ಬೆಂಗಳೂರಲ್ಲಿ ರಸ್ತೆ ದಾಟುವಾಗ ಸಂಭವಿಸಿದ ಅಪಘಾತಗಳಲ್ಲಿ ಕಳೆದ 4 ವರ್ಷಗಳಲ್ಲಿ ಪ್ರಾಣ ಕಳೆದುಕೊಂಡಿದ್ದು 500 ಪಾದಚಾರಿಗಳು

| Updated By: ರಶ್ಮಿ ಕಲ್ಲಕಟ್ಟ

Updated on: Jul 01, 2022 | 4:38 PM

ಸಂಶೋಧನಾ ಸಂಸ್ಥೆಯಾದ ವರ್ಲ್ಡ್ ರಿಸೋರ್ಸಸ್ ಇನ್‌ಸ್ಟಿಟ್ಯೂಟ್ (ಡಬ್ಲ್ಯುಆರ್‌ಐ) ವಿಶ್ಲೇಷಿಸಿದ ಕ್ರ್ಯಾಶ್ ಡೇಟಾ ಪ್ರಕಾರ, ನಾಲ್ಕು ವರ್ಷಗಳಲ್ಲಿ ಒಟ್ಟು 907 ಪಾದಚಾರಿಗಳ ಸಾವು ಸಂಭವಿಸಿದೆ.

ಬೆಂಗಳೂರಲ್ಲಿ ರಸ್ತೆ ದಾಟುವಾಗ ಸಂಭವಿಸಿದ ಅಪಘಾತಗಳಲ್ಲಿ ಕಳೆದ 4 ವರ್ಷಗಳಲ್ಲಿ ಪ್ರಾಣ ಕಳೆದುಕೊಂಡಿದ್ದು 500 ಪಾದಚಾರಿಗಳು
ಪ್ರಾತಿನಿಧಿಕ ಚಿತ್ರ
Image Credit source: CHETAN SODAYE/WRI INDIA
Follow us on

ಬೆಂಗಳೂರಲ್ಲಿ ರಸ್ತೆ ದಾಟುವಾಗ ಮೈಯೆಲ್ಲಾ ಕಣ್ಣಾಗಿರಬೇಕು. ಒನ್ ವೇ ಆಗಿದ್ದರೂ ಎರಡೂ ಕಡೆ ನೋಡ್ಕೊಂಡು ರಸ್ತೆ ದಾಟಬೇಕು ಎಂಬುದು ಬೆಂಗಳೂರಿನವರಿಗೆ ಗೊತ್ತಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಅಂದರೆ 2017 ರಿಂದ 2020 ರವರೆಗಿನ ರಸ್ತೆ ಅಪಘಾತಗಳ ವಿಶ್ಲೇಷಣೆ ಪ್ರಕಾರ ಬೆಂಗಳೂರಿನಲ್ಲಿ (Bengaluru) ರಸ್ತೆ ದಾಟಲು ಪ್ರಯತ್ನಿಸುವಾಗ 500 ಪಾದಚಾರಿಗಳು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಿದೆ. ಸಂಶೋಧನಾ ಸಂಸ್ಥೆಯಾದ ವರ್ಲ್ಡ್ ರಿಸೋರ್ಸಸ್ ಇನ್‌ಸ್ಟಿಟ್ಯೂಟ್ (WRI) ವಿಶ್ಲೇಷಿಸಿದ ಕ್ರ್ಯಾಶ್ ಡೇಟಾ ಪ್ರಕಾರ, ನಾಲ್ಕು ವರ್ಷಗಳಲ್ಲಿ ಒಟ್ಟು 907 ಪಾದಚಾರಿಗಳ (Pedestrian) ಸಾವು ಸಂಭವಿಸಿದೆ. ಅದರಲ್ಲಿ ಶೇ60 ಜನರು ರಸ್ತೆಗಳನ್ನು ದಾಟುವಾಗ ಸಂಭವಿಸಿದ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಹೆಚ್ಚಿನ ರಸ್ತೆಗಳಲ್ಲಿ ಪಾದಚಾರಿ ಮೂಲಸೌಕರ್ಯಗಳ ಕೊರತೆ, ವಿಶೇಷವಾಗಿ ಸುರಕ್ಷಿತ ಕ್ರಾಸಿಂಗ್ ಪಾದಚಾರಿಗಳ ಸಾವಿನ ಸಂಖ್ಯೆಯಲ್ಲಿ ಹೆಚ್ಚಳಕ್ಕೆ ಪ್ರಾಥಮಿಕ ಕಾರಣವೆಂದು ತಜ್ಞರು ಹೇಳಿರುವುದಾಗಿ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ. ಫೂಟ್‌ ಓವರ್‌ಬ್ರಿಡ್ಜ್‌ಗಳನ್ನು ನಿರ್ಮಿಸುವ ಬದಲು, ಸುರಕ್ಷಿತ ಅಟ್-ಗ್ರೇಡ್ ಕ್ರಾಸಿಂಗ್‌ಗಳು ಇರಬೇಕು ಎಂದು ಅವರು ಹೇಳುತ್ತಾರೆ. ಡಬ್ಲ್ಯುಆರ್‌ಐ  ಎಫ್ಐಆರ್​​​ಗಳನ್ನು  ಒಟ್ಟುಗೂಡಿಸಿ ಅಪಘಾತಗಳು ಸಂಭವಿಸಿದ ಕೆಲವು ಸ್ಥಳಗಳನ್ನು ಪರಿಶೀಲಿಸಿತು. ಪಾದಾಚಾರಿ ಸಾವು ಪ್ರಕರಣಗಳಲ್ಲಿ 60 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರೇ ಅತೀ ಹೆಚ್ಚು ಪ್ರಾಣ ಕಳೆದುಕೊಂಡಿರುವುದು.ಅಂದರೆ 185 ಹಿರಿಯ ನಾಗರಿಕರು ಸಾವಿಗೀಡಾಗಿದ್ದಾರೆ. 46 ಮತ್ತು 60 ವಯಸ್ಸಿನ ನಡುವೆ ಇರುವ 128 ಮಂದಿ ಇಂಥಾ ಅಪಘಾತಗಳಲ್ಲಿ ಸಾವಿಗೀಡಾಗಿದ್ದಾರೆ.

