ಯುಮುನಾ ನದಿಯಲ್ಲಿ ವಿಷಕಾರಿ ನೊರೆ; ಸ್ವಚ್ಛಗೊಳಿಸಲು 15 ಬೋಟ್​​ಗಳನ್ನು ನಿಯೋಜಿಸಿದ ದೆಹಲಿ ಸರ್ಕಾರ

Yamuna River: ಯಮುನಾ ನದಿಯಲ್ಲಿ ವಿಷಯುಕ್ತ ನೊರೆ ಕಾಣಿಸಿಕೊಳ್ಳಲು ಅಕ್ಷರಶಃ ಮಿತಿಮೀರಿದ ಮಾಲಿನ್ಯವೇ ಕಾರಣವಾಗಿದೆ. ಇದೇ ಕಾರಣಕ್ಕೆ ದೆಹಲಿ ಸರ್ಕಾರದ ವಿರುದ್ಧವೂ ಟೀಕೆಗಳು ಕೇಳಿಬರುತ್ತಿವೆ.

ಯುಮುನಾ ನದಿಯಲ್ಲಿ ವಿಷಕಾರಿ ನೊರೆ; ಸ್ವಚ್ಛಗೊಳಿಸಲು 15 ಬೋಟ್​​ಗಳನ್ನು ನಿಯೋಜಿಸಿದ ದೆಹಲಿ ಸರ್ಕಾರ
ಯಮುನಾ ನದಿಯ ವಿಷಕಾರಿ ನೊರೆ (ಪಿಟಿಐ ಚಿತ್ರ)
Follow us
TV9 Web
| Updated By: Lakshmi Hegde

Updated on:Nov 10, 2021 | 10:15 AM

ಯಮುನಾ ನದಿಯೀಗ ವಿಷಪೂರಿತ ನೊರೆಯಿಂದ ತುಂಬಿ ಹೋಗಿದೆ. ಈಗಂತೂ ದೇಶದಲ್ಲಿ ಬಿಹಾರ, ಉತ್ತರಪ್ರದೇಶ, ಜಾರ್ಖಂಡ ಸೇರಿ ಹಲವು ರಾಜ್ಯಗಳಲ್ಲಿ ಛಠ್​ ಪೂಜೆಯ ಸಂಭ್ರಮ. ಜನರು ಯಮುನಾ ನದಿಯಲ್ಲಿ ಪವಿತ್ರ ಸ್ನಾನ ಮಾಡುತ್ತಿದ್ದಾರೆ. ಆದರೆ ಈ ಬಾರಿ ವಿಷಾನಿಲ ತುಂಬಿಕೊಂಡಿರುವ ನದಿಯಲ್ಲಿಯೇ ಮುಳುಗೇಳುತ್ತಿದ್ದಾರೆ. ಬುರುಗು ನೊರೆಯ ಮಧ್ಯೆಯೇ ಭಕ್ತರು ಪವಿತ್ರ ಸ್ನಾನ ಮಾಡುತ್ತಿರುವ ವಿಡಿಯೋಗಳು ವೈರಲ್​ ಆದ ಬೆನ್ನಲ್ಲೇ ತೀವ್ರ ಟೀಕೆಯೂ ವ್ಯಕ್ತವಾಗಿದೆ. ಇದೀಗ ದೆಹಲಿ ಸರ್ಕಾರ ಈ ನೊರೆಯನ್ನು ತೆಗೆಯಲು ಒಂದು ಕ್ರಮ ಕೈಗೊಂಡಿದೆ.

