ಕರ್ನಾಟಕದಲ್ಲಿ ವಾಯು ಗುಣಮಟ್ಟ ಸುರಕ್ಷಿತ: ‘ಉತ್ತಮ’ದಿಂದ ‘ಮಧ್ಯಮ’ ವಿಭಾಗದಲ್ಲಿವೆ ಬೆಂಗಳೂರು ಸೇರಿ ಹಲವು ನಗರಗಳ AQI

ಕರ್ನಾಟಕದ ಪ್ರಮುಖ ನಗರಗಳಲ್ಲಿ ಇತ್ತೀಚಿನ ಮಳೆಯಿಂದಾಗಿ ವಾಯು ಗುಣಮಟ್ಟವು ಉತ್ತಮದಿಂದ ಮಧ್ಯಮ ಮಟ್ಟದಲ್ಲಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಗಾಳಿಯ ಗುಣಮಟ್ಟ ಸುರಕ್ಷಿತವಾಗಿದ್ದು, ವಾಯುಮಾಲಿನ್ಯದ ಮಟ್ಟ ನಿಯಂತ್ರಣದಲ್ಲಿದೆ. ಕರಾವಳಿ ಜಿಲ್ಲೆಯ ಕೆಲ ಪಟ್ಟಣಗಳಲ್ಲಿಯೂ ವಾಯು ಗುಣಮಟ್ಟ ಅತ್ಯಂತ ಉತ್ತಮ ಸ್ಥಿತಿಯಲ್ಲಿರೋದು ಕಂಡುಬಂದಿದೆ.

ಕರ್ನಾಟಕದಲ್ಲಿ ವಾಯು ಗುಣಮಟ್ಟ ಸುರಕ್ಷಿತ: ಉತ್ತಮದಿಂದ ಮಧ್ಯಮ ವಿಭಾಗದಲ್ಲಿವೆ ಬೆಂಗಳೂರು ಸೇರಿ ಹಲವು ನಗರಗಳ AQI
ಸಾಂದರ್ಭಿಕ ಚಿತ್ರ
Image Credit source: PTI

Updated on: Sep 18, 2026 | 6:55 AM

ಬೆಂಗಳೂರು, ಸೆಪ್ಟೆಂಬರ್​​ 18: ಇತ್ತೀಚಿನ ಹವಾಮಾನ ಪರಿಸ್ಥಿತಿ ಹಾಗೂ ಮಳೆಯ ಮಾದರಿಯಿಂದಾಗಿ ವಾಯುವಿನಲ್ಲಿನ ಸೂಕ್ಷ್ಮ ಕಣಗಳ ಪ್ರಮಾಣವು ನಿಯಂತ್ರಿತವಾಗಿದ್ದು, ಉತ್ತರ ಭಾರತದ ಕೆಲವು ಭಾಗಗಳಲ್ಲಿ ಕಂಡುಬರುವ ತೀವ್ರ ವಾಯುಮಾಲಿನ್ಯದ ಮಟ್ಟದಿಂದ ಕರ್ನಾಟಕ ಹೊರಗಿದೆ. ಕರ್ನಾಟಕದ ಪ್ರಮುಖ ನಗರಗಳಲ್ಲಿ ಇಂದು (ಸೆಪ್ಟೆಂಬರ್ 18) ವಾಯು ಗುಣಮಟ್ಟವು ಬಹುತೇಕ ‘ಉತ್ತಮ’ದಿಂದ ‘ಮಧ್ಯಮ’ ವರ್ಗದಲ್ಲಿರುವುದು ಕಂಡುಬಂದಿದೆ. ಪ್ರಮುಖ ಪ್ರದೇಶಗಳಲ್ಲಿ ದಾಖಲಾಗಿರುವ ದೈನಂದಿನ ಅಂಕಿಅಂಶಗಳ ಪ್ರಕಾರ, ರಾಜ್ಯದ ವಾಯು ಗುಣಮಟ್ಟ ತೃಪ್ತಿಕರವಾಗಿದೆ.

ಬೆಂಗಳೂರಿನ ಇಂದಿನ ವಾಯು ಗುಣಮಟ್ಟ (AQI Status)

ರಾಜಧಾನಿಯ ವಿವಿಧ ವಾಯು ಗುಣಮಟ್ಟ ಮೇಲ್ವಿಚಾರಣಾ ಕೇಂದ್ರಗಳ ಅಂಕಿಅಂಶಗಳ ಪ್ರಕಾರ, ಬೆಂಗಳೂರಿನ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ (AQI) ಪ್ರಸ್ತುತ ‘ಉತ್ತಮ’ದಿಂದ ‘ಮಧ್ಯಮ’ ಮಟ್ಟದಲ್ಲಿದೆ. ವಿವಿಧ ಪ್ರದೇಶಗಳಲ್ಲಿ AQI 28ರಿಂದ 76ರ ನಡುವೆ ದಾಖಲಾಗಿದೆ. ನಗರದ ಒಟ್ಟಾರೆ ವಾಯು ಗುಣಮಟ್ಟ ಸಾಮಾನ್ಯವಾಗಿ ಸುರಕ್ಷಿತವಾಗಿದ್ದರೂ, ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಸೂಕ್ಷ್ಮ ಕಣಗಳ ಮಾಲಿನ್ಯ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ.

ಇದನ್ನೂ ಓದಿ: ಕರ್ನಾಟಕ ಹವಾಮಾನ: ರಾಜ್ಯದಲ್ಲಿ ಮುಂಗಾರು ದುರ್ಬಲ, 2 ದಿನ ಸಾಧಾರಣ ಮಳೆ ಸಾಧ್ಯತೆ

ರಾಜ್ಯದ ಇತರ ಪ್ರಮುಖ ನಗರಗಳ ಸ್ಥಿತಿಗತಿ

ಬಾಗಲಕೋಟೆಯಲ್ಲಿ ವಾಯು ಗುಣಮಟ್ಟ ಮಧ್ಯಮ ಪ್ರಮಾಣದಲ್ಲಿದ್ದು, AQI 78 ದಾಖಲಾಗಿದೆ. ಹಾಗೆಯೇ ಮೇಲ್ವಿಚಾರಣಾ ಕೇಂದ್ರಗಳಲ್ಲಿ AQI 74 ದಾಖಲಾಗುವ ಮೂಲಕ ಬೆಳಗಾವಿ ಕೂಡ ಇದೇ ಮಧ್ಯಮ ಮಟ್ಟದಲ್ಲಿದೆ. ಆದರೆ AQI 50ರಿಂದ 58ರಷ್ಟಿರುವ ಬಳ್ಳಾರಿಯಲ್ಲಿಂದು ಗಾಳಿ ಗುಣಮಟ್ಟ ಉತ್ತಮ ಸ್ಥಿತಿಯಲ್ಲಿ ಇರುವುದು ಕಂಡುಬಂದಿದೆ. ಕರಾವಳಿ ಜಿಲ್ಲೆಯ ಕೆಲ ಪಟ್ಟಣಗಳಲ್ಲಿಯೂ ವಾಯು ಗುಣಮಟ್ಟ ಅತ್ಯಂತ ಉತ್ತಮವಾಗಿದ್ದು AQI 28ರಿಂದ 37ರ ನಡುವೆ ದಾಖಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

 

Published On - 6:54 am, Fri, 18 September 26

ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
Loading...
Unable to load recommendations.
Follow Us