ಇಂದಿರಾನಗರದ ಪಾದಚಾರಿ ಮಾರ್ಗ ಅಪಾಯದಲ್ಲಿ: ಕೆನಡಾ ವ್ಯಕ್ತಿಯ ಹೇಳಿದ್ದೇನು?

ಬೆಂಗಳೂರಿನ ದುಬಾರಿ ಪ್ರದೇಶವಾದ ಇಂದಿರಾನಗರದ ಮುರಿದ ಪಾದಚಾರಿ ಮಾರ್ಗಗಳ ಅಪಾಯವನ್ನು ಕೆನಡಾ ಪ್ರಜೆಯೊಬ್ಬರು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ವಿಡಿಯೋ ವೈರಲ್ ಆಗಿದೆ. ಮಕ್ಕಳು ಸೇರಿದಂತೆ ಪಾದಚಾರಿಗಳ ಸುರಕ್ಷತೆಗೆ ಇದೊಂದು ದೊಡ್ಡ ಸವಾಲಾಗಿದೆ ಎಂದು ಅವರು ಹೇಳಿದ್ದಾರೆ. ತೆರೆದ ಅಂತರಗಳು, ಅತಿಕ್ರಮಣಗಳಿಂದಾಗಿ ಪಾದಚಾರಿ ಮಾರ್ಗಗಳು ಬಳಕೆಗೆ ಯೋಗ್ಯವಿಲ್ಲ. ಮೂಲಸೌಕರ್ಯ ಸುಧಾರಣೆ ಬಗ್ಗೆ ಸಲಹೆ ನೀಡಿದ್ದಾರೆ.

ಇಂದಿರಾನಗರದ ಪಾದಚಾರಿ ಮಾರ್ಗ ಅಪಾಯದಲ್ಲಿ: ಕೆನಡಾ ವ್ಯಕ್ತಿಯ ಹೇಳಿದ್ದೇನು?
ವೈರಲ್​​ ವಿಡಿಯೋ

Updated on: Dec 22, 2025 | 11:42 AM

ಬೆಂಗಳೂರು, ಡಿ.22: ಬೆಂಗಳೂರಿನ ದುಬಾರಿ ನಗರಗಳಲ್ಲಿ ಒಂದಾದ ಇಂದಿರಾನಗರದಲ್ಲಿ ನಡೆದ ಅಪಾಯಕಾರಿ ವಿಚಾರದ ಬಗ್ಗೆ ಕೆನಾಡ ವ್ಯಕ್ತಿಯೊಬ್ಬರು ಇನ್ಸ್ಟಾಗ್ರಾಮ್​​ನಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಕೆನಡಾದ ಪ್ರಜೆಯೊಬ್ಬರು ತಮ್ಮ ಮಗನ ಜತೆಗೆ ಇಂದಿರಾನಗರದಲ್ಲಿ (Indiranagar footpaths) ಮುರಿದ ಪಾದಚಾರಿ ಮಾರ್ಗದಲ್ಲಿ ನಡೆದುಕೊಂಡು ಹೋಗಿದ್ದಾರೆ, ಇದೊಂದು ಅಪಾಯಕಾರಿ ಪುಟ್​ಪಾತ್ ಎಂದು ಕ್ಯಾಲೆಬ್ ಫ್ರೈಸೆನ್ ಹೇಳಿದ್ದಾರೆ. ಈ ವಿಡಿಯೋದಲ್ಲಿ ಅವರು ಮಗನೊಂದಿಗೆ ಇಂದಿರಾನಗರದ ಡಬಲ್ ರಸ್ತೆಯ ಉದ್ದಕ್ಕೂ ಬಿರುಕು ಬಿಟ್ಟಿರುವ ಪಾದಚಾರಿ ಮಾರ್ಗ, ಚರಂಡಿ ಮೇಲ್ಭಾಗಕ್ಕೆ ಅಳವಡಿಸಿರುವ ಸ್ಲ್ಯಾಬ್​​ಗಳು ಬಾಯ್ದೆರೆದಿರುವುದು ಕಾಣಬಹುದು.

ಬಿರುಕು ಬಿಟ್ಟ ಪಾದಚಾರಿ ದಾರಿಯಲ್ಲಿ ಸರಿಯಾದ ಸ್ಲ್ಯಾಬ್‌ಗಳು ಇಲ್ಲ. ಈ ತೆರೆದ ರಸ್ತೆಗಳಿಂದ ಕೆಟ್ಟ ವಾಸನೆಗಳು ಕೂಡ ಬರುತ್ತದೆ ಎಂದು ಈ ಪೋಸ್ಟ್​​​ನಲ್ಲಿ ಬರೆದುಕೊಂಡಿದ್ದಾರೆ. ಪಾದಚಾರಿ ರಸ್ತೆಯಲ್ಲೇ ಅಡ್ಡಲಾಗಿ ಸಸ್ಯಗಳು ಹಾಗೂ ಮರಗಳು ಬೆಳೆದುಕೊಂಡಿದೆ. ಇನ್ನು ಈ ಪಾದಚಾರಿ ರಸ್ತೆಯನ್ನು ಬಿಟ್ಟು ರಸ್ತೆಯಲ್ಲಿ ಹೋಗುವ ಎಂದರೆ ವಾಹನಗಳು ಹಿಗ್ಗಾಮುಗ್ಗಾ ಹೋಗುತ್ತದೆ. ಹಾಗೂ ಜತೆಗೆ ನನ್ನ ಮಗ ಕೂಡ ಇರುವ ಕಾರಣ ರಸ್ತೆಯಲ್ಲಿ ಹೋಗಲು ಭಯಾವಾಗಿದೆ ಎಂದು ಬರೆದುಕೊಂಡಿದ್ದಾರೆ.

