ಟೆಗೆ ಬಂದು ಮತ ಚಲಾಯಿಸಿದ ಪ್ರಧಾನಿ ಮೋದಿ ತಾಯಿ ಹೀರಾಬೆನ್
WhatsApp: ವಾಟ್ಸ್ಆ್ಯಪ್ನಲ್ಲಿರುವ ಈ ಹಿಡನ್ ಫೀಚರ್ ಅನ್ನು ನೀವು ಬಳಸಿದ್ದೀರಾ?: ಒಮ್ಮೆ ಚೆಕ್ ಮಾಡಿ
Published On - 12:48 pm, Sun, 3 October 21