ಮುಂದುವರಿದ ಭ್ರಷ್ಟರ ಬೇಟೆ; ಬೆಂಗಳೂರಿನಲ್ಲಿ ಹೆಲ್ತ್ ಇನ್ಸ್​ಪೆಕ್ಟರ್​ ಲೋಕಾಯುಕ್ತ ಬಲೆಗೆ

ದಿನಗಳ ಹಿಂದೆಯಷ್ಟೇ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮತ್ತು ಪುತ್ರನ ಮನೆಮೇಲೆ ದಾಳಿ ನಡೆಸಿ ಭರ್ಜರಿ ಬೇಟೆಯಾಡಿದ್ದ ಲೋಕಾಯುಕ್ತ ಪೊಲೀಸರು, ಇದೀಗ ಬೆಂಗಳೂರಿನಲ್ಲಿ ಹೆಲ್ತ್ ಇನ್ಸ್​ಪೆಕ್ಟರ್​ ರಾಮಯ್ಯರನ್ನು ಖೆಡ್ಡಾಕ್ಕೆ ಬೀಳಿಸಿದ್ದಾರೆ.

ಮುಂದುವರಿದ ಭ್ರಷ್ಟರ ಬೇಟೆ; ಬೆಂಗಳೂರಿನಲ್ಲಿ ಹೆಲ್ತ್ ಇನ್ಸ್​ಪೆಕ್ಟರ್​ ಲೋಕಾಯುಕ್ತ ಬಲೆಗೆ
ಲೋಕಾಯುಕ್ತ ಬಲೆಗೆ ಬಿದ್ದ ಹೆಲ್ತ್ ಇನ್ಸ್​ಪೆಕ್ಟರ್ ರಾಮಯ್ಯ
Follow us
Rakesh Nayak Manchi
|

Updated on:Mar 04, 2023 | 5:18 PM

ಬೆಂಗಳೂರು: ಕರ್ನಾಟಕದಲ್ಲಿ ಎಸಿಬಿ ರದ್ದುಗೊಂಡು ಲೋಕಾಯುಕ್ತ (Lokayukta) ಮರುಸ್ಥಾಪನೆಯಾದ ನಂತರ ಭ್ರಷ್ಟರ ಮೈಯಲ್ಲಿ ನಡುಕ ಉಂಟಾಗಿದೆ. ಅಲ್ಲೊಂದು ಇಲ್ಲೊಂದು ಎನ್ನುತ್ತಾ ಲೋಕಾಯುಕ್ತ ಪೊಲೀಸರು ದಾಳಿ (Lokayukta Raid At Bengaluru) ನಡೆಸಿ ಭ್ರಷ್ಟರ ಚಳಿ ಬಿಡಿಸುತ್ತಿದ್ದಾರೆ. ದಿನಗಳ ಹಿಂದೆಯಷ್ಟೇ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ (Madal Virupakshappa) ಮತ್ತು ಪುತ್ರನ ಮನೆಮೇಲೆ ದಾಳಿ ನಡೆಸಿ ಭರ್ಜರಿ ಬೇಟೆಯಾಡಿದ್ದ ಲೋಕಾಯುಕ್ತ ಪೊಲೀಸರು, ಇದೀಗ ಬೆಂಗಳೂರಿನಲ್ಲಿ ಓರ್ವ ಹೆಲ್ತ್ ಇನ್ಸ್​ಪೆಕ್ಟರ್ (Helth Inspector)​ ಅವರನ್ನು ಖೆಡ್ಡಾಕ್ಕೆ ಬೀಳಿಸಿದ್ದಾರೆ.