ಶೇ88 ಪಾದಚಾರಿ ಸಾವುಗಳು ರಸ್ತೆ ದಾಟುವಿಕೆಗಳಲ್ಲಿ ಸಂಭವಿಸಿವೆ ಎಂದು ವಿಶ್ಲೇಷಣೆ ತೋರಿಸುತ್ತದೆ. ವಾಹನಗಳ ವೇಗವಾಗಿ ನುಗಿದ್ದೇ ಇದಕ್ಕೆ ಕಾರಣ.

ಮೆಜೆಸ್ಟಿಕ್ ಟರ್ಮಿನಲ್, ಕೆಆರ್ ಮಾರುಕಟ್ಟೆ, ಔಟರ್ ರಿಂಗ್ ರೋಡ್ ಬಳ್ಳಾರಿ ರಸ್ತೆ ಮತ್ತು ಹೊಸೂರು ರಸ್ತೆ ಅಪಘಾತದ ಹಾಟ್‌ಸ್ಪಾಟ್‌ಗಳಾಗಿವೆ. ಸುಮಾರು ಶೇ 28 ಸಾವುಗಳು ಸೂರ್ಯಾಸ್ತದ ನಂತರ ಸಂಭವಿಸಿವೆ. ಅಂದರೆ ಸಂಜೆ 7 ರಿಂದ 10 ರವರೆಗೆ ಸಂಭವಿಸಿದ್ದಾಗಿದೆ.

ಪಾದಚಾರಿ ಕ್ರಾಸಿಂಗ್‌ಗಳು ನಗರದಲ್ಲಿ ಪ್ರಮುಖ ಕನೆಕ್ಟರ್‌ಗಳಾಗಿವೆ. ಇವುಗಳು ಎಲ್ಲಾ ರಸ್ತೆ ಬಳಕೆದಾರರಿಗೆ ಸುಸ್ಥಿರ ಚಲನಶೀಲತೆ ಮತ್ತು ಸುರಕ್ಷತೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತವೆ. ಪಾದಚಾರಿಗಳು ರಸ್ತೆ ದಾಟುವಾಗ ಸುಲಭ ಮತ್ತು ಆರಾಮದಾಯಕ ಮಾರ್ಗವನ್ನು ಬಯಸುತ್ತಾರೆ ಎಂದು WRI ಇಂಡಿಯಾದ ಸುಸ್ಥಿರ ನಗರಗಳು ಮತ್ತು ಸಾರಿಗೆಯ ವ್ಯವಸ್ಥಾಪಕಿ ಪ್ರಿಯಾಂಕಾ ಸುಲ್ಖ್ಲಾನ್ ಹೇಳುತ್ತಾರೆ.

