ಬೆಂಗಳೂರು: ನ.29ರಿಂದ ಬಸವನಗುಡಿಯಲ್ಲಿ ಕಡಲೇಕಾಯಿ ಪರಿಷೆ ಆರಂಭ; ಕೊರೊನಾ ನಿಯಮ ಪಾಲಿಸಿ ಪರಿಷೆ ನಡೆಸಲು ಅನುಮತಿ

| Updated By: preethi shettigar

Updated on: Nov 10, 2021 | 10:24 AM

ಕಡಲೇಕಾಯಿ ಪರಷೆಗೆ 10 ಕ್ಕೂ ಅಧಿಕ ಜಿಲ್ಲೆಗಳು ಭಾಗವಹಿಸಲಿವೆ. ತಮಿಳುನಾಡು, ಆಂಧ್ರ ಪ್ರದೇಶದ ರಾಜ್ಯದಿಂದ ಸಹಸ್ರಾರು ಜನರು ಪರಷೆಗೆ ಭೇಟಿ ನೀಡುವ ಸಾಧ್ಯತೆ ಇದೆ. ಹೀಗಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಕಡಲೇಕಾಯಿ ಪರಿಷೆ ನಡೆಸಲು ಪಾಲಿಕೆ ಅನುಮತಿ ನೀಡಿದೆ.

ಬೆಂಗಳೂರು: ನ.29ರಿಂದ ಬಸವನಗುಡಿಯಲ್ಲಿ ಕಡಲೇಕಾಯಿ ಪರಿಷೆ ಆರಂಭ; ಕೊರೊನಾ ನಿಯಮ ಪಾಲಿಸಿ ಪರಿಷೆ ನಡೆಸಲು ಅನುಮತಿ
ಕಡಲೆಕಾಯಿ ಪರಿಷೆ (ಸಾಂದರ್ಭಿಕ ಚಿತ್ರ)
Follow us on

ಬೆಂಗಳೂರು: ನವೆಂಬರ್ 29ರಿಂದ ಬಸವನಗುಡಿಯಲ್ಲಿ ಕಡಲೇಕಾಯಿ ಪರಿಷೆ ಆರಂಭವಾಗಲಿದೆ. ಇದು ಕಾರ್ತಿಕ‌ಮಾಸದಲ್ಲಿ ನಡೆಯುವ ಬೆಂಗಳೂರಿನ ಹಬ್ಬ ಎಂದೇ ಜನಪ್ರಿಯತೆ ಪಡೆದಿದೆ. ಕಳೆದ ವರ್ಷ ಕೊರೊನಾ ಹೆಚ್ಚಿದ್ದರಿಂದ ಕಡಲೆ ಪರಷೆ ನಡೆಸಲು ಸಾಧ್ಯಾವಗಿರಲಿಲ್ಲ. ಆದರೆ ಈ ವರ್ಷ ಕೊರೊನಾ ಪ್ರಕರಣಗಳು ಕಡಿಮೆ ಇರುವ ಕಾರಣ ಜಾತ್ರೆ ನಡೆಸಲು ಅನುಮತಿ ನೀಡಲಾಗಿದೆ. ಕಡಲೇಕಾಯಿ ಪರಷೆಗೆ 10 ಕ್ಕೂ ಅಧಿಕ ಜಿಲ್ಲೆಗಳು ಭಾಗವಹಿಸಲಿವೆ. ತಮಿಳುನಾಡು, ಆಂಧ್ರ ಪ್ರದೇಶದ ರಾಜ್ಯದಿಂದ ಸಹಸ್ರಾರು ಜನರು ಪರಷೆಗೆ ಭೇಟಿ ನೀಡುವ ಸಾಧ್ಯತೆ ಇದೆ. ಹೀಗಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಕಡಲೇಕಾಯಿ ಪರಿಷೆ ನಡೆಸಲು ಪಾಲಿಕೆ ಅನುಮತಿ ನೀಡಿದೆ.

