ಕರ್ನಾಟಕದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲವೇ?: ರಾಜ್ಯದಲ್ಲಿ ಲೈಂಗಿಕ ಕಿರುಕುಳವೇ ನಂಬರ್ 1 ಅಪರಾಧ; ಅಪರಾಧಿಗಳಿಗೆ ಸಿಗುತ್ತಿಲ್ಲ ಶಿಕ್ಷೆ

ಕರ್ನಾಟಕದಲ್ಲಿ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳ ಶಿಕ್ಷೆಯ ಪ್ರಮಾಣ ರಾಷ್ಟ್ರೀಯ ಸರಾಸರಿಗಿಂತ ಕುಸಿತ ಕಂಡಿರುವುದು ತೀವ್ರ ಕಳವಳಕಾರಿಯಾಗಿದೆ. ವಿಶೇಷವಾಗಿ ಲೈಂಗಿಕ ಕಿರುಕುಳ ರಾಜ್ಯದಲ್ಲಿ ಅತಿ ಹೆಚ್ಚು ದಾಖಲಾಗುವ ಅಪರಾಧವಾಗಿದೆ. ಪುರುಷಪ್ರಧಾನ ಸಮಾಜ, ಆರ್ಥಿಕ ಪರಾವಲಂಬನೆ, ಹಾಗೂ ಕಾನೂನು ಜಾರಿಯಲ್ಲಿನ ಸಡಿಲತೆ ಇದಕ್ಕೆ ಮುಖ್ಯ ಕಾರಣ. ಮಹಿಳೆಯರ ಸುರಕ್ಷತೆಗಾಗಿ ಹೊಸ ವಿಭಾಗ ಹಾಗೂ ಮಹಿಳಾ ಸಹಾಯವಾಣಿಗಳನ್ನು ಸ್ಥಾಪಿಸಲು ಪ್ರಸ್ತಾಪಿಸಲಾಗಿದೆ.

ಕರ್ನಾಟಕದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲವೇ?: ರಾಜ್ಯದಲ್ಲಿ ಲೈಂಗಿಕ ಕಿರುಕುಳವೇ ನಂಬರ್ 1 ಅಪರಾಧ; ಅಪರಾಧಿಗಳಿಗೆ ಸಿಗುತ್ತಿಲ್ಲ ಶಿಕ್ಷೆ
ಸಾಂದರ್ಭಿಕ ಚಿತ್ರ

Updated on: Oct 07, 2026 | 9:44 AM

ಬೆಂಗಳೂರು ಅ.7: ಕರ್ನಾಟಕದಲ್ಲಿ ಕಳೆದ ಮೂರು ವರ್ಷಗಳಿಂದ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳ ಸಂಖ್ಯೆಯಲ್ಲಿ ಅಲ್ಪ ಪ್ರಮಾಣದ ಇಳಿಕೆ ಕಂಡುಬಂದಿದ್ದರೂ, ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ/ಕಿರುಕುಳ ಪ್ರಕರಣಗಳು ಇಂದಿಗೂ ರಾಜ್ಯದಲ್ಲಿ ಅತಿ ಹೆಚ್ಚು ದಾಖಲಾಗುವ ಅಪರಾಧವಾಗಿ ಮುಂದುವರಿದಿದೆ ಎಂದು ಪೊಲೀಸರ ಅಧಿಕೃತ ಅಂಕಿ-ಅಂಶಗಳು ಬಹಿರಂಗಪಡಿಸಿವೆ. ಮತ್ತೊಂದೆಡೆ, ರಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಗುವ ಪ್ರಮಾಣ ಕೇವಲ ಶೇಕಡಾ 34 ರಷ್ಟಿದ್ದು, ಇದು ರಾಷ್ಟ್ರೀಯ ಸರಾಸರಿಗಿಂತ (ಶೇ. 42) ತೀವ್ರ ಕುಸಿತ ಕಂಡಿರುವುದು ತೀವ್ರ ಕಳವಳಕ್ಕೆ ಕಾರಣವಾಗಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

ಪ್ರಕರಣಗಳ ಗಂಭೀರತೆಯ ಕುರಿತು ಮಾತನಾಡಿದ ಉಪ ಪೊಲೀಸ್ ಮಹಾನಿರೀಕ್ಷಕಿ ಸವಿತಾ ಎಸ್., ಅಪರಾಧ ನಡೆದ ನಂತರ ತನಿಖೆ ಮಾಡುವುದಕ್ಕಿಂತ, ಅಪರಾಧಗಳು ನಡೆಯದಂತೆ ತಡೆಯುವ ಕಟ್ಟುನಿಟ್ಟಿನ ಕ್ರಮಗಳ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ. ಪುರುಷಪ್ರಧಾನ ಸಾಮಾಜಿಕ ವ್ಯವಸ್ಥೆ, ಮಹಿಳೆಯರ ಆರ್ಥಿಕ ಪರಾವಲಂಬನೆ, ಕಾನೂನು ಜಾರಿಯಲ್ಲಿನ ಸಡಿಲತೆ, ಡಿಜಿಟಲ್ ಲೋಕದ ಅನಾಮಧೇಯತೆ ಹಾಗೂ ನೆರವಿಗೆ ಧಾವಿಸುವ ವ್ಯವಸ್ಥೆಯ ಕೊರತೆಯೇ ಈ ಅಪರಾಧಗಳು ಮುಂದುವರಿಯಲು ಮುಖ್ಯ ಕಾರಣ ಎಂದಿದ್ದಾರೆ.

