ಕಚೇರಿಗೆ ನುಗ್ಗಿ ಬಿಬಿಎಂಪಿ ಮಹಿಳಾ ಅಧಿಕಾರಿಗೆ ಬೆದರಿಕೆ: ಆರೋಪಿ ಬಂಧನ

ಬಿಬಿಎಂಪಿ ಪಶ್ಚಿಮ ವಲಯದಲ್ಲಿರುವ ಟೌನ್ ಪ್ಲ್ಯಾನಿಂಗ್ ವಿಭಾಗದ ಅಧಿಕಾರಿ ಕಚೇರಿಗೆ ನುಗ್ಗಿ ಬೆದರಿಕೆ ಹಾಕಿದ ಪ್ರಕರಣ ಅಕ್ಟೋಬರ್ 18 ರಂದು ನಡೆದಿತ್ತು. ಈ ಕುರಿತು ಶೇಷಾದ್ರಿಪುರಂ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕಚೇರಿಗೆ ನುಗ್ಗಿ ಬಿಬಿಎಂಪಿ ಮಹಿಳಾ ಅಧಿಕಾರಿಗೆ ಬೆದರಿಕೆ: ಆರೋಪಿ ಬಂಧನ
ಬಿಬಿಎಂಪಿ ಮಹಿಳಾ ಅಧಿಕಾರಿಗೆ ಬೆದರಿಕೆ ಹಾಕಿ ಬಂಧಿತನಾಗಿರುವ ಆರೋಪಿ ಅರುಣ್ ಕುಮಾರ್
Updated By: Rakesh Nayak Manchi

Updated on: Oct 21, 2023 | 8:56 PM

ಬೆಂಗಳೂರು, ಅ.21: ಬಿಬಿಎಂಪಿ (BBMP) ಪಶ್ಚಿಮ ವಲಯದಲ್ಲಿರುವ ಟೌನ್ ಪ್ಲ್ಯಾನಿಂಗ್ ವಿಭಾಗದ ಕಚೇರಿಗೆ ನುಗ್ಗಿ ಅಧಿಕಾರಿ ಮೋನಿಕಾ ಅವರಿಗೆ ಬೆದರಿಕೆ ಹಾಕಿದ್ದ ಆರೋಪಿಯನ್ನು ನಗರದ ಶೇಷಾದ್ರಿಪುರಂ ಠಾಣಾ ಪೊಲೀಸರು ಬಂಧಿಸಿದ್ದಾರೆ. ಅರುಣ್ ಕುಮಾರ್ ಬಂಧಿತ ಆರೋಪಿಯಾಗಿದ್ದು, ಮತ್ತೊಬ್ಬ ಆರೋಪಿ ಆರ್​ಟಿಐ ಕಾರ್ಯಕರ್ತನ ಬಂಧನಕ್ಕೆ ತನಿಖೆ ಮುಂದುವರಿದಿದೆ.

ಅಕ್ಟೋಬರ್ 18ರ ಸಂಜೆ 5.30ರ ಸುಮಾರಿಗೆ ಕಚೇರಿಗೆ ನುಗ್ಗಿದ ಆರೋಪಿಗಳು ಕೋಣೆ ಬಾಗಿಲು ಮುಚ್ಚಿ ದಿಗ್ಬಂಧನ ಮಾಡಿ ಬಿಬಿಎಂಪಿ ಅಧಿಕಾರಿ ಕೆ.ಜೆ.ಮೋನಿಕಾ ಅವರ ವಿಡಿಯೋ ಚಿತ್ರೀಕರಿಸಿ ಬೆದರಿಕೆರು. ಇದರಿಂದ ಗಾಬರಿಗೊಂಡ ಮೋನಿಕಾ ಅವರು ಕಚೇರಿಯಿಂದ ಹೊರಕ್ಕೆ ಓಡಿ ಬಂದಿದ್ದು, ಬಳಿಕ ಶೇಷಾದ್ರಿಪುರಂ ಠಾಣೆಗೆ ದೂರು ನೀಡಿದ್ದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಗುತ್ತಿಗೆದಾರನ ಕಿಡ್ನ್ಯಾಪ್ ಮಾಡಿ 3 ಕೋಟಿಗೆ ಬೇಡಿಕೆ; ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಸಿಸಿಬಿ ವಶಕ್ಕೆ

ಮೋನಿಕಾ ಅವರು ನೀಡಿದ ದೂರಿನ ಅನ್ವಯ ಪೊಲೀಸರು ಐಪಿಸಿ ಸೆಕ್ಷನ್ 341, 353, 354, 506ರ ಅಡಿ ಎಫ್​ಐಆರ್ ದಾಖಲಿಸಿದ್ದರು. ಸದ್ಯ ಒಬ್ಬ ಆರೋಪಿಯನ್ನು ಬಂಧಿಸಲಾಗಿದ್ದು, ಈತ ವೃತ್ತಿಯಲ್ಲಿ ಅರ್ಕಿಟೆಕ್ಟ್ ಆಗಿದ್ದಾನೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