ಯಮುನಾ ನದಿಯಲ್ಲಿ ವಿಷಯುಕ್ತ ನೊರೆ ಕಾಣಿಸಿಕೊಳ್ಳಲು ಅಕ್ಷರಶಃ ಮಿತಿಮೀರಿದ ಮಾಲಿನ್ಯವೇ ಕಾರಣವಾಗಿದೆ. ಇದೇ ಕಾರಣಕ್ಕೆ ದೆಹಲಿ ಸರ್ಕಾರದ ವಿರುದ್ಧವೂ ಟೀಕೆಗಳು ಕೇಳಿಬರುತ್ತಿವೆ. ಈಗ ದೆಹಲಿ ಸರ್ಕಾರ ಯಮುನಾ ನದಿಯಲ್ಲಿ ಉಂಟಾಗಿರುವ ವಿಷಯುಕ್ತ ನೊರೆಯನ್ನು ತೆಗೆದುಹಾಕಲು 15 ಬೋಟ್​​ಗಳನ್ನು ನಿಯೋಜಿಸಿದೆ. ಈ ಬಗ್ಗೆ ಸರ್ಕಾರಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಛಠ್​ ಪೂಜೆಯ ಮೂರನೇ ದಿನ ಸಂಧ್ಯಾ ಅರ್ಘ್ಯ ಎಂಬ ಆಚರಣೆ ಇರುತ್ತದೆ. ಈ ದಿನ ಸಾಮಾನ್ಯವಾಗಿ ಭಕ್ತರು ನದಿಯಲ್ಲಿ ಪವಿತ್ರ ಸ್ನಾನ ಮಾಡಿ, ಸೂರ್ಯನನ್ನು ಪೂಜಿಸುತ್ತಾರೆ. ಹೀಗಾಗಿ ಯಮುನೆಯಲ್ಲಿ ಈಗ ಉಂಟಾಗಿರುವ ನೊರೆಯನ್ನು ಸ್ವಚ್ಛ ಮಾಡುವ ಕಾಯಕಕ್ಕೆ ಸರ್ಕಾರ ಮುಂದಾಗಿದೆ.

ದೆಹಲಿ ಸರ್ಕಾರ ನೀರಾವರಿ ಮತ್ತು ಪ್ರವಾಹ ನಿಯಂತ್ರಣ ಇಲಾಖೆ, ಕಂದಾಯ ಇಲಾಖೆ ಮತ್ತು ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿ ಜಂಟಿಯಾಗಿ ನದಿ ಸ್ವಚ್ಛತಾ ನಿರ್ಧಾರ ಕೈಗೊಂಡಿದೆ. ಎರಡು ಬೋಟ್​ಗಳ ಮಧ್ಯೆ ಒಂದು ಗಟ್ಟಿಯಾದ ಬಟ್ಟೆಯನ್ನು ಕಟ್ಟಲಾಗುವುದು. ಈ ಮೂಲಕ ನೊರೆಯನ್ನು ದಡದತ್ತ ತರಲಾಗುವುದು ಎಂದು ಸರ್ಕಾರಿ ಅಧಿಕಾರಿ ತಿಳಿಸಿದ್ದಾರೆ.  ಇದೀಗ ಯಮುನಾ ನದಿಯಲ್ಲಿ ಅಪಾಯಕಾರಿ ವಿಷಯುಕ್ತ ನೊರೆ ಉಂಟಾಗಲು ಕಾರಣ ಹೆಚ್ಚಿದ ಅಮೋನಿಯಾ ಮತ್ತು ಫಾಸ್ಪೇಟ್​ ಅಂಶಗಳೇ ಆಗಿವೆ. ಕೈಗಾರಿಕಾ ಮಾಲಿನ್ಯಗಳು, ಡಿಟರ್ಜಂಟ್​​ಗಳನ್ನು ನದಿಗೆ ಬಿಡುವುದರಿಂದ ಹೀಗಾಗುತ್ತದೆ.

ಇದನ್ನೂ ಓದಿ: ‘ಅಪ್ಪು ಸರ್​ ವಿಚಾರದಲ್ಲಿ ಮರಣ ಎಂಬ ಪದ ಬಳಸೋಕೆ ನಾನು ಇಷ್ಟಪಡಲ್ಲ’: ರಚಿತಾ ರಾಮ್​​

Published On - 9:58 am, Wed, 10 November 21