ಬೆಂಗಳೂರು, ಅ.16: ಸರ್ಕಾರಿ ಆಸ್ಪತ್ರೆಗಳಲ್ಲಿ ಗುಣಮಟ್ಟದ ಚಿಕಿತ್ಸೆ ಸಿಗ್ತಿದೆ. ಚಿಕಿತ್ಸಾ ಸೌಲಭ್ಯವೂ ಹೆಚ್ಚಾಗ್ತಿದೆ (Government Hospital). ಆದರೆ ತುಂಬಾ ದಿನಗಳಿಂದ ಕೊರತೆ ಇರುವಂತಹ ಸೌಲಭ್ಯ ಅಂದರೆ ಅದು ಸ್ಕ್ಯಾನಿಂಗ್ ಸೌಲಭ್ಯ (Scanning). ಸರ್ಕಾರಿ ಆಸ್ಪತ್ರೆಗಳಲ್ಲಿ ಎಂಆರ್ ಐ ಸ್ಕ್ಯಾನಿಂಗ್ ಸೌಲಭ್ಯ ವಿಲ್ಲದ ಹಿನ್ನಲೆ ರೋಗಿಗಳು ಪರದಾಡುವಂತಾಗಿದ್ದು ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಸಾವಿರಾರೂ ರಾಪಾಯಿ ಖರ್ಚುಮಾಡಬೇಕಿತ್ತು. ಈಗ ಆರೋಗ್ಯ ಇಲಾಖೆ ಈ ಸಮಸ್ಯೆಗೂ ಗಡ್ ಬಾಯ್ ಹೇಳಲು ಮುಂದಾಗಿದೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಜನ ನಾನಾ ಖಾಯಿಲೆಗಳಿಂದ ಚಿಕಿತ್ಸೆಗೆ ಬರುತ್ತಾರೆ. ಚಿಕಿತ್ಸೆ ಸರಿಯಾದ ರೀತಿಯಲ್ಲಿ ಸಿಕ್ಕುದ್ರು ಕೂಡ ಖಾಯಿಲೆ ನಿಗೂಢ ತಿಳಿಯೋದು ಕಷ್ಟ ಆಗಿದೆ. ಹೀಗಾಗಿ ಸ್ಕ್ಯಾನಿಂಗ್ ಅವಶ್ಯಕತೆ ಹೆಚ್ಚಾಗಿದೆ. ಆದರೆ ಸ್ಕ್ಯಾನಿಂಗ್ ಮಾಡಿಸಲು ಜನರು ಖಾಸಗಿ ಸಂಸ್ಥೆಗಳು, ಖಾಸಗಿ ಡಯೋಗ್ನೋಸ್ಟಿಕ್ ಸೆಂಟರ್ಗಳ ಮೊರೆ ಹೋಗ್ತಾ ಇದ್ದಾರೆ. ಡಯೋಗ್ನೋಸ್ಟಿಕ್ ಸೆಂಟರ್‌ಗಳಲ್ಲಿ ಸ್ಕ್ಯಾನಿಂಗ್ ವೆಚ್ಚ ದುಬಾರಿ ಆಗಿದ್ದು ಸಾವಿರಾರೂ ರಾಪಾಯಿ ಖರ್ಚು ಮಾಡಬೇಕಿದೆ. ಬಡ ರೋಗಿಗಳ ಪಾಲಿಗೆ ಇದು ಆರ್ಥಿಕ ಸಂಕಷ್ಟ ತಂದಿದೆ. ಹೀಗಾಗಿ ಜನರಿಗೆ ಅನುಕೂಲ ಆಗುವುದಕ್ಕೆ ಜೊತೆಗೆ ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ ತರಲು ಬೆಂಗಳೂರಿನ ಪ್ರಮುಖ ಆಸ್ಪತ್ರೆಗಳಾದ ಕೆ.ಸಿ. ಜನರಲ್, ಬೌರಿಂಗ್, ಜಯಗರ ಆಸ್ಪತ್ರೆ ಸೇರಿದಂತೆ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಸಿಟಿ ಸ್ಕ್ಯಾನಿಂಗ್ ಮತ್ತು ಎಂಆರ್‌ಐ ಸ್ಕ್ಯಾನಿಂಗ್ ಮಿಷನ್‌ಗಳ ಸೌಲಭ್ಯ ನೀಡಲು ಸರ್ಕಾರ ಮುಂದಾಗಿದೆ.
