
ರಾಜ್ಯದಲ್ಲಿ ಅದರಲ್ಲೂ ವಿಶೇಷವಾಗಿ ಬೆಂಗಳೂರಿನಲ್ಲಿ ವ್ಯಾಪಕವಾಗಿ ಹಬ್ಬಿದಂತಿರುವ ಡ್ರಗ್ಸ್ ಹಾವಳಿಯ ಬಗ್ಗೆ ರಾಜಕೀಯ ನಾಯಕರು ಪ್ರತಿಕ್ರಿಯಿಸಲಾರಂಭಿಸಿದ್ದಾರೆ. ವಿರೋಧ ಪಕ್ಷದವರು ಸರಕಾರದ ವೈಫಲ್ಯವೆಂದು ವ್ಯಾಖ್ಯಾನಿಸಿದರೆ, ಆಡಳಿತ ನಡೆಸುತ್ತಿರುವವರು ಪ್ರತಿಪಕ್ಷದ ನಾಯಕರ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಇಂದು ಬೆಂಗಳೂರಿನಲ್ಲಿ ಈ ಬಗ್ಗೆ ಮಾತಾಡಿದ ಕಾಂಗ್ರೆಸ್ ಶಾಸಕ ಎನ್ ಎ ಹ್ಯಾರಿಸ್, ಡ್ರಗ್ಸ್ ದಂಧೆಯನ್ನು ಬೇರಿನಿಂದ ಕಿತ್ತುಹಾಕುವ ಬಲಾಢ್ಯತೆ ನಮ್ಮ ಕಾನೂನಿಗಿಲ್ಲ ಎಂದು ಹೇಳಿದರು.
‘‘ನಿರ್ದೇಶಕ ಇಂದ್ರಜಿತ್ ಲಂಕೇಶ್‌ಗೆ ನಮ್ಮ ಬೆಂಬಲವಿದೆ, ಅವರು ನೀಡಿರುವ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಸಮಗ್ರವಾಗಿ ತನಿಖೆ ನಡೆಸಲಿ, ಬಿಸಿಯಾರುವವರೆಗೆ ತನಿಖೆ ನಡೆಸಿ ನಂತರ ಸಮ್ಮನಾದರೆ ಅದರಿಂದ ಏನೇನೂ ಪ್ರಯೋಜನವಿಲ್ಲ,’’ ಎಂದು ಹ್ಯಾರಿಸ್ ಹೇಳಿದರು.