
ಬೆಂಗಳೂರು, ಸೆಪ್ಟೆಂಬರ್ 07: ಹೊಸ ನಗರಗಳು, ಮಾಲ್‌ಗಳು ಅಥವಾ ಜನನಿಬಿಡ ಮಾರುಕಟ್ಟೆಗಳಲ್ಲಿ ವಾಹನಗಳನ್ನು ಪಾರ್ಕ್ ಮಾಡಿದಾಗ, ಹಲವು ಬಾರಿ ನಾವು ಕಾರನ್ನು ಎಲ್ಲಿ ನಿಲ್ಲಿಸಿದ್ದೇವೆ ಎಂಬುದನ್ನೇ ಮರೆತುಬಿಡುತ್ತೇವೆ. ಇದರಿಂದಾಗಿ ಸ್ವಂತ ವಾಹನ ಹುಡುಕಲು ಗಂಟೆಗಟ್ಟಲೆ ಸಮಯ ವ್ಯರ್ಥವಾಗುತ್ತದೆ. ಆದರೆ, ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿರುವ ಗೂಗಲ್ ಮ್ಯಾಪ್ಸ್‌ನ ಸೇವ್ಡ್ ಪಾರ್ಕಿಂಗ್ ಫೀಚರ್ ಮೂಲಕ ಈ ಸಮಸ್ಯೆಗೆ ಸುಲಭವಾಗಿ ಪರಿಹಾರ ಕಂಡುಕೊಳ್ಳಬಹುದು.
ಕಾರಿನ ಬಳಿಗೆ ಹಿಂತಿರುಗುವಾಗ ಗೂಗಲ್ ಮ್ಯಾಪ್ಸ್ ತೆರೆದು, ಕೆಳಗೆ ಕಾಣಿಸುವ ‘ಸೇವ್ಡ್ ಪಾರ್ಕಿಂಗ್’ ಮೇಲೆ ಕ್ಲಿಕ್ ಮಾಡಿ ‘ಡೈರೆಕ್ಷನ್ಸ್’ ಅಥವಾ ‘ಸ್ಟಾರ್ಟ್’ ನೀಡಿದರೆ, ಮ್ಯಾಪ್ ನಿಮ್ಮನ್ನು ನೇರವಾಗಿ ಕಾರಿನ ಬಳಿಗೆ ಕರೆದೊಯ್ಯುತ್ತದೆ. ವಾಹನ ತಲುಪಿದ ನಂತರ ‘ಕ್ಲಿಯರ್’ ಕೊಟ್ಟು ಆ ಪಾಯಿಂಟ್ ತೆಗೆದುಹಾಕಬಹುದು.
ಈ ಫೀಚರ್ನಿಂದ ಪಾರ್ಕಿಂಗ್ ಫ್ಲೋರ್, ಪಿಲ್ಲರ್ ಸಂಖ್ಯೆ ಇತ್ಯಾದಿ ವಿವರಗಳನ್ನು ಬರೆದಿಡಬಹುದು. ಪಾರ್ಕಿಂಗ್ ಸಮಯದ ಮಿತಿಯನ್ನು ಹೊಂದಿಸಬಹುದು. ನಿಮ್ಮ ವಾಹನ ನಿಂತಿರುವ ಜಾಗದ ಫೋಟೋ ತೆಗೆದು ಅಪ್‌ಲೋಡ್ ಮಾಡಬಹುದು. ಈ ಪಾರ್ಕಿಂಗ್ ಸ್ಥಳವನ್ನು ಸ್ನೇಹಿತರು ಅಥವಾ ಕುಟುಂಬದವರೊಂದಿಗೆ ಶೇರ್ ಕೂಡ ಮಾಡಬಹುದು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