ಇದನ್ನೂ ಓದಿ: ರಾಜ್ಯದ 20 ಜಿಲ್ಲೆಗಳಲ್ಲಿ ಲಿಂಗ ಅನುಪಾತ ಕುಸಿತ; ಸ್ಕ್ಯಾನಿಂಗ್ ಸೆಂಟರ್ಗಳ ಮೇಲೆ ನಿಗಾ ಇಡುವಂತೆ ಸಿಎಂ ಸೂಚನೆ
ಈಗಾಗಲೇ ಬೆಂಗಳೂರಿನ ಆಸ್ಪತ್ರೆಗಳಲ್ಲಿ ಈ ಸೌಲಭ್ಯ ಇದೆ. ಆದರೆ ಇದು ಪಿಪಿಪಿ ಮಾಡಲ್ ನಲ್ಲಿದ್ದು ರಿಯಾಯಿತಿ ದರದಲ್ಲಿ ಶುಲ್ಕವಿದೆ. ಜನರು ದುಡ್ಡು ಖರ್ಚು ಮಾಡಲೇ ಬೇಕಿದೆ. ಉಚಿತವಾಗಿಲ್ಲ. 18 ಜಿಲ್ಲಾಆಸ್ಪತ್ರೆಗಳಲ್ಲಿ ಸಿಟಿ ಸ್ಕ್ಯಾನ್ ಮತ್ತು ಎಂಆರ್‌ಐ ಸ್ಕಾನ್ ಸೌಲಭ್ಯ ಇಲ್ಲದಾಗಿದೆ. ಹೀಗಾಗಿ ಆರಂಭದಲ್ಲಿ 14 ಜಿಲ್ಲಾಸ್ಪತ್ರೆಗಳಲ್ಲಿ ಹೊಸ ಮೀಷನ್ ನೀಡಲು ಮುಂದಾಗಿದ್ದು ಇನ್ನೂ ಎಂಆರ್‌ಐ ಗೆ ಆಗುವ ವೆಚ್ಚದ ಬಗ್ಗೆ ನಿರ್ಧಾರ ಆಗಿಲ್ಲ. ಬಿಪಿಎಲ್ ಕಾರ್ಡ್ದಾರರಿಗೆ ಈ ಸೌಲಭ್ಯ ಉಚಿತ ಆದರೆ ಉಳಿದವರಿಗೆ 100 ರೂಪಾಯಿ ದರ ಇರಲಿದೆ ಎಂದು ಆರೋಗ್ಯ ಇಲಾಖೆ ಉನ್ನತ ಮೂಲಗಳಿಂದ ಮಾಹಿತಿ ಸಿಕ್ಕಿದೆ.
ಒಟ್ನಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಎಂಆರ್‌ಐ ಸ್ಕ್ಯಾನಿಂಗ್ ಇಲ್ಲದೇ ಭಾರೀ ಸಮಸ್ಯೆ ಇದೆ. ಇದನ್ನೆ ಬಂಡವಾಳ ಮಾಡಿಕೊಂಡಿರುವ ಖಾಸಗಿ ಡಯೋಗ್ನೋಸ್ಟಿಕ್ ಸೆಂಟರ್‌ಗಳು ದುಪ್ಪಟ್ಟು ಹಣ ಪೀಕುತಾ ಇದ್ದು ಸದ್ಯ ಸರ್ಕಾರದ ಈ ನಿರ್ಧಾರ ಜನ ನಿಟ್ಟುಸಿರು ಬಿಡುವಂತಾಗಿದೆ. ಯಾವಾಗಿಂದ ಈ ಸೌಲಭ್ಯ ಸಿಗಲಿದೆಯೋ ಕಾದು ನೋಡಬೇಕಿದೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