ಇಲ್ಲಿದೆ ನೋಡಿ ವಿಡಿಯೋ:

ಇಂದಿರಾನಗರ ತುಂಬಾ ದುಬಾರಿ ನಗರ, ಆದರೆ ಇಲ್ಲಿ ರಸ್ತೆಗಳು ಹಾಗೂ ಪಾದಚಾರಿ ಮಾರ್ಗಗಳು ತುಂಬಾ ಕೆಟ್ಟಾಗಿದೆ ಎಂದು ಈ ವಿಡಿಯೋದಲ್ಲಿ ಹೇಳಿದ್ದಾರೆ. ಪಾದಚಾರಿ ಮಾರ್ಗಗಳು ಸಂಚಾರ ಮಾಡಲಾಗದಷ್ಟು ಹಾನಿಯಾಗಿದೆ. ಜತೆಗೆ ಇಲ್ಲಿ ಕುಂಡಗಳಲ್ಲಿ ಇಟ್ಟಿರುವ ಸಸ್ಯಗಳು, ಮರಗಳು ಮತ್ತು ವಾಹನಗಳಿಂದ ಈ ರಸ್ತೆ ಅತಿಕ್ರಮಿಸಲ್ಪಟ್ಟಿವೆ. ದುಬಾರಿ ನಗರದಲ್ಲಿ ಒಂದಾದ ಇಂದಿರಾನಗರದ ಮೂಲಸೌಕರ್ಯಗಳ ಸ್ಥಿತಿ ಹೇಗಿದೆ ಎಂಬುದನ್ನು ಇಲ್ಲಿ ತೋರಿಸಿದ್ದಾರೆ. ಆದರೆ ಇತರ ವಿಚಾರಗಳಲ್ಲಿ ಭಾರತಕ್ಕಿಂತ ಇಂದಿರಾನಗರ ಉತ್ತಮವಾಗಿದೆ ಎಂದು ಹೇಳಿದ್ದಾರೆ. ಕನಿಷ್ಠ ಪಕ್ಷ ಇಂದಿರಾನಗರದಲ್ಲಿ ಪಾದಚಾರಿ ಮಾರ್ಗಗಳಿವೆ. ಭಾರತದ ಮಹಾನಗರಗಳಲ್ಲಿನ ಅನೇಕ ಪ್ರದೇಶಗಳ ಈ ಸೌಲಭ್ಯಗಳು ಇಲ್ಲ. ಮುಂಬರುವ ದಶಕಗಳಲ್ಲಿ ಈ ಪರಿಸ್ಥಿತಿ ಬದಲಾಗುವ ಭರವಸೆ ಇದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಈ ಭಾಗದ ಜನರಿಗೆ ಸಿಹಿಸುದ್ದಿ: 6 ವರ್ಷಗಳ ನಂತರ ಸಂಚಾರಕ್ಕೆ ಮುಕ್ತವಾಗಲಿದೆ ಈ ರಸ್ತೆ

ಇನ್ನು ಈ ವಿಡಿಯೋ ನೋಡಿ ಅನೇಕ ನೆಟ್ಟಿಗರು ಕಮೆಂಟ್​ ಮಾಡಿದ್ದಾರೆ. ಇದು ತುಂಬಾ ದುಃಖಕರ ಮತ್ತು ಭಯಾನಕವಾಗಿದೆ. ನನಗೆ ಇಡೀ ವೀಡಿಯೊವನ್ನು ನೋಡಲು ಸಾಧ್ಯವಿಲ್ಲ ಎಂದು ಒಬ್ಬರು ಹೇಳಿದ್ದಾರೆ. ಮತ್ತೊಬ್ಬರು ನಾನು ಪ್ರತಿದಿನ ಈ ಫುಟ್‌ಪಾತ್‌ಗಳಲ್ಲಿ ನಡೆಯುತ್ತೇನೆ, ಆದರೆ ನಾನು ಅವುಗಳಿಗೆ ಎಷ್ಟು ಒಗ್ಗಿಕೊಂಡಿದ್ದೇನೆಂದರೆ ನನಗೆ ಇದರ ಬಗ್ಗೆ ಗಮನವೇ ಇರಲಿಲ್ಲ ಎಂದು ಹೇಳಿದ್ದಾರೆ. ದಯವಿಟ್ಟು ಇಲ್ಲಿ ನಡೆಯಬೇಡಿ ಎಂದು ಕೆಲವು ನೆಟ್ಟಿಗರು ಹೇಳಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:14 am, Mon, 22 December 25