ಹೊಸ ವರ್ಷಾಚರಣೆಗೆ ಬೀಳುತ್ತಾ ಬ್ರೇಕ್? ಕರ್ನಾಟಕ ಸರ್ಕಾರದಿಂದ ಕಠಿಣ ನಿಯಮಗಳು ಜಾರಿ ಸಾಧ್ಯತೆ

ತಾಂತ್ರಿಕ ಸಲಹಾ ಸಮಿತಿಯ ಸಲಹೆ ಮೇರೆಗೆ ನ್ಯೂಇಯರ್ ಮತ್ತು ಕ್ರಿಸ್​ಮಸ್ ಆಚರಣೆ ಅವಕಾಶದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ. ಕಳೆದ ಬಾರಿ ಸರ್ಕಾರ ಮಾರ್ಗಸೂಚಿ ಹೊರಡಿಸಿತ್ತು. ಈ ಬಾರಿ ಯಾವ ತೀರ್ಮಾನ ಕೈಗೊಳ್ಳುತ್ತದೆ ಎಂದು ನಾಳೆ ತಿಳಿಯಲಿದೆ.

ಹೊಸ ವರ್ಷಾಚರಣೆಗೆ ಬೀಳುತ್ತಾ ಬ್ರೇಕ್? ಕರ್ನಾಟಕ ಸರ್ಕಾರದಿಂದ ಕಠಿಣ ನಿಯಮಗಳು ಜಾರಿ ಸಾಧ್ಯತೆ
ಸಾಂದರ್ಭಿಕ ಚಿತ್ರ
Updated By: sandhya thejappa

Updated on: Nov 28, 2021 | 11:55 AM

ಬೆಂಗಳೂರು: ರಾಜ್ಯದಲ್ಲಿ ಕೊರೊನಾ (Coronavirus) ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಮುಂಜಾಗ್ರತೆ ಕ್ರಮ ಕೈಗೊಳ್ಳುವಂತೆ ಸರ್ಕಾರ ಅಧಿಕಾರಿಗಳಿಗೆ ಸೂಚನೆ ನೀಡಿದೆ. ನಿನ್ನೆ (ನ.27) ನಡೆದ ಸಿಎಂ ನೇತೃತ್ವದ ಸಭೆಯಲ್ಲಿ ಅಧಿಕಾರಿಗಳಿಗೆ ತಜ್ಞರು ಕೆಲ ಸಲಹೆ ನೀಡಿದ್ದಾರೆ. ಇನ್ನು ಹೊಸ ವರ್ಷಾಚರಣೆ ಮತ್ತು ಕ್ರಿಸ್​ಮಸ್ ಆಚರಣೆ ಅವಕಾಶದ ಕುರಿತು ನಾಳೆ (ನ.29) ಸಭೆ ನಡೆಯಲಿದೆ. ಆರೋಗ್ಯ ಸಚಿವ ಡಾ ಕೆ ಸುಧಾಕರ್ ನೇತೃತ್ವದಲ್ಲಿ ಈ ಸಭೆ ನಡೆಯಲಿದ್ದು, ಕೆಲ ಕಠಿಣ ನಿಯಮಗಳು ಹೊರ ಬೀಳುವ ಸಾಧ್ಯತೆಯಿದೆ.

ತಾಂತ್ರಿಕ ಸಲಹಾ ಸಮಿತಿಯ ಸಲಹೆ ಮೇರೆಗೆ ನ್ಯೂಇಯರ್ ಮತ್ತು ಕ್ರಿಸ್​ಮಸ್ ಆಚರಣೆ ಅವಕಾಶದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ. ಕಳೆದ ಬಾರಿ ಸರ್ಕಾರ ಮಾರ್ಗಸೂಚಿ ಹೊರಡಿಸಿತ್ತು. ಈ ಬಾರಿ ಯಾವ ತೀರ್ಮಾನ ಕೈಗೊಳ್ಳುತ್ತದೆ ಎಂದು ನಾಳೆ ತಿಳಿಯಲಿದೆ. ಪಬ್​ಗಳಿಗೆ ಮಾರ್ಗಸೂಚಿ ಬಿಡುಗಡೆ ಮಾಡುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸುವ ಸಾಧ್ಯತೆ ಇದೆ. ಸದ್ಯ ರಾಜ್ಯದಲ್ಲಿ ತೀವ್ರ ಸೋಂಕಿನ ಏರಿಕೆ ಇಲ್ಲ. ಇನ್ನೂ ಸಮಯಾವಕಾಶ ಇರುವುದರಿಂದ ಸರ್ಕಾರ ಕಾದು, ನಂತರ ತನ್ನ ನಿರ್ಧಾರ ತಿಳಿಸಬಹುದು.

