ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಈಗಾಗಲೇ ಮೂರು ಗ್ಯಾರಂಟಿಗಳು ಜಾರಿ ಆಗಿವೆ. ನಾಲ್ಕನೇ ಗ್ಯಾರಂಟಿ ಗೃಹಲಕ್ಷ್ಮೀ ಯೋಜನೆಯನ್ನು(Gruha Lakshmi Scheme) ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಜಾರಿ ಮಾಡಿದ್ದು ಇಂದಿನಿಂದ ಅರ್ಜಿಸಲ್ಲಿಕೆ ಅರಂಭವಾಗಿದೆ. ಅರ್ಜಿ ನೋಂದಣಿಗೆ ಆಧಾರ್ ಕಾರ್ಡ್, ಪಡಿತರ ಚೀಟಿ, ಮೊಬೈಲ್ ನಂಬರ್ ಅಗತ್ಯವಿದ್ದು, ಬೆಂಗಳೂರು ಒನ್, ಗ್ರಾಮ ಒನ್, ಕರ್ನಾಟಕ ಒನ್, ಬಾಪುಜಿ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಇಂದಿನಿಂದ ಬೆಂಗಳೂರು ಒನ್ ಕೇಂದ್ರಗಳಿಗೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ಸಾಧ್ಯತೆ ಇದೆ. ಕೇಂದ್ರಗಳಲ್ಲಿ ನೂಕು ನುಗ್ಗಲಾಗುವ ಸಾಧ್ಯತೆ ಇದೆ. ಸದ್ಯ 1.28 ಕೋಟಿಯಷ್ಟು ಗೃಹಲಕ್ಷ್ಮಿ ಫಲಾನುಭವಿಗಳಿದ್ದು, ಬ್ಯಾಂಕ್ ಅಕೌಂಟ್ ಗೆ ಆಧಾರ್ ಕಾರ್ಡ್ ಕಡ್ಡಾಯವಾಗಿ ಲಿಂಕ್ ಆಗಿರಬೇಕು. ಅರ್ಜಿ ಸಲ್ಲಿಕೆಯ ಸ್ವೀಕೃತಿಪತ್ರ ಕಡ್ಡಾಯ.
ಇದನ್ನೂ ಓದಿ: Gruhalakshmi Scheme: ಗೃಹಲಕ್ಷ್ಮಿ ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ; ಅರ್ಜಿ ಸಲ್ಲಿಕೆ ಆರಂಭ
ಪಡಿತರ ಚೀಟಿಯಲ್ಲಿ ಮನೆಯೊಡತಿ ಲಿಂಕ್ ಮಾಡಿಸಿರುವ ಮೊಬೈಲ್ ನಂಬರ್ ಗೆ ದಿನಾಂಕ, ಸಮಯ ಮತ್ತು ಸ್ಥಳದ ಸಂದೇಶ ಬರಲಿದೆ. ನಿಗದಿತ ದಿನ ಸ್ಥಳೀಯ ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರ ಅಥವಾ ಬೆಂಗಳೂರು ಒನ್, ಕರ್ನಾಟಕ ಒನ್ ಕೇಂದ್ರಕ್ಕೆ ತೆರಳಿ ನೋಂದಣಿ ಮಾಡಿಸಬೇಕು. ನೋಂದಣಿಗೆ ಸಂದೇಶ ಬಾರದೇ ಇದ್ರೆ 1902ಗೆ ಕರೆ ಮಾಡಿ ಅಥವಾ 8147500500 ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು. ನಿಗದಿತ ಸಮಯಕ್ಕೆ ಹೋಗಲು ಆಗದಿದ್ದರೆ ಅದೇ ಸೇವಾ ಕೇಂದ್ರಕ್ಕೆ ಸಂಜೆ 5-7ಕ್ಕೆ ತೆರಳಿ ನೋಂದಣಿ ಮಾಡಬಹುದು. ಒಂದು ವೇಳೆ ನೀವು ನಿಗದಿತ ಸ್ಥಳಕ್ಕೆ ಹೋಗಲು ಸಾಧ್ಯವಿಲ್ಲದಿದ್ದರೆ ಸರ್ಕಾರವೇ ನೇಮಿಸಿರುವ ಪ್ರತಿನಿಧಿಗಳು ನಿಮ್ಮ ಮನೆಯ ಬಳಿಯೇ ಬಂದು ನೋಂದಣಿ ಮಾಡಲಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