ಕಳೆದ 4 ವರ್ಷಗಳ ಅಪರಾಧಗಳ ವರದಿ:

ಪೊಲೀಸ್ ಇಲಾಖೆಯ ಅಂಕಿ-ಅಂಶಗಳ ಪ್ರಕಾರ, ವಿವಿಧ ವಿಭಾಗಗಳಲ್ಲಿ ದಾಖಲಾಗಿರುವ ಪ್ರಕರಣಗಳ ವಿವರ ಹೀಗಿದೆ:

ಅಪರಾಧದ ಮಾದರಿ 2023 2024 2025 2026 (ಆಗಸ್ಟ್ ವರೆಗೆ)
ಲೈಂಗಿಕ ಕಿರುಕುಳ/ದೌರ್ಜನ್ಯ  6,490 6,335 5,843 4,262
ಗಂಡ/ಸಂಬಂಧಿಕರಿಂದ ಕ್ರೂರತೆ ( 2,946 2,897 2,741 2,057
ವರದಕ್ಷಿಣೆ ನಿಷೇಧ ಕಾಯ್ದೆ ಕೇಸ್‌ಗಳು 2,348 1,998 2,123 1,356
ವರದಕ್ಷಿಣೆ ಸಾವುಗಳು 158 114 115 90
ಬಲಾತ್ಕಾರ ಪ್ರಕರಣಗಳು  – – 550 –

ರಾಜ್ಯದ 42 ಮಹಿಳಾ ಪೊಲೀಸ್ ಠಾಣೆಗಳ ಮೇಲ್ವಿಚಾರಣೆಗೆ ಪ್ರತ್ಯೇಕ ‘ಮಹಿಳಾ ವಿಭಾಗ’ ಹಾಗೂ ಎಲ್ಲಾ ಠಾಣೆಗಳಲ್ಲಿ 24×7 ಮಹಿಳಾ ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸಲು ಪ್ರಸ್ತಾಪಿಸಿದ್ದಾರೆ. ಜೊತೆಗೆ ತನಿಖೆ, ಸೈಬರ್ ಕ್ರೈಮ್ ಹಾಗೂ ಫೊರೆನ್ಸಿಕ್ ವಿಭಾಗಗಳಲ್ಲಿ ಹೆಚ್ಚಿನ ಮಹಿಳಾ ಸಿಬ್ಬಂದಿಯನ್ನು ನೇಮಕ ಮಾಡಲು ಆಗ್ರಹಿಸಿದ್ದಾರೆ. ಕಡಿಮೆ ಶಿಕ್ಷೆಯ ಪ್ರಮಾಣ ಹಾಗೂ ಅಪರಾಧಗಳ ಕುರಿತು ಕಳವಳ ವ್ಯಕ್ತಪಡಿಸಿರುವ ಮಹಿಳಾ ಹೋರಾಟಗಾರ್ತಿ ವಿಮಲಾ ಕೆ.ಎಸ್, “ಸಾಮಾಜಿಕವಾಗಿ ಮತ್ತು ಭೌತಿಕವಾಗಿ ಸಮಾಜ ಬೆಳೆದಿದ್ದರೂ, ಮಹಿಳೆಯರ ಮೇಲಿನ ಮಾನಸಿಕ ದೃಷ್ಟಿಕೋನ ಬದಲಾಗಿಲ್ಲ. ದಿನದಿಂದ ದಿನಕ್ಕೆ ಮಾನವೀಯ ಮೌಲ್ಯಗಳು ಕುಸಿಯುತ್ತಿವೆ. ಸಂಪ್ರದಾಯವಾದಿ ಆಲೋಚನೆಗಳಿಗೆ ಬೆಂಬಲ ಸಿಗುತ್ತಿರುವುದು ಹಾಗೂ ಮಹಿಳೆಯರನ್ನು ಕೇವಲ ಸರಕಾಗಿ ನೋಡುವ ಪ್ರವೃತ್ತಿ ಹೆಚ್ಚುತ್ತಿರುವುದೇ ಇದಕ್ಕೆ ಮೂಲ. ಪ್ರಕರಣಗಳ ಸಲ್ಲಿಕೆ ಸಂಖ್ಯೆ ಕಡಿಮೆಯಾಗಿದೆ ಎಂದರೆ ಸಮಾಜದಲ್ಲಿ ಅಪರಾಧ ಕಡಿಮೆಯಾಗಿದೆ ಎಂದು ಅರ್ಥವಲ್ಲ,” ಎಂದು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಪಿಜಿಸಿಇಟಿ ಕೌನ್ಸೆಲಿಂಗ್ ಗೊಂದಲ: ಕೆಇಎ ನಡೆಗೆ ಪಿಜಿ ವಿದ್ಯಾರ್ಥಿಗಳು ಕಂಗಾಲು!

ತನಿಖಾ ಹಂತದಲ್ಲೇ ಮಹಿಳೆಯರು, ದಲಿತರು ಹಾಗೂ ಹಿಂದುಳಿದ ವರ್ಗಗಳ ಪ್ರಕರಣಗಳು ಹಿನ್ನಡೆ ಅನುಭವಿಸುತ್ತಿದ್ದು, ಸಂಪೂರ್ಣ ವ್ಯವಸ್ಥೆಯಲ್ಲೇ ಜಡತ್ವ ಆವರಿಸಿದೆ ಎಂದು ಅವರು ಆರೋಪಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Loading...
Unable to load recommendations.
Follow Us