ಮುಖ ಕಳೆಗುಂದದಂತೆ ಕಾಣಲು ಬೊಟೊಕ್ಸ್​ ಚುಚ್ಚುಮದ್ದು ಬಳಸುವವರಲ್ಲಿ ಪುರುಷರೇ ಹೆಚ್ಚು

|

Updated on: Sep 17, 2024 | 12:26 PM

ವಯಸ್ಸಾದಂತೆ ಮುಖದಲ್ಲಿ ಸುಕ್ಕುಗಳು ಉಂಟಾಗುತ್ತದೆ. ಮುಖದಲ್ಲಿರುವ ಸುಕ್ಕುಗಳನ್ನು ಹೋಗಲಾಡಿಸಲು ಇತ್ತೀಚಿಗೆ ಬೊಟೊಕ್ಸ್​ ಡರ್ಮಲ್​ ಫಿಲ್ಲರ್​ ಮುಂತಾದ ಚುಚ್ಚುಮದ್ದುಗಳನ್ನು ಮಾಡಿಸಿಕೊಳ್ಳುತ್ತಾರೆ. ಚುಚ್ಚು ಮದ್ದು ಬಳಕೆಯಲ್ಲಿ ಪುರುಷರೇ ಹೆಚ್ಚು ಎಂಬ ಅಂಶ ತಿಳಿದು ಬಂದಿದೆ.

ಮುಖ ಕಳೆಗುಂದದಂತೆ ಕಾಣಲು ಬೊಟೊಕ್ಸ್​ ಚುಚ್ಚುಮದ್ದು ಬಳಸುವವರಲ್ಲಿ ಪುರುಷರೇ ಹೆಚ್ಚು
ಬೊಟೊಕ್ಸ್​ ಚುಚ್ಚುಮದ್ದು
Follow us on

ಬೆಂಗಳೂರು, ಸೆಪ್ಟೆಂಬರ್​ 17: ವಯಸ್ಸಾದಂತೆ ಮುಖದಲ್ಲಿ ಸುಕ್ಕುಗಳು ಉಂಟಾಗುತ್ತದೆ. ಮುಖದಲ್ಲಿರುವ ಸುಕ್ಕುಗಳನ್ನು ಹೋಗಲಾಡಿಸಲು ಇತ್ತೀಚಿಗೆ ಬೊಟೊಕ್ಸ್​ ಡರ್ಮಲ್​ ಫಿಲ್ಲರ್ (Botox injection)​ ಮುಂತಾದ ಚುಚ್ಚು ಮದ್ದುಗಳನ್ನು ಮಾಡಿಸಿಕೊಳ್ಳುತ್ತಾರೆ. ಬೊಟೊಕ್ಸ್​ ಡರ್ಮಲ್​ ಫಿಲ್ಲರ್​ ಮುಂತಾದ ಚುಚ್ಚು ಮದ್ದುಗಳನ್ನು ಹೆಚ್ಚಾಗಿ ಚಿತ್ರರಂಗದ ನಟ, ನಟಿಯರು ಹೆಚ್ಚಾಗಿ ಬಳಸುತ್ತಾರೆ. ಈ ಚುಚ್ಚು ಮದ್ದು ಕೇವಲ ಚಿತ್ರರಂಗಕ್ಕೆ ಮಾತ್ರಕ್ಕೆ ಸೀಮಿತವಾಗದೆ ಅನೇಕ ಪುರುಷರು ಕೂಡ ಬಳಸುತ್ತಿದ್ದಾರೆ. ಬೆಲೆಬಾಳುವ ಚರ್ಮದ ಕ್ರೀಮ್‌ಗಳು ಮತ್ತು ಫೇಶಿಯಲ್‌ಗಳ ಜೊತೆಗೆ ಚುಚ್ಚುಮದ್ದನ್ನು ಬಳಸುತ್ತಿದ್ದಾರೆ.

ಲಂಡನ್ ಮೂಲದ ಸಂಶೋಧನಾ ಸಂಸ್ಥೆ ಮಿಂಟೆಲ್‌ನ 2023 ರ ಸಮೀಕ್ಷೆ ಪ್ರಕಾರ ಶೇ30 ರಷ್ಟು ಪುರುಷರು ಮುಖ ಸುಕ್ಕಾಗದಂತೆ ತಡೆಯಲು ಚುಚ್ಚು ಮದ್ದು ಬಳಸುತ್ತಿದ್ದಾರೆ. ಶೇ 26 ರಷ್ಟು ಮಹಿಳೆಯರು ಬಳಸುತ್ತಿದ್ದಾರೆ.
ಬೆಂಗಳೂರಿನ ಹಣಕಾಸಿನ ಮುಖ್ಯ ಅಧಿಕಾರಿಯೊಬ್ಬರು ತಮ್ಮ ಮುಖದ ಮೇಲಿನ ಗೆರೆ ಮತ್ತು ಸೊಕ್ಕನ್ನು ಹೋಗಲಾಡಿಸಲು ಈ ಚುಚ್ಚು ಮದ್ದು ಉಪಯೋಗಿಸುತ್ತಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಮುಖದ ಸುಕ್ಕು ಹೋಗಲಾಡಿಸುವ ಬೊಟೊಕ್ಸ್ ಚಿಕಿತ್ಸೆ ಕುರಿತು ತಜ್ಞರು ಹೇಳುವುದೇನು?

ಯುಸ್​ನ ವಾಣಿಜ್ಯೋದ್ಯಮಿ ಬ್ರಯಾನ್ ಜಾನ್ಸನ್ ಅವರು ತಾವು ಸಣ್ಣವರಂತೆ ಕಾಣಲು ಆಹಾರ ಸೇವನೆಯಲ್ಲಿ ನಿಯಂತ್ರಣ, ವ್ಯಾಯಾಮ ಮಾಡುತ್ತಾರೆ. ತಾವು ವಯಸ್ಸಾದಂತೆ ಕಾಣದಿರಲು ಅವರು ವಾರ್ಷಿಕವಾಗಿ 2 ಮಿಲಿಯನ್‌ಗಿಂತಲೂ ಹೆಚ್ಚು ಹಣ ಖರ್ಚು ಮಾಡುತ್ತಾರೆ. ಇದರಿಂದ ಅವರು ಚಿಕ್ಕ ವಯಸ್ಸಿನವರಹಾಗೆ ಕಾಣುತ್ತಿದ್ದಾರೆ ಎಂದು ವರದಿಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