ಹದಿಮೂರನೇ ಶತಮಾನದ ಆಸುಪಾಸಿನಲ್ಲಿ ಭಾರತಕ್ಕೆ ಬಂದ ಶೇಂಗಾ
ಬ್ರೆಜಿಲ್​ನ ಕಡಲೇಕಾಯಿ ಭಾರತಕ್ಕೆ ಸುಮಾರು 16ನೇ ಶತಮಾನದ ಆಸುಪಾಸಿನಲ್ಲಿ ಬಂತು ಎಂಬ ಮಾತಿದೆ. ಕ್ರೈಸ್ತ ಮಿಶನರಿಗಳ ಮೂಲಕ ಶೇಂಗಾ ಭಾರತಕ್ಕೆ ಕಾಲಿಟ್ಟಿತು ಎಂದೂ ಅಂದಾಜಿಸಲಾಗಿದೆ. ಇದನ್ನು 1910 ರ ಆಸುಪಾಸಿನಲ್ಲಿ ಗುಜರಾತ್ ರಾಜ್ಯಕ್ಕೆ ಪರಿಚಯಿಸಿದವರು ತಮಿಳುನಾಡು ಮೂಲದ ಪದ್ಮಾ ಭಾಯಿ ಪಟೇಲ್ ಎಂದು ಕೆಲವೆಡೆ ಮಾಹಿತಿ ಇದೆ.

ಕಡಲೇಕಾಯಿಗೆ ಶೇಂಗಾ ಹೆಸರು ಬಂದಿದ್ದು ಹೇಗೆ?
ಆದರೆ, ಇದು ಭಾರತದಲ್ಲಿ ಪ್ರಸಿದ್ಧಿಯಾಗಿದ್ದು ಹೇಗೆ? ಕಡಲೇಕಾಯಿಯ ಬೇರು ಭಾರತದೆಲ್ಲೆಡೆ ಹಬ್ಬಿದ್ದು ಯಾವಾಗ? ಇಲ್ಲಿನ ಜನರು ಅದನ್ನು ತಮ್ಮ ಹೊಲಗಳಲ್ಲಿ ಬೆಳೆಯಲು ಆರಂಭಿಸಿದ್ದು ಯಾವಾಗ? ಕಡಲೇಕಾಯಿಗೆ ಶೇಂಗಾ ಹೆಸರು ಬಂದಿದ್ದು ಹೇಗೆ? ಎಂಬಿತ್ಯಾದಿ ಸಂಗತಿಗಳ ಬಗ್ಗೆ ನಿಖರ ಮಾಹಿತಿ ಇಲ್ಲ.

ಚಳಿಗಾಲದಲ್ಲಿ ಫಸಲು ನೀಡುವ ಶೇಂಗಾ
ಏಕವಾರ್ಷಿಕ ಬೆಳೆಯಾಗಿರುವ ಕಡಲೇಕಾಯಿ ಚಳಿಗಾಲದ ಅವಧಿಯಲ್ಲಿ ಫಸಲು ನೀಡುತ್ತದೆ. ಶೇಂಗಾ ಬೀಜವನ್ನು ಆಹಾರ ಧಾನ್ಯಕ್ಕೆಂದು, ಶೇಂಗಾ ಎಣ್ಣೆ ತೆಗೆಯಲೆಂದು ಬಳಸುವುದರ ಜೊತೆಜೊತೆಗೆ ಅದರಲ್ಲಿರುವ ಔಷಧೀಯ ಗುಣಗಳ ಕಾರಣಕ್ಕೆ ಹಲವು ಬಗೆಗಳಲ್ಲಿ ಉಪಯೋಗಿಸಲಾಗುತ್ತದೆ.

ಇದನ್ನೂ ಓದಿ:
ಕಡಲೇಕಾಯಿಯ ತಾಯಿಬೇರು ಯಾವ ದೇಶದಲ್ಲಿದೆ ಗೊತ್ತಾ? ಪರಿಷೆಯ ನೆಪದಲ್ಲಿ ಮೂಲ ಕೆದಕಿದಾಗ..

Shri Ramayana Yatra ದೆಹಲಿಯಿಂದ ಶ್ರೀ ರಾಮಾಯಣ ಯಾತ್ರೆಯ ವಿಶೇಷ ರೈಲು ಆರಂಭಿಸಿದ ಐಆರ್​​ಸಿಟಿಸಿ; ದರ, ವೇಳಾಪಟ್ಟಿ ಇಲ್ಲಿವೆ