ಬೆಂಗಳೂರಿನಲ್ಲಿ ಹೆಚ್ಚಾದ ಪುಂಡರ ಹಾವಳಿ, ಬೇಕರಿ ಗಾಜು ಪುಡಿ ಮಾಡಿ ಎಸ್ಕೇಪ್

| Updated By: ಆಯೇಷಾ ಬಾನು

Updated on: Aug 19, 2023 | 9:15 AM

ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ತುಂಗಾ ನಗರದಲ್ಲಿ ಆಗಸ್ಟ್ 16 ರಂದು ಸಂಜೆ ಐದು ಗಂಟೆಗೆ ಬೈಕ್​ನಲ್ಲಿ ಬಂದಿದ್ದ ದುಷ್ಕರ್ಮಿಗಳು ಮಂಜುನಾಥ ಬೇಕರಿ ಗಾಜು ಪುಡಿ ಪುಡಿ ಮಾಡಿ ಅಟ್ಟಹಾಸ ಮೆರೆದಿದ್ದಾರೆ. ಮುಖದ ಗುರುತು ಪತ್ತೆಯಾಗದಂತೆ ಮಾಸ್ಕ್ ಧರಿಸಿ ಬೈಕ್ ನಂಬರ್ ಪ್ಲೇಟ್ ಕಾಣದಂತೆ ಸಗಣಿ ಬಳಿದು ಬಂದಿದ್ದ ಪುಂಡರು ದರ್ಪ ಮೆರೆದಿದ್ದಾರೆ.

ಬೆಂಗಳೂರು, ಆ.19: ಸಿಲಿಕಾನ್ ಸಿಟಿಯಲ್ಲಿ ಪುಂಡರ ಹಾವಳಿ ಮಿತಿ ಮೀರಿದೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ತುಂಗಾ ನಗರದಲ್ಲಿ ಆಗಸ್ಟ್ 16 ರಂದು ಸಂಜೆ ಐದು ಗಂಟೆಗೆ ಬೈಕ್​ನಲ್ಲಿ ಬಂದಿದ್ದ ದುಷ್ಕರ್ಮಿಗಳು ಮಂಜುನಾಥ ಬೇಕರಿ ಗಾಜು ಪುಡಿ ಪುಡಿ ಮಾಡಿ ಅಟ್ಟಹಾಸ ಮೆರೆದಿದ್ದಾರೆ. ಮುಖದ ಗುರುತು ಪತ್ತೆಯಾಗದಂತೆ ಮಾಸ್ಕ್ ಧರಿಸಿ ಬೈಕ್ ನಂಬರ್ ಪ್ಲೇಟ್ ಕಾಣದಂತೆ ಸಗಣಿ ಬಳಿದು ಬಂದಿದ್ದ ಪುಂಡರು ದರ್ಪ ಮೆರೆದಿದ್ದಾರೆ. ಬೈಕ್ ನಲ್ಲಿ ಬಂದವರು ಏಕಾಏಕಿ ಬೇಕರಿಗೆ ನುಗ್ಗಿ ದೊಣ್ಣೆ, ಕಲ್ಲಿನಿಂದ ಶೋಕೆಸ್ ಗಾಜು ಪುಡಿ ಮಾಡಿದ್ದಾರೆ. ಬೇಕರಿ ಪದಾರ್ಥ ಚೆಲ್ಲಿ ಪರಾರಿಯಾಗಿದ್ದಾರೆ. ಘಟನೆ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಎನ್​ಸಿಆರ್ ದಾಖಲಾಗಿದೆ.