ಬೆಂಗಳೂರು: ನಟ ಪುನೀತ್ ರಾಜ್ಕುಮಾರ್ (Puneeth Rajkumar) ಸಾವಿನಿಂದ ಇಡೀ ಕರುನಾಡು ಶೋಕ ಸಾಗರದಲ್ಲಿ ಮುಳುಗಿದೆ. ಅಪ್ಪು ಅಗಲಿ 13 ದಿನಗಳಾದರೂ ಸಾವಿನ ನೋವು ಕಡಿಮೆಯಾಗುತ್ತಿಲ್ಲ. ಕಾರ್ಡಿಯಾಕ್ ಅರೆಸ್ಟ್ನಿಂದ ಕಟ್ಟುಮಸ್ತಾಗಿದ್ದ ಅಪ್ಪು ಕೊನೆಯುಸಿರೆಳೆದಿದ್ದಾರೆ. ಈ ಪ್ರಕರಣ ಕಣ್ಣು ಮುಂದೆ ಇದ್ದರೂ ಫೋರ್ಟಿಸ್ ಆಸ್ಪತ್ರೆ ನಿರ್ಲಕ್ಷ್ಯ ತೋರಿರುವ ಆರೋಪ ಕೇಳಿಬಂದಿದೆ. ಕಾರ್ಡಿಯಕ್ ಅರೆಸ್ಟ್ ಆದ ರೋಗಿ ವಿಚಾರದಲ್ಲಿ ಆಸ್ಪತ್ರೆ ನಿರ್ಲಕ್ಷ್ಯ ಮೆರೆದಿದ್ದು, ಪ್ರತಿಷ್ಠಿತ ಆಸ್ಪತ್ರೆ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ.
ಕಾರ್ಡಿಯಾಕ್ ಅರೆಸ್ಟ್ ಆದ ರೋಗಿಗೆ ಆ್ಯಂಬುಲೆನ್ಸ್ ನೀಡಲು ನಿರಾಕರಿಸಿದ ಆರೋಪದಡಿ ನಾಗರಭಾವಿಯ ಫೋರ್ಟಿಸ್ ಆಸ್ಪತ್ರೆ ವಿರುದ್ಧ ದೂರು ದಾಖಲಾಗಿದೆ. ಮಂಜುನಾಥ್ ಎಂಬುವವರು ಫೋರ್ಟಿಸ್ ಆಡಳಿತ ಮಂಡಳಿ ವಿರುದ್ಧ ಜ್ಞಾನಭಾರತಿ ಠಾಣೆಗೆ ದೂರು ನೀಡಿದ್ದಾರೆ. ನ.3ರಂದು ಮಂಜುನಾಥ್ ಸ್ನೇಹಿತ ಸಂದೀಪ್ ಎಂಬುವವರಿಗೆ ಕಾರ್ಡಿಯಾಕ್ ಅರೆಸ್ಟ್ ಆಗಿತ್ತು. ತಕ್ಷಣ ಸಂದೀಪ್ ಸ್ನೇಹಿತರು ಹತ್ತಿರದ ಅನುಪಮಾ ಆಸ್ಪತ್ರೆಗೆ ಕರೆದೊಯ್ಯುತ್ತಾರೆ. ಅನುಪಮಾ ಆಸ್ಪತ್ರೆ ವೈದ್ಯರ ಸೂಚನೆ ಮೇರೆಗೆ ನಾಗರಭಾವಿಯ ಫೋರ್ಟಿಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು.
ಕೆಲಕಾಲ ಚಿಕಿತ್ಸೆ ನೀಡಿದ ಬಳಿಕ ಫೋರ್ಟಿಸ್ ಆಸ್ಪತ್ರೆಯವರು ತಮ್ಮದೇ ಕನ್ನಿಂಗ್ ಹ್ಯಾಂ ರಸ್ತೆಯ ಫೋರ್ಟಿಸ್ಗೆ ಹೋಗುವಂತೆ ಸೂಚಿಸುತ್ತಾರೆ. ಈ ವೇಳೆ ಸಂದೀಪ್ ಸ್ನೇಹಿತರು ಹೆಚ್ಚು ಸಮಯಬೇಕಾಗುತ್ತದೆ. ಅದಕ್ಕಾಗಿ ಸಮೀಪದ ಲಕ್ಷ್ಮಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇವೆ ಅಂತ ತಿಳಿಸುತ್ತಾರೆ. ಆಗ ಫೋರ್ಟಿಸ್ ಆಸ್ಪತ್ರೆ ಆ್ಯಂಬುಲೆನ್ಸ್ ನೀಡಲು ಹಿಂದೇಟು ಹಾಕಿದೆ ಎಂಬ ಆರೋಪ ಕೇಳಿಬಂದಿದೆ. ನಮ್ಮ ಬ್ರಾಂಚ್ಗೆ ಕರೆದೊಯ್ಯುವುದಾರೆ ಮಾತ್ರ ಆ್ಯಂಬುಲೆನ್ಸ್ ನೀಡುತ್ತೇವೆ. ಬೇರೆ ಆಸ್ಪತ್ರೆಗೆ ಕರೆದೊಯ್ಯುವುದಾದರೆ ಆ್ಯಂಬುಲೆನ್ಸ್ ನೀಡಲ್ಲ ಅಂತ ನಿರ್ಲಕ್ಷ್ಯ ತೋರಿರುವ ಬಗ್ಗೆ ದೂರು ದಾಖಲಾಗಿದೆ.
ಬೇರೆ ವಿಧಿಯಿಲ್ಲದೆ ಸಂದೀಪ್ ಸ್ನೇಹಿತರು ಖಾಸಗಿ ಆ್ಯಂಬುಲೆನ್ಸ್ ಮೊರೆ ಹೋಗಿದ್ದಾರೆ. ನಂತರ ಫೋರ್ಟಿಸ್ ಆಸ್ಪತ್ರೆ
ಬಿಲ್ ಕ್ಲಿಯರ್ ಮಾಡಲು ಹಿಂದೇಟು ಹಾಕಿದೆ. ಲಕ್ಷ್ಮಿ ಆಸ್ಪತ್ರೆಯಲ್ಲಿ ದಾಖಲಿಸಿದ ಬಳಿಕ ರೋಗಿ ಸಂದೀಪ್ ಚೇತರಿಸಿಕೊಂಡಿದ್ದಾರೆ. ಸದ್ಯ ಆ್ಯಂಬುಲೆನ್ಸ್ ನೀಡಲು ನಿರಾಕರಿಸಿದ ಫೋರ್ಟಿಸ್ ಆಸ್ಪತ್ರೆ ವಿರುದ್ಧ ಜ್ಞಾನಭಾರತಿ ಠಾಣೆಗೆ ದೂರು ದಾಖಲಾಗಿದೆ.
ಇದನ್ನೂ ಓದಿ
ಮೈಸೂರಿನಲ್ಲಿ ಲಸಿಕೆ ನೀಡಲು ವಿನೂತನ ಪ್ರಯತ್ನಗಳು, ತಮಟೆ ಬಾರಿಸಿ ಲಸಿಕೆ ಪಡೆಯುವಂತೆ ಮನವಿ
ಯುಮುನಾ ನದಿಯಲ್ಲಿ ವಿಷಕಾರಿ ನೊರೆ; ಸ್ವಚ್ಛಗೊಳಿಸಲು 15 ಬೋಟ್ಗಳನ್ನು ನಿಯೋಜಿಸಿದ ದೆಹಲಿ ಸರ್ಕಾರ