ಕೆ-ಪಾಪ್ ಕ್ರೇಜ್‌ನಿಂದ ಬಿಲಿಯನ್ ಡಾಲರ್ ಹೂಡಿಕೆ: ಕನ್ನಡಿಗರಿಗೆ ಕಾಯುತ್ತಿದೆ ಉದ್ಯೋಗಾವಕಾಶಗಳ ಸುರಿಮಳೆ!

ಕೆ-ಪಾಪ್ ಹಾಗೂ ಕೊರಿಯನ್ ಸಂಸ್ಕೃತಿಯ ಜನಪ್ರಿಯತೆಯನ್ನು ಬಳಸಿಕೊಂಡು ದಕ್ಷಿಣ ಕೊರಿಯಾದಿಂದ ಭಾರೀ ಹೂಡಿಕೆ ಆಕರ್ಷಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ. ಸಚಿವ ಪ್ರಿಯಾಂಕ್ ಖರ್ಗೆ ಅವರು ಕೊರಿಯನ್ ಉದ್ಯಮಿಗಳ ಉನ್ನತ ನಿಯೋಗದೊಂದಿಗೆ ಚರ್ಚೆ ನಡೆಸಿದ್ದು, ಎಐ, ಸೆಮಿಕಂಡಕ್ಟರ್, ರೊಬೊಟಿಕ್ಸ್ ಹಾಗೂ ನವೋದ್ಯಮ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆಯಾಗುವ ನಿರೀಕ್ಷೆಯಿದೆ.

ಕೆ-ಪಾಪ್ ಕ್ರೇಜ್‌ನಿಂದ ಬಿಲಿಯನ್ ಡಾಲರ್ ಹೂಡಿಕೆ: ಕನ್ನಡಿಗರಿಗೆ ಕಾಯುತ್ತಿದೆ ಉದ್ಯೋಗಾವಕಾಶಗಳ ಸುರಿಮಳೆ!
ಪ್ರಿಯಾಂಕ್ ಖರ್ಗೆ
Image Credit source: Priyank Kharge X account

Updated on: Oct 04, 2026 | 8:19 AM

ಮುಖ್ಯಾಂಶಗಳು

  • ಕರ್ನಾಟಕದ ಸಾಂಸ್ಕೃತಿಕ ಟ್ರೆಂಡ್‌ ಬಳಸಿ ಬಿಲಿಯನ್ ಡಾಲರ್ ಹೂಡಿಕೆಗೆ ಸರ್ಕಾರದ ಪ್ಲಾನ್.
  • ಪ್ರಿಯಾಂಕ್ ಖರ್ಗೆ ನೇತೃತ್ವದಲ್ಲಿ ಕೊರಿಯನ್ ದೈತ್ಯ ಕಂಪನಿಗಳೊಂದಿಗೆ ಮಹತ್ವದ ಚರ್ಚೆ.
  • ಎಐ, ಸೆಮಿಕಂಡಕ್ಟರ್ ಮತ್ತು ರೋಬೋಟಿಕ್ಸ್ ಕ್ಷೇತ್ರಗಳಲ್ಲಿ ಹೊಸ ಉದ್ಯೋಗಾವಕಾಶದ ನಿರೀಕ್ಷೆ.

ಬೆಂಗಳೂರು, ಅಕ್ಟೋಬರ್ 04: ಯುವ ಪೀಳಿಗೆಯಲ್ಲಿ ಕೆ-ಪಾಪ್ , ಕೊರಿಯನ್ ಆಹಾರ, ಕಾಸ್ಮೆಟಿಕ್ಸ್​ ಮತ್ತು ಕೆ ಡ್ರಾಮಾ ಪ್ರೀತಿ ದಿನೇ ದಿನೇ ಜನಪ್ರಿಯತೆ ಪಡೆಯುತ್ತಿದೆ. ಈ ಸಾಂಸ್ಕೃತಿಕ ಆಸಕ್ತಿಯನ್ನೇ ಬಂಡವಾಳ ಮಾಡಿಕೊಂಡು ದಕ್ಷಿಣ ಕೊರಿಯಾದಿಂದ ಬಿಲಿಯನ್‌ಗಟ್ಟಲೆ ಡಾಲರ್ ಹೂಡಿಕೆಯನ್ನು ಆಕರ್ಷಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ.