ಹೆಚ್ಚಿನ ಫೂಟ್ ಓವರ್ ಬ್ರಿಡ್ಜ್ ಮತ್ತು ಅಂಡರ್‌ಪಾಸ್‌ಗಳನ್ನು ನಿರ್ಮಿಸುವುದು ಅಡ್ಡಾದಿಡ್ಡಿ ದಾಟುವಿಕೆಗೂ ಕಾರಣವಾಗುತ್ತದೆ. ಇದಕ್ಕಾಗಿಯೇ ಸುರಕ್ಷಿತ ಅಟ್-ಗ್ರೇಡ್ ಕ್ರಾಸಿಂಗ್‌ಗಳಿಗೆ ಆದ್ಯತೆ ನೀಡಬೇಕು ಮತ್ತು ಪಾದಚಾರಿ ಮೂಲಸೌಕರ್ಯವು ಜೀವಗಳನ್ನು ಉಳಿಸಲು ಮತ್ತು ಸಂಚಾರ ದಕ್ಷತೆಯನ್ನು ಸುಧಾರಿಸಲು ಗಮನಹರಿಸಬೇಕು” ಎಂದು ಅವರು ಹೇಳಿದರು.

ಅಟ್-ಗ್ರೇಡ್ ಸೇಫ್ ಕ್ರಾಸಿಂಗ್‌ಗಳ ಬದಲಿಗೆ ಮೂರು-ಲೇನ್ ಮತ್ತು ನಾಲ್ಕು-ಲೇನ್ ರಸ್ತೆಗಳಲ್ಲಿಯೂ ಸಹ ಸ್ಕೈವಾಕ್‌ಗಳನ್ನು ನಿರ್ಮಿಸಲು ಬಿಬಿಎಂಪಿ ಹೆಚ್ಚು ಗಮನಹರಿಸುತ್ತಿದೆ. ಔಟರ್ ರಿಂಗ್ ರಸ್ತೆಯಲ್ಲಿರುವ ಸ್ಕೈವಾಕ್‌ಗಳನ್ನು ಹೊರತುಪಡಿಸಿ ಬಹುತೇಕ ಸ್ಕೈವಾಕ್‌ಗಳು ಬಳಕೆಯಾಗದೆ ಉಳಿದಿವೆ ಏಕೆಂದರೆ ಪಾದಚಾರಿಗಳು ರಸ್ತೆಗಳನ್ನು ದಾಟಲು ಸುಲಭ ಮಾರ್ಗವನ್ನು ತೆಗೆದುಕೊಳ್ಳಲು ಬಯಸುತ್ತಾರೆ.

ಅಪಘಾತಗಳ ಸಂಖ್ಯೆ

2017 ಮತ್ತು 2020 ರ ನಡುವೆ ಬೆಂಗಳೂರಿನಲ್ಲಿ ರಸ್ತೆ ಅಪಘಾತಗಳು 2,739 ಜನರನ್ನು ಬಲಿ ತೆಗೆದುಕೊಂಡಿವೆ, ಅದರಲ್ಲಿ 907 ಪಾದಚಾರಿಗಳು ಆಗಿದ್ದಾರೆ.

ವರ್ಷ ಮತ್ತು ಆ ವರ್ಷ ರಸ್ತೆ ಅಪಘಾತದಲ್ಲಿ ಸಾವಿಗೀಡಾದ ಪಾದಚಾರಿಗಳ ಸಂಖ್ಯೆ

2017: 169

2018: 164

2019: 153

2020 (ಲಾಕ್‌ಡೌನ್ ವರ್ಷ): 58

ಶೇ81(740) ಸಾವುಗಳು ಜಂಕ್ಷನ್‌ಗಳಲ್ಲಿ ಸಂಭವಿಸದ ಅಪಘಾತದಲ್ಲಿ ದಾಖಲಾಗಿವೆ

ಹಿರಿಯ ನಾಗರಿಕರು: ಒಟ್ಟು ಪಾದಚಾರಿಗಳ ಸಾವಿನಲ್ಲಿ ಶೇ 32 60 ವರ್ಷಕ್ಕಿಂತ ಮೇಲ್ಪಟ್ಟವರು