ಶೀಘ್ರದಲ್ಲಿಯೇ ಜಿನೋಮಿಕ್ ಸೀಕ್ವೆನ್ಸ್ ವರದಿ
ಜಿನೋಮಿಕ್ ಸೀಕ್ವೆನ್ಸ್ ವರದಿ ಬರಲು 10 ದಿನ ಬೇಕು. ಶೀಘ್ರದಲ್ಲಿಯೇ ಜಿನೋಮಿಕ್ ಸೀಕ್ವೆನ್ಸ್ ವರದಿ ಬರುತ್ತದೆ. ಡಿ.1ರ ವೇಳೆ ಒಮಿಕ್ರಾನ್ ಬಗ್ಗೆ ಸ್ಪಷ್ಟವಾಗಿ ತಿಳಿಯುತ್ತದೆ. ವರದಿ ಬಂದ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಅಂತ ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಡಾ ಕೆ ಸುಧಾಕರ್ ಹೇಳಿಕೆ ನೀಡಿದ್ದಾರೆ. ರಾಜ್ಯದಲ್ಲಿ 4 ಜಿನೋಮಿಕ್ ಸೀಕ್ವೆನ್ಸ್ ಲ್ಯಾಬ್‌ಗಳು ಇವೆ. ಈ ಲ್ಯಾಬ್‌ಗಳಲ್ಲೂ ಹೊಸ ತಳಿ ಬಗ್ಗೆ ಟೆಸ್ಟ್ ಮಾಡುತ್ತೇವೆ ಅಂತ ತಿಳಿಸಿದ್ದಾರೆ.

ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ಬಂದಿದೆ. ಆದರೆ ಈ ಸಮಯದಲ್ಲಿ ಹೊಸ ತಳಿ ಕಾಣಿಸಿಕೊಂಡಿದೆ. ದಕ್ಷಿಣ ಆಫ್ರಿಕಾ, ಹಾಂಕಾಂಗ್‌ನಲ್ಲಿ ಹೊಸ ತಳಿ ಪತ್ತೆಯಾಗಿದೆ. ಹೊಸ ತಳಿಯ ಪರಿಣಾಮ ಏನೆಂದು ಗೊತ್ತಾಗುತ್ತಿಲ್ಲ. ಆದರೆ ಹೊಸ ತಳಿ ವೇಗವಾಗಿ ಹರಡುತ್ತದೆ. ಭಾರತದಲ್ಲಿಯೂ ಈ ಬಗ್ಗೆ ಎಚ್ಚರಿಕೆ ವಹಿಸಲಾಗಿದೆ. ಪ್ರಧಾನಿ ಮೋದಿ ಈ ಸಂಬಂಧ ನಿನ್ನೆ ಸಭೆ ನಡೆಸಿದ್ದಾರೆ ಎಂದು ಮಾತನಾಡಿದ ಸಿಎಂ ಬೊಮ್ಮಾಯಿ, ಹೊಸ ವರ್ಷ ಆಚರಣೆಗೆ ಅನುಮತಿ ಬಗ್ಗೆ ಯಾವುದೇ ತೀರ್ಮಾನ ಮಾಡಿಲ್ಲ. ಹೊಸ ತಳಿಯ ಬೆಳವಣಿಗೆ ನೋಡಿಕೊಂಡು ತೀರ್ಮಾನ ಮಾಡಲಾಗುತ್ತದೆ ಅಂತ ಹೇಳಿದರು.

ಇದನ್ನೂ ಓದಿ

Video: ಗ್ರಾಮ ರಕ್ಷಾ ದಳದ 600 ಹುದ್ದೆಗಳಿಗೆ ನೇಮಕಾತಿ; ಸಾವಿರಾರು ಜನರನ್ನು ನಿಯಂತ್ರಿಸಲಾಗದೆ ಲಾಠಿ ಚಾರ್ಜ್

ಗಾರ್ಬೇಜ್ ಸಿಟಿಯಾಗಿರುವ ರಾಯಚೂರು ನಗರ; ಒಂದೇ ಒಂದು ರಸ್ತೆ ಬಿಟ್ಟು ಉಳಿದೆಲ್ಲಾ ರಸ್ತೆಗಳು ಕಸಮಯ, ಜಿಲ್ಲಾಡಳಿತದ ನಡೆಗೆ ಜನರ ಆಕ್ರೋಶ

Published On - 11:39 am, Sun, 28 November 21