ಉನ್ನತ ಮಟ್ಟದ ನಿಯೋಗದೊಂದಿಗೆ ಸಭೆ

ದಕ್ಷಿಣ ಕೊರಿಯಾದ ಉನ್ನತ ಮಟ್ಟದ ಉದ್ಯಮಿಗಳು, ವೆಂಚರ್ ಕ್ಯಾಪಿಟಲಿಸ್ಟ್‌ಗಳು ಮತ್ತು ಉದ್ಯಮ ನಾಯಕರ ನಿಯೋಗವು ಬೆಂಗಳೂರಿನ ವಿಧಾನಸೌಧದಲ್ಲಿ ಗ್ರಾಮೀಣಾಭಿವೃದ್ಧಿ, ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿಯಾಗಿ ಮಹತ್ವದ ಚರ್ಚೆ ನಡೆಸಿದೆ.

ಈ ನಿಯೋಗದಲ್ಲಿ ಡಿಎಸ್‌ಸಿ ಇನ್ವೆಸ್ಟ್‌ಮೆಂಟ್, ಜಿಎಸ್ ವೆಂಚರ್ಸ್ , ಸಿಜೆ ಚೇಲ್ ಜೇಡಂಗ್ , ಕ್ಯಾಪ್‌ಸ್ಟೋನ್ ಪಾರ್ಟ್‌ನರ್ಸ್ ಮತ್ತು ಗೋಪಿಜ್ಜಾ ಕಾರ್ಯಾಚರಣೆ ನಡೆಸುವ ಜಿಟಿಜಿಒ ಕಂಪನಿಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ಯಾವೆಲ್ಲಾ ಕ್ಷೇತ್ರಗಳಲ್ಲಿ ಹೂಡಿಕೆ ಸಾಧ್ಯತೆ?

ಕೃತಕ ಬುದ್ಧಿಮತ್ತೆ , ಸೆಮಿಕಂಡಕ್ಟರ್, ಕೃಷಿ-ತಂತ್ರಜ್ಞಾನ , ಬಾಹ್ಯಾಕಾಶ ಮತ್ತು ರೊಬೊಟಿಕ್ಸ್‌ನಂತಹ ಉನ್ನತ ತಂತ್ರಜ್ಞಾನ ಕ್ಷೇತ್ರಗಳ ಮೇಲೆ ಕೇಂದ್ರೀಕೃತವಾಗಿತ್ತು. ಇದರೊಂದಿಗೆ ಆಹಾರ, ಪಾನೀಯ , ಚಿಲ್ಲರೆ ವ್ಯಾಪಾರ ಹಾಗೂ ನವೋದ್ಯಮ ಕ್ಷೇತ್ರಗಳಲ್ಲಿ ಕೊರಿಯನ್ ಕಂಪನಿಗಳು ಭಾರತೀಯ ಮಾರುಕಟ್ಟೆಗೆ ಪ್ರವೇಶಿಸಲು ಕರ್ನಾಟಕ ಸೂಕ್ತ ವೇದಿಕೆಯಾಗಲಿದೆ ಎಂದು ಹೇಳಲಾಗಿದೆ.

ದಕ್ಷಿಣ ಕೊರಿಯಾದಲ್ಲಿ ಆಂತರಿಕ ಮಾರುಕಟ್ಟೆಯ ಬೆಳವಣಿಗೆ ಸೀಮಿತವಾಗುತ್ತಿರುವ ಹಿನ್ನೆಲೆಯಲ್ಲಿ, ಅಲ್ಲಿನ ಹೂಡಿಕೆದಾರರು ಭಾರತದತ್ತ ಗಮನ ಹರಿಸುತ್ತಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, “ಕರ್ನಾಟಕದಲ್ಲಿ ಅದ್ಭುತ ಪ್ರತಿಭೆ, ಸಂಶೋಧನಾ ಸಾಮರ್ಥ್ಯ ಮತ್ತು ನಾವೀನ್ಯತೆಯ ಪರಿಸರ ವ್ಯವಸ್ಥೆಯಿದೆ. ಕೊರಿಯನ್ ಕಂಪನಿಗಳಿಗೆ ರಾಜ್ಯ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ,” ಎಂದು ಭರವಸೆ ನೀಡಿದ್ದಾರೆ. ಕೊರಿಯನ್ ಸಂಸ್ಕೃತಿಯ ಜನಪ್ರಿಯತೆಯನ್ನು ತಾಂತ್ರಿಕ ಮತ್ತು ಆರ್ಥಿಕ ಸಹಭಾಗಿತ್ವವಾಗಿ ಪರಿವರ್ತಿಸುವುದು ಈ ಸಭೆಯ ಮುಖ್ಯ ಉದ್ದೇಶವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More
Loading...
Unable to load recommendations.
Follow Us