ಸ್ಪಾ ಲೈಸೆನ್ಸ್​ ನವೀಕರಣಕ್ಕಾಗಿ ವ್ಯಕ್ತಿಯೊಬ್ಬರು ಅರ್ಜಿ ಸಲ್ಲಿಸಿದ್ದಾರೆ. ಆದರೆ ಸಿ.ವಿ.ರಾಮನ್​ನಗರದ ಬಿಬಿಎಂಪಿ ಕಚೇರಿಯಲ್ಲಿನ ಹೆಲ್ತ್ ಇನ್ಸ್​​ಪೆಕ್ಟರ್ ರಾಮಯ್ಯ 20,000 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಲಂಚಕ್ಕೆ ಬೇಡಿಕೆ ಇಟ್ಟ ಬಗ್ಗೆ ಸ್ಪಾ ಮಾಲೀಕರು ಲೋಕಾಯುಕ್ತ ಕಚೇರಿಯಲ್ಲಿ ದೂರು ದಾಖಲಿಸಿದ್ದಾರೆ. ಅದರಂತೆ 20 ಸಾವಿರದ ಹಣದ ಪೈಕಿ 18 ಸಾವಿರ ರೂಪಾಯಿ ನೀಡುತ್ತಿದ್ದ ವೇಳೆ ಸಿ.ವಿ.ರಾಮನ್​ನಗರದ ಬಿಬಿಎಂಪಿ ಕಚೇರಿಗೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು, ರಾಮಯ್ಯರನ್ನು ಬಂಧಿಸಿದ್ದಾರೆ. ಸದ್ಯ ಹೆಲ್ತ್ ಇನ್ಸ್ ಪೆಕ್ಟರ್ ರಾಮಯ್ಯರನ್ನು ವಶಕ್ಕೆ ಪಡೆದ ಲೋಕಾಯುಕ್ತ ಪೊಲೀಸರು ವಿಚಾರಣೆ ಆರಂಭಿಸಿದ್ದು, ಭ್ರಷ್ಟಾಚಾರ ತಡೆಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ: KSDL: ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧ 800 ಕೋಟಿ ಅವ್ಯವಹಾರ ಆರೋಪ

ಪೊಲೀಸ್​ ನೇಮಕಾತಿ ಅಕ್ರಮ: ಕಾನ್ಸ್​ಟೇಬಲ್​ಗಾಗಿ ಸಿಐಡಿ ಹುಡುಕಾಟ

ಬಾಗಲಕೋಟೆ: 2021ನೇ ಸಾಲಿನ ಪೊಲೀಸ್​ ನೇಮಕಾತಿ ಅಕ್ರಮದಲ್ಲಿ ಭಾಗಿಯಾಗಿದ ಆರೋಪ ಸಂಬಂಧ ತಲೆಮರೆಸಿಕೊಂಡಿರುವ ಬೆಳಗಾವಿ ಜಿಲ್ಲೆಯ ಠಾಣೆಯೊಂದರ ಕಾನ್ಸ್​ಟೇಬಲ್​​ ರಫೀಕ್ ಚಿಮ್ಮಡ್​ ಬಂಧನಕ್ಕೆ ಸಿಐಡಿ ತಂಡ ತೀವ್ರ ಶೋಧ ನಡೆಸುತ್ತಿದೆ. ಸುಳಿವು ಮೇರೆಗೆ ರಫೀಕ್ ಚಿಮ್ಮಡ್​​ ಬಂಧಿಸಲು ತನಿಖಾ ತಂಡ ಬಾಗಲಕೋಟೆ ಜಿಲ್ಲೆಯ ರಬಕವಿಬನಹಟ್ಟಿ ತಾಲೂಕಿನ ಕುಲಹಳ್ಳಿಗೆ ಆಗಮಿಸಿ ತಲಾಷ್ ನಡೆಸಿದೆ. ಆದರೆ ಕುಲಹಳ್ಳಿ ನಿವಾಸಿಯಾಗಿರುವ ರಫೀಕ್, ಊರಿನಲ್ಲಿ ಇಲ್ಲದ ಪತ್ತೆಯಾಗದ ಹಿನ್ನಲೆ ಸಿಐಡಿ ತಂಡ ಬೆಳಗಾವಿ ಕಡೆ ತೆರಳಿದೆ. ಸಿಐಡಿ ಡಿವೈಎಸ್​​ಪಿ, ಎಂ.ಆರ್​​.ಮುದವಿ, ಸಿಪಿಐ ರವಿ ಪಾಟೀಲ್, ಮಹೇಶ್ ಕನಕಗಿರಿ ಸೇರಿ ಐವರು ಅಧಿಕಾರಿಗಳನ್ನೊಳಗೊಂಡ ತಂಡದಿಂದ ರಫೀಕ್ ಹುಡುಕಾಟ ನಡೆಯುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:15 pm, Sat, 4 March 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