ಬೆಂಗಳೂರು, (ಡಿಸೆಂಬರ್ 04): ವ್ಯಕ್ತಿಯೋರ್ವನನ್ನು ಚಾಲಕ ಕಾರಿನಿಂದ ಸ್ವಲ್ಪ ದೂರದವರೆಗೆ ನೂಕಿಕೊಂಡು ಹೋದ ಭಯಾನಕ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ (Bengaluru) ಕಡೆಗೆ ಬರುವ ಹೆಬ್ಬಾಳ (Hebbal) ಫ್ಲೈ ಓವರ್ ಮೇಲೆ ಇಟಿಯಾಸ್ ವಾಹನವನ್ನು ನಿಲ್ಲಿಸಲಾಗಿತ್ತು. ಇಟಿಯಾಸ್ ವಾಹನದ ಚಾಲಕ ಇದೇ ಫ್ಲೈ ಓವರ್ ಮೇಲೆ ಬರುತ್ತಿದ್ದ ಇನ್ನೋವಾ ಕಾರಿಗೆ ಅಡ್ಡ ಹೋಗಿದ್ದಾನೆ. ಈ ವೇಳೆ ಚಾಲಕ ಕಾರನ್ನು ನಿಲ್ಲಿಸಿದ್ದಾನೆ. ಆದರೂ ಕೂಡ ಇಟಿಯಾಸ್ ವಾಹನ ಚಾಲಕ ಪಕ್ಕಕ್ಕೆ ಹೋಗಿಲ್ಲ. ಆಗ ಚಾಲಕ ಇನ್ನೋವಾ ಕಾರಿನಿಂದ, ಇಟಿಯಾಸ್ ಚಾಲಕನನ್ನು ಸ್ವಲ್ಪ ದೂರದವರೆಗೆ ನೂಕಿಕೊಂಡು ಹೋಗಿದ್ದಾನೆ.
ಬಳಿಕ ಕಾರು ನಿಲ್ಲಿಸಿ ಚಾಲಕ ಇಟಿಯಾಸ್ ವಾಹನ ಚಾಲಕನ ಮೇಲೆ ಹಲ್ಲೆ ಮಾಡಿದ್ದಾನೆ. ಈ ದೃಶ್ಯಾವಳಿಗಳು ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕ್ಯಾಮೆರಾದಲ್ಲಿ ಸೆರೆಯಾದ ವಿಡಿಯೋವನ್ನು ಪ್ರದೀಪ್ ಹೆರಳೆ ಎಂಬುವರು ಎಕ್ಸ್ (ಟ್ವಿಟರ್) ನಲ್ಲಿ ಪೋಸ್ಟ್ ಹಾಕಿ ಬೆಂಗಳೂರು ಸಂಚಾರ ಪೊಲೀಸರಿಗೆ ಟ್ಯಾಗ್ ಮಾಡಿ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
@blrcitytraffic @BlrCityPolice @3rdEyeDude vehicle number KA05 AL 7999. road rage between drivers on hebbal flyover on 29th morning 8:30-9, driver raging with another possible eitos driver today morning around 8:30-8:40 on hebbal flyover, pic.twitter.com/n6Zf9a3dVa
— Pradeep Herle (@pradeepherle) December 3, 2023
ಇದನ್ನೂ ಓದಿ: ಭವಾನಿ ರೇವಣ್ಣ ವಿಡಿಯೋ ವೈರಲ್, ಬೈಕ್ ಸವಾರನ ವಿರುದ್ಧ ಕೇಸ್ ಬುಕ್
“ಈ ಬಗ್ಗೆ ಅಂದು ಟ್ರಾಫಿಕ್ ಪೊಲೀಸರಿಗೂ ಮಾಹಿತಿ ನೀಡಿದ್ದೇನೆ. ಗಾಡಿಯಲ್ಲಿ ಪ್ಯಾಸೆಂಜರ್ ಇದ್ದರೂ ಕೂಡ ಕೆಎ 05, ಎಎಲ್ 7999 ವಾಹನ ಚಾಲಕನ ಅತಿರೇಕದ ವರ್ತನೆ ತೋರಿದ್ದಾರೆ” ಎಂದು ಬರೆದುಕೊಂಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:28 pm, Mon, 4 December 23