ಆಹಾರ ಇಲಾಖೆ ಸಚಿವ ಉಮೇಶ್ ಕತ್ತಿ ವಿಧಿವಶ: ಹೆಚ್​ಎಎಲ್​ ಏರ್​ಪೋರ್ಟ್ ತಲುಪಿದ ಪಾರ್ಥಿವ ಶರೀರ

| Updated By: ಆಯೇಷಾ ಬಾನು

Updated on: Sep 07, 2022 | 8:16 AM

ಆಹಾರ ಇಲಾಖೆ ಸಚಿವ ಉಮೇಶ್ ಕತ್ತಿ ಅವರ ಪಾರ್ಥಿವ ಶರೀರ ಹೆಚ್​ಎಎಲ್​ ಏರ್​ಪೋರ್ಟ್ ತಲುಪಿದೆ.

ಆಹಾರ ಇಲಾಖೆ ಸಚಿವ ಉಮೇಶ್ ಕತ್ತಿ ಅವರ ಪಾರ್ಥಿವ ಶರೀರ ಹೆಚ್​ಎಎಲ್​ ಏರ್​ಪೋರ್ಟ್ ತಲುಪಿದೆ. ಆದ್ರೆ ಹೆಲಿಕಾಪ್ಟರ್ ಟೇಕ್ ಆಫ್ ಕೊಂಚ ವಿಳಂಬ ಆಗುವ ಸಾಧ್ಯತೆ ಇದೆ. ಹವಾಮಾನ ವೈಪರೀತ್ಯ ಹಿನ್ನೆಲೆ ಟೇಕ್ ಆಫ್ ವಿಳಂಬ ಸಾಧ್ಯತೆ. ಹೆಚ್​ಎಎಲ್​ ಏರ್​ಪೋರ್ಟ್​ನಲ್ಲಿ ಏರ್ ಆ್ಯಂಬುಲೆನ್ಸ್ ಸಿದ್ಧತೆ.

ಅರಣ್ಯ ಸಚಿವ ಉಮೇಶ್ ಕತ್ತಿ ಹೃಯಯಾಘಾತದಿಂದ ಬೆಂಗಳೂರಿನ ರಾಮಯ್ಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮೊನ್ನೆ ಬೆಳಗಾವಿಯಿಂದ ಬೆಂಗಳೂರಿಗೆ ಹೋಗಿದ್ದ ಉಮೇಶ್ ಕತ್ತಿ, ನಿನ್ನೆ(ಸೆಪ್ಟೆಂಬರ್ 07) ರಾತ್ರಿ 10ಗಂಟೆ ಸುಮಾರಿಗೆ ತಮ್ಮ ನಿವಾಸದಲ್ಲಿದ್ದಾಗಲೇ ಬಾತ್​ ರೂಮ್​ನಲ್ಲಿ ಕುಸಿದು ಬಿದ್ದಿದ್ದರು. ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ರೂ ತೀವ್ರ ಹೃದಯಾಘಾತ ಆಗಿದ್ರಿಂದ ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿದ್ದಾರೆ.

Published on: Sep 07, 2022 08:16 AM