ಬೇಸಿಗೆಗೂ ಮೊದಲೇ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್; ದವಸ-ಧಾನ್ಯಗಳ ದರ ಎಷ್ಟಕ್ಕೇರಿದೆ ನೋಡಿ!

ರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆ ಗಣನೀಯವಾಗಿ ಏರಿಕೆಯಾಗಿದೆ. ಅಕ್ಕಿ, ಬೇಳೆ, ಮೆಣಸಿನಕಾಯಿ ದರ ಗಗನಕ್ಕೇರಿದ್ದು, ಜನಸಾಮಾನ್ಯರ ಬದುಕಿಗೆ ದೊಡ್ಡ ಹೊಡೆತ ನೀಡಿದೆ. ಅಕ್ಕಿ ರಫ್ತು ಹೆಚ್ಚಳ ಹಾಗೂ ಮೆಣಸಿನಕಾಯಿ ಇಳುವರಿ ಕುಸಿತವೇ ಇದಕ್ಕೆ ಪ್ರಮುಖ ಕಾರಣ. ಇದು ಜನಸಾಮಾನ್ಯರ ಜೇಬನ್ನು ಮತ್ತಷ್ಟು ಸುಡಲಿದೆ. ದವಸ-ಧಾನ್ಯಗಳ ದರ ಎಷ್ಟಕ್ಕೇರಿದೆ ಎಂಬ ಮಾಹಿತಿ ಇಲ್ಲಿದೆ.

ಬೇಸಿಗೆಗೂ ಮೊದಲೇ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್; ದವಸ-ಧಾನ್ಯಗಳ ದರ ಎಷ್ಟಕ್ಕೇರಿದೆ ನೋಡಿ!
ಬೇಸಿಗೆಗೂ ಮೊದಲೇ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್

Updated on: Feb 03, 2026 | 9:12 AM

ಬೆಂಗಳೂರು, ಫೆಬ್ರುವರಿ 03: ಈಗಾಗಲೇ ರಾಜ್ಯದಲ್ಲಿ ತರಕಾರಿ, ಹಣ್ಣು, ಚಿನ್ನ, ಬೆಳ್ಳಿ ಬೆಲೆ ಏರಿಕೆಯಿಂದ ರಾಜ್ಯದ ಜನರು ಬೇಸರಗೊಂಡಿದ್ದಾರೆ. ಈಗ ದಿನನಿತ್ಯದ ಅಗತ್ಯ ವಸ್ತುಗಳಾದ ಅಕ್ಕಿ, ಬೇಳೆ, ಮೆಣಸಿನಕಾಯಿ ಬೆಲೆಯಲ್ಲಿ ಹೆಚ್ಚಳವಾಗಿರುವುದು (Price Hike) ಜನಸಾಮಾನ್ಯರು ತಲೆ ಮೇಲೆ ಕೈ ಹೊತ್ತು ಕೂರುವಂತೆ ಮಾಡಿದೆ. ಬ್ಯಾಡಗಿ ಮೆಣಸಿನ ಕಾಯಿ, ಸೋನಾ ಮಸೂರಿ ಅಕ್ಕಿ ಸೇರಿ ಹಲವು ಬೇಳೆ, ಕಾಳುಗಳ ಬೆಲೆಯಲ್ಲಿ ಗಮನಾರ್ಹ ಏರಿಕೆಯಾಗಿದೆ.

ಆದಾಯ ಬರುವ ಮುನ್ನವೇ ರೈತರಿಕೆ ಆತಂಕ

ಪ್ರಮುಖವಾಗಿ ಬೇರೆ ಬೇರೆ ದೇಶಗಳಿಗೆ ಅಕ್ಕಿ ರಫ್ತು ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಅಕ್ಕಿಯ ಬೆಲೆ ಕೆ.ಜಿ.ಗೆ 5–6 ರೂಪಾಯಿ ಏರಿಕೆಯಾಗಿದೆ. ಕಡಲೆಬೀಜ, ಮೆಣಸಿನಕಾಯಿ ಇಳುವಳಿಯಲ್ಲಿ ಇಳಿಕೆಯಾಗದ ಕಾರಣ ಬೆಲೆ 50 ರೂಪಾಯಿ ಎತ್ತರಕ್ಕೆ ತಲುಪಿದೆ. ಇತರ ಬೇಳೆ, ಕಾಳುಗಳ ಬೆಲೆಯೂ 10–20 ರೂಪಾಯಿ ಏರಿಕೆಯಾಗಿದೆ. ಬೇಸಿಗೆ ಇನ್ನೂ ಆರಂಭವಾಗಿಲ್ಲ, ಈಗಲೇ ಬೆಲೆ ತಾರಕಕ್ಕೇರಿರುವುದರಿಂದ ಸಾಮಾನ್ಯ ಜನರ ಜೀವನ ಖರ್ಚಿಗೆ ಮತ್ತೊಂದು ಹೊಡೆತವಾಗಿದೆ.

ಕೆ.ಜಿಗೆ ದವಸ-ಧಾನ್ಯಗಳ ಬೆಲೆಯೇರಿಕೆಯ ಪಟ್ಟಿ ಇಲ್ಲಿದೆ

    ಪದಾರ್ಥಗಳ ಹೆಸರು ಹಳೆಯ ದರ(ರೂ.ಗಳಲ್ಲಿ) ಹೊಸ ದರ(ರೂ.ಗಳಲ್ಲಿ)
ಸೋನಾ ಮಸೂರಿ 38 44
RFO ಅಕ್ಕಿ  49 54
ದೋಸೆ ಅಕ್ಕಿ  29 39
ಬ್ಯಾಡಗಿ ಮೆಣಸಿನಕಾಯಿ  260 420
ಗುಂಟೂರು ಮೆಣಸಿನಕಾಯಿ 180 230
ತೊಗರಿ ಬೇಳೆ  110 135
ಉದ್ದಿನ ಬೆಳೆ  100 120
ಕಡಲೆಬೀಜ  120 150

ಒಟ್ಟಾರೆ ಹೊಸ ಬೆಳೆ ಬರುವವರೆಗೂ ಈ ಬೆಲೆ ಏರಿಕೆ ಮುಂದುವರೆಯಲ್ಲಿದ್ದು, ಜನಸಾಮಾನ್ಯರ ಜೇಬು ಸುಡಲಿದೆ.

ನಟರಾಜ್, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.