ಬೆಂಗಳೂರು, (ಮೇ 31): ಪಾರ್ಟಿ ಪ್ರಿಯರು, ಮದ್ಯ (liquor) ಪ್ರಿಯರಿಗೆ ಇದು ಅಕ್ಷರಶಃ ಕಹಿ ಸುದ್ದಿ. ಯಾಕಂದ್ರೆ ನಾಳೆ (ಜೂನ್ 01) ಸಂಜೆ 4 ಗಂಟೆಯಿಂದಲೇ ಬಾರ್‌ಗಳು (Bar) ಬಂದ್ ಆಗಲಿವೆ. .ಎಂಎಲ್‌ಸಿ ಚುನಾವಣೆ ಹಾಗೂ ಲೋಕಸಭಾ ಚುನಾವಣಾ ಫಲಿತಾಂಶ ಹಿನ್ನೆಲೆಯಲ್ಲಿ ಬೆಂಗಳೂರು (Bengaluru) ನಗರದಲ್ಲಿ ಜೂನ್ 1ರಿಂದ ಸಂಜೆಯಿಂದ ಜೂನ್ 6ರವರೆಗೆ ಬಾರ್‌ಗಳು ಬಂದ್ ಆಗಲಿವೆ. ವೀಕೆಂಡ್ನಲ್ಲೇ ಬಾರ್ ಅಂಗಡಿಗಳು ಬಾಗಿಲು ಹಾಕುತ್ತಿರುವುದರಿಂದ ಮದ್ಯ ಪ್ರಿಯರಿಗೆ ಬರ ಎದುರಾಗಿದೆ.
ಜೂನ್ 3ರಂದು ಪದವೀಧರರ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಹೀಗಾಗಿ ಜೂನ್ 1ರ ಸಂಜೆ 4 ಗಂಟೆಯಿಂದ ಜೂನ್ 3ರವರೆಗೆ ಬಾರ್‌ಗಳು ಕ್ಲೋಸ್ ಇರಲಿವೆ. ಜೂನ್ 4ರಂದು ಲೋಕಸಭಾ ಚುನಾವಣೆಯ ಮತ ಎಣಿಕೆ ಇದ್ದು, ಅಂದು ಸಹಾ ಎಣ್ಣೆ ಸಿಗಲ್ಲ.. ಕಿಕ್ ಏರಿಸುವಂತಿಲ್ಲ.. ಇನ್ನು ಜೂನ್ 5ಅಂದ್ರೆ.. ಬುಧವಾರ ಬಾರ್‌ಗಳು ಎಂದಿನಂತೆ ಓಪನ್ ಇರುತ್ತವೆ. ಆದ್ರೆ ಜೂನ್ 6 ರಂದು ಎಂಎಲ್‌ಸಿ ಮತ ಎಣಿಕೆ ಇರೋದ್ರಿಂದ ಅಂದು ಮತ್ತೆ ಬಾರ್ ಕ್ಲೋಸ್ ಆಗಲಿವೆ.
ಬೆಂಗಳೂರಿನಲ್ಲಿ ಪದವಿ ಕ್ಷೇತ್ರ ಚುನಾವಣೆಗೆ 36 ಸಾವಿರದಷ್ಟು ಮಾತ್ರ ಮತದಾರರಿದ್ದಾರೆ. ಆದ್ರೆ 5 ದಿನ ಬಾರ್ ಬಂದ್ ಮಾಡುವುದರಿಂದ ಹೊಡೆತ ಬೀಳಲಿದೆ ಎಂದು ಬಾರ್ ಮಾಲೀಕರು ಆಕ್ರೋಶ ಹೊರ ಹಾಕಿದ್ದಾರೆ. 5 ದಿನ ಎಣ್ಣೆ ಸಿಗಲ್ಲ ಎನ್ನುವ ನೋವು ಒಂದ್ಕಡೆ ಆದ್ರೆ, ಬಾರ್ ಮಾಲೀಕರು ಕದ್ದು ಮುಚ್ಚಿ ದುಪ್ಪಟ್ಟು ಹಣಕ್ಕೆ ಮದ್ಯ ಮಾರಾಟ ಮಾಡುತ್ತಾರೆ ಎನ್ನುವ ನೋವು ಮದ್ಯ ಪ್ರಿಯರದ್ದು.
ಅದೇನೆ ಇರಲಿ ವೀಕೆಂಡ್ನಲ್ಲೇ ಡ್ರೈ ಡೇ ಶಾಕ್ ಎದುರಾಗಿದೆ. ಹೀಗಾಗಿ ನಾಳೆ ಬಾರ್ಗಳ ಮುಂದೆ ಎಣ್ಣೆ ಪ್ರಿಯರು ಕ್ಯೂ ನಿಂತರೂ ಅಚ್ಚರಿ ಇಲ್ಲ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