ಕೆಪಿಎಲ್ ಬೆಟ್ಟಿಂಗ್ ಪ್ರಕರಣ; ಆಟಗಾರರ ವಿರುದ್ಧದ ಕೇಸ್ ರದ್ದುಪಡಿಸಿದ ಹೈಕೋರ್ಟ್

| Updated By: preethi shettigar

Updated on: Jan 10, 2022 | 3:32 PM

ಕ್ರಿಕೆಟರ್​ಗಳ ವಿರುದ್ಧದ ಸಿಸಿಬಿ ಚಾರ್ಜ್​​ಶೀಟ್ ರದ್ದು ಮಾಡಲಾಗಿದ್ದು, ಆಟಗಾರರಾದ ಸಿ.ಎಂ.ಗೌತಮ್,‌ ಅಮಿತ್ ಮಾವಿ, ಅಬ್ರಾರ್ ಕಾಜಿ ಅಲಿ ಅಷ್ಪಾಕ್ ವಿರುದ್ಧದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.

ಕೆಪಿಎಲ್ ಬೆಟ್ಟಿಂಗ್ ಪ್ರಕರಣ; ಆಟಗಾರರ ವಿರುದ್ಧದ ಕೇಸ್ ರದ್ದುಪಡಿಸಿದ ಹೈಕೋರ್ಟ್
ಕರ್ನಾಟಕ ಹೈಕೋರ್ಟ್
Follow us on

ಬೆಂಗಳೂರು: ಕೆಪಿಎಲ್‌ನಲ್ಲಿ ಬೆಟ್ಟಿಂಗ್ (KPL Betting) ಮತ್ತು ಮ್ಯಾಚ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ (CCB) ಪೊಲೀಸರು ಕ್ರಿಕೆಟರ್​ಗಳನ್ನು ಬಂಧಿಸಿದ್ದರು. ಸದ್ಯ ಕ್ರಿಕೆಟರ್​ಗಳ ವಿರುದ್ಧದ ಸಿಸಿಬಿ ಚಾರ್ಜ್​​ಶೀಟ್ ರದ್ದು ಮಾಡಲಾಗಿದೆ. ಆಟಗಾರರಾದ ಸಿ.ಎಂ.ಗೌತಮ್,‌ ಅಮಿತ್ ಮಾವಿ, ಅಬ್ರಾರ್ ಕಾಜಿ ಅಲಿ ಅಷ್ಪಾಕ್ ವಿರುದ್ಧದ ಪ್ರಕರಣವನ್ನು ಹೈಕೋರ್ಟ್ (High Court) ರದ್ದುಪಡಿಸಿದೆ.

ಬೆಟ್ಟಿಂಗ್​ ಪ್ರಕರಣ:
2019 ರಲ್ಲಿ ನಡೆದ ಬಳ್ಳಾರಿ ಟಸ್ಕರ್ಸ್-ಹಬ್ಬಳ್ಳಿ ಟೈಗರ್ಸ್ ನಡುವಿನ ಕೆಪಿಎಲ್ ಫೈನಲ್ ಪಂದ್ಯದಲ್ಲಿ ಸ್ಪಾಟ್ ಫಿಕ್ಸಿಂಗ್ ನೆಡೆಸಿದ್ದಾರೆ ಎಂಬ ಆರೋಪದಲ್ಲಿ ಬಳ್ಳಾರಿ ಟಸ್ಕರ್ಸ್ ತಂಡದ ನಾಯಕ ಸಿ.ಎಂ ಗೌತಮ್ ಹಾಗೂ ಅಬ್ರಾರ್ ಖಾಜಿ ಬಂಧಿಸಲಾಗಿತ್ತು. ಮಂದಗತಿಯ ಬ್ಯಾಟಿಂಗ್ ನೆಡೆಸಲು ಇಬ್ಬರು ಆಟಗಾರರು 20 ಲಕ್ಷ ಹಣ ಪಡೆದಿದ್ದು, ಬೆಂಗಳೂರು ವಿರುದ್ಧದ ಮತ್ತೊಂದು ಪಂದ್ಯದಲ್ಲೂ ಫಿಕ್ಸಿಂಗ್ ನೆಡೆಸಿದ್ದರು ಎಂಬ ಮಾಹಿತಿ ಸಿಸಿಬಿ ಪೊಲೀಸರಿಗೆ ಸಿಕ್ಕಿತ್ತು.

ಬಂಧಿತ ಆಟಗಾರ ಸಿಎಂ ಗೌತಮ್ ಕರ್ನಾಟಕ ರಣಜಿ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿದ್ದರು. ಆರ್ಸಿಬಿ, ಮುಂಬೈ ಇಂಡಿಯನ್ಸ್, ಡೆಲ್ಲಿ ಡೇರ್ ಡೆವಿಲ್ಸ್ ಪರ ಆಡಿದ್ದರು. 2012-13 ನೇ ಸಾಲಿನ ರಣಜಿ ಋತುವಿನಲ್ಲಿ ರಾಜ್ಯದ ಪರ ಅತೀ ಹೆಚ್ಚು ರನ್ ಗಳಿಸಿದ್ದ ಎರಡನೇ ಆಟಗಾರನಾಗಿ ಹೊರಹೊಮ್ಮಿದ್ದರು. ಅದೇ ಪ್ರದರ್ಶನದ ಆಧಾರದಲ್ಲಿ ಇಂಡಿಯಾ ಎ ತಂಡವನ್ನೂ ಪ್ರತಿನಿಧಿಸಿದ್ದರು ಆದರೆ ನಂತರ ಮ್ಯಾಚ್ ಫಿಕ್ಸಿಂಗ್ ಆರೋಪದಲ್ಲಿ ಸಿಸಿಬಿ ಬಲೆಗೆ ಬಿದ್ದಿದ್ದರು. ಮತ್ತೊಬ್ಬ ಬಂಧಿತ ಆಟಗಾರ ಅಬ್ರಾರ್ ಖಾಜಿ ಸದ್ಯ ಮಿಝೋರಮ ತಂಡವನ್ನು ಪ್ರತಿನಿಧಿಸುತ್ತಿದ್ದರು.

ಇದನ್ನೂ ಓದಿ:

KPL ಕಳ್ಳಾಟದ ಫೋನ್ ಕೇಳಿದ್ರೆ ಹೊಸ ಮೊಬೈಲ್ ಕೊಟ್ಟ, CCB ಎದುರೇ ಕಣ್ಣಾಮುಚ್ಚಾಲೆಗಿಳಿದ ಜತಿನ್

Bulli Bai App: ಬಗೆದಷ್ಟೂ ಆಳ ಬುಲ್ಲಿ ಬಾಯ್​ ಕೇಸ್​; ಅಪ್ಪ-ಅಮ್ಮ ಇಲ್ಲದ 18ವರ್ಷದ ಯುವತಿ ಇದರ ಮಾಸ್ಟರ್ ಮೈಂಡ್, ಒಟ್ಟು ಮೂವರ ಬಂಧನ​

 

Published On - 3:23 pm, Mon, 10 January 